ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಂದಾ ಕೊಲೆ ಪ್ರಕರಣ, ತನಿಖಾಧಿಕಾರಿಗೆ ಕಬ್ಬಿಣದ ಕಡಲೆ

By ವಿಕಾಸ್ ನಂಜಪ್ಪ
|
Google Oneindia Kannada News

ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣ ಈಗ ಕೊಲೆ ಎಂದು ಸ್ಪಷ್ಟವಾಗಿದೆ. ಈ ಹತ್ಯೆ ಪ್ರಕರಣದ ತನಿಖೆ ಹತ್ತು ಹಲವು ಆಯಾಯ ಪಡೆದುಕೊಂಡಿದೆ. ಸುನಂದಾ ಸಾವಿಗೆ ಕಾರಣ ಎನ್ನಲಾದ ಅಣು ವಿಕಿರಣ ಘಟಕದ ಉತ್ಪನ್ನ ಪೊಲೊನಿಯಂ 210,ಥಾಲಿಯಂ,ಹಾವಿನ ವಿಷಗಳು ಬಂದಿದ್ದು ಎಲ್ಲಿಂದ? ವಿಧಿ ವಿಜ್ಞಾನ ಇಲಾಖೆ, ಏಮ್ಸ್ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನು ಹೇಳಲಾಗಿದೆ? ತನಿಖೆ ಎತ್ತ ಸಾಗಿದೆ ಎಂಬುದರ ಬಗ್ಗೆ ವರದಿ ಇಲ್ಲಿದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ವಿಧಿ ವಿಜ್ಞಾನ ಇಲಾಖೆಯ ಪ್ರೊಫೆಸರ್, ಪದ್ಮ ಭೂಷಣ ಪಿ ಚಂದ್ರಶೇಖರನ್ ಅವರು ಸುನಂದಾ ಪುಷ್ಕರ್ ಪ್ರಕರಣ ಅಷ್ಟು ಸುಲಭವಾಗಿಲ್ಲ ಎಂದು ಒನ್ ಇಂಡಿಯಾ ಪ್ರತಿನಿಧಿಗೆ ವಿವರಿಸಿದ್ದಾರೆ. ಶವ ಇಲ್ಲದೆ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.

ಪೊಲೊನಿಯಂ 210
ಪರಮಾಣು ರಿಯಾಕ್ಟರ್ ನ ಉತ್ಪನ್ನವಾದ ಪೊಲೊನಿಯಂ 210 ಮೂಲವನ್ನು ಸಂಶೋಧಿಸುವುದು ಅಷ್ಟು ಸುಲಭವಲ್ಲ. ಇಲ್ಲಿ ತನಕದ ತನಿಖೆ ಜಾಡನ್ನು ಹಿಡಿದು ನೋಡಿದರೆ ವಿದೇಶಕ್ಕೆ ದಾರಿ ತೋರಿಸುತ್ತದೆ. [ಸುನಂದಾ ಪುಷ್ಕರ್ ಆತ್ಮಹತ್ಯೆಯಲ್ಲ, ಕೊಲೆ : ಪೊಲೀಸ್]

ಭಾರತದಲ್ಲಿ ಈ ಉತ್ಪನ್ನವನ್ನು ವಿಶ್ಲೇಷಿಸುವುದು ಸಾಧ್ಯವಿದೆ. ಟ್ರಾಂಬೆಯಲ್ಲಿ ಇದಕ್ಕೆ ವ್ಯವಸ್ಥೆಯಿದೆ. ಸಾಮಾನ್ಯವಾಗಿ ವಿಸೇರಾದಲ್ಲಿ ವಿಷ ಹುಡುಕುವಾದ ಪೊಲೊನಿಯಂನಂಥ ವಸ್ತು ಇರುವುದರ ಬಗ್ಗೆ ಯಾರು ಚಿಂತಿಸುವುದಿಲ್ಲ ಅಥವಾ ಈ ಬಗ್ಗೆ ಯೋಚಿಸುವುದೂ ಇಲ್ಲ. ಹೀಗಾಗಿ ಇದು ಕಷ್ಟಕರ ಪ್ರಕರಣವಾಗಿದೆ.

Why Sunanda murder case investigators have a herculean task ahead of them

ಪಾರ್ಥೀವ ಶರೀರ ಇದ್ದಿದ್ದರೆ

ಪಾರ್ಥೀವ ಶರೀರ ಇದ್ದಿದ್ದರೆ ಸಾಕಷ್ಟು ಮಾಹಿತಿ ನಮಗೆ ಸಿಗುತ್ತಿತ್ತು. ಡೆಡ್ ಬಾಡಿ ಎಲ್ಲ ಕಥೆಯನ್ನು ಹೇಳಿಬಿಡುತ್ತದೆ ಕೊಲೆ ಅಥವಾ ಆತ್ಮಹತ್ಯೆ ಎಂಬುದು ಸುಲಭಕ್ಕೆ ತಿಳಿದು ಬರುತ್ತದೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲೂ ಮಾನವ ಬಾಂಬರ್ ಬಳಕೆಯಾಗಿದ್ದರಿಂದ ನಮ್ಮ ಗಮನ ಮೃತದೇಹ ಕಲೆ ಹಾಕುವತ್ತಲೇ ಇತ್ತು. ಮೃತ ದೇಹ ಇದ್ದರೆ ಇಂಥ ಪ್ರಕರಣದಲ್ಲಿ ತನಿಖೆ ಮುಂದುವರೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ತುಂಬಾ ಕಷ್ಟಕರ.

ಅದರಲ್ಲೂ ವಿಕಿರಣ ಉತ್ಪನ್ನಗಳ ಬಗ್ಗೆ ಮಾಹಿತಿ ಸಿಗದ ಕಾರಣ ಬೇರೆ ಸಾಕ್ಷಿಗಳತ್ತ ತನಿಖೆ ನಡೆಸಬೇಕಾಗುತ್ತದೆ. ಪೊಲೊನಿಯಂ ಮೂಲ ಎಲ್ಲಿ? ಅದನ್ನು ಯಾರು ತಂದರು? ಇತ್ಯಾದಿ ಸದ್ಯಕ್ಕೆ ಈ ಪ್ರಕರಣ ಈ ಜಾಡಿನಲ್ಲೇ ಸಾಗಬೇಕಿದೆ. [ಸುನಂದಾ ಕೊಲೆ ದೃಢಪಡಿಸಿದ್ದು ಗಾಯ ಸಂ. 10]

ವೈದ್ಯಕೀಯ ವರದಿ ಪೊಲೊನಿಯಂ 210

ಮೃತದೇಹದಲ್ಲಿ ಪೊಲೊನಿಯಂ 210 ಇದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಗೆ ನಿರ್ಣಯಕ್ಕೆ ಬಂದರು ಎಂಬುದರ ಬಗ್ಗೆ ವಿವರಣೆ ಅಗತ್ಯವಿದೆ. ಏಕೆಂದರೆ ಸುಲಭಕ್ಕೆ ಪೊಲೊನಿಯಂ ಇರುವಿಕೆ ಪತ್ತೆಯಾಗುವುದಿಲ್ಲ.

ಮೊದಲಿಗೆ ದೇಹದಲ್ಲಿನ ಪರಮಾಣು ಚಟುವಟಿಕೆಯನ್ನು ಸಾಧನವೊಂದರ ಮೂಲಕ ಪರೀಕ್ಷಿಸಬೇಕು. ಗಾಮಾ ಪದಾರ್ಥವಾದರೆ ಸುಲಭಕ್ಕೆ ನಿಮ್ಮ ಎಣಿಕೆಗೆ ಸಿಗುತ್ತದೆ. ಆಲ್ಫಾ ಕಣಗಳಾದರೆ ಅಳೆಯುವುದು ತುಂಬಾ ಕಷ್ಟ.ಹೀಗಾಗಿ ವಿಸೇರಾದಲ್ಲಿ ಕಂಡು ಬಂದಿರುವ ಪದಾರ್ಥಗಳ ಬಗ್ಗೆ ಸಮಗ್ರ ಪರಿಶೀಲನೆ ಅಗತ್ಯ. ಇದು ತನಿಖಾಧಿಕಾರಿಗಳಿಗೆ ಕಬ್ಬಿಣದ ಕಡಲೆಯಾಗಬಲ್ಲದು.

English summary
The police investigating the case as a murder are also trying to ascertain the use of several substances such as Polonium 210, Thallium, snake venom among others which could have possibly caused her death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X