ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ

By Mahesh
|
Google Oneindia Kannada News

ನವದೆಹಲಿ, ಅ.29: ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದ ನರೇಂದ್ರ ಮೋದಿ ಅವರ ಎನ್ಡಿಎ ಸರ್ಕಾರ ಈಗ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ ಏರಿಕೆ ಮಾಡಿದೆ. ಡೀಲರ್ ಗಳಿಗೆ ನೀಡುವ ಕಮಿಷನ್ ದರ ಏರಿಕೆ ಮಾಡಿರುವುದರಿಂದ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಅನಿವಾರ್ಯ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

14.2 ಕೆ.ಜಿ ತೂಕದ ಸಬ್ಸಿಡಿಸಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪ್ರತಿ ಸಿಲಿಂಡರ್ ಗೆ 3 ರು ನಂತೆ ಏರಿಕೆ ಮಾಡಲಾಗಿದೆ. ಕಳೆದ ವಾರ ಡೀಲರ್ ಗಳಿಗೆ ಪ್ರತಿ ಸಿಲಿಂಡರ್ ಗಳಿಗೆ ನೀಡಲಾಗುವ ಕಮಿಷನ್ ದರವನ್ನು 43.71 ರು ಗೆ ಏರಿಕೆ ಮಾಡಲಾಗಿತ್ತು. 2013ರ ಡಿಸೆಂಬರ್ ನಂತರ ಕಮಿಷನ್ ದರ ಏರಿಕೆ ಮಾಡಿರಲಿಲ್ಲ.

LPG rate hiked by Rs 3 per cylinder

ಡೀಲರ್ ದರ ಏರಿಕೆಯಿಂದಾಗಿ ಸಬ್ಸಿಡಿ ರಹಿತ ಸಿಲಿಂಡರೆ ಬೆಲೆ ಕೂಡಾ ಏರಿಕೆಯಾಗಲಿದೆ.12 ಸಿಲಿಂಡರ್ ಗಳ ಕೋಟಾ ಮುಗಿದ ನಂತರ ಕೊಳ್ಳಲಿರುವ ಪ್ರತಿ ಸಿಲಿಂಡರ್ ಬೆಲೆ 883.50 ರು ಆಗಲಿದೆ. ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 405 ರಿಂದ 425 ರ ತನಕ ಇದೆ. [ಸಬ್ಸಿಡಿ ರಹಿತ ಎಲ್ಪಿಜಿ ಬೆಲೆ ಏರಿಕೆ]

ಪರಿಷ್ಕೃತ ದರ ಪಟ್ಟಿ:

* ದೆಹಲಿ: 417 ರು / ಸಿಲಿಂಡರ್
* ಕೋಲ್ಕತ್ತಾ: 419 ರು / ಸಿಲಿಂಡರ್
* ಮುಂಬೈ: 452 ರು / ಸಿಲಿಂಡರ್
* ಚೆನ್ನೈ: 404.50 ರು / ಸಿಲಿಂಡರ್
* ಬೆಂಗಳೂರು: 422 ರು / ಸಿಲಿಂಡರ್

ತಿಂಗಳಿಗೆ ಒಂದು ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ನಿರ್ಬಂಧವನ್ನು ಕೇಂದ್ರ ಸರ್ಕಾರ ಕಳೆದ ಆಗಸ್ಟ್ ತಿಂಗಳಿನಲ್ಲಿ ಹಿಂತೆಗೆದುಕೊಂಡಿತ್ತು. ಇದರಿಂದಾಗಿ ವರ್ಷದಲ್ಲಿ ಯಾವಾಗ ಬೇಕಾದರೂ 12 ಸಬ್ಸಿಡಿ ಸಿಲಿಂಡರ್‌ಗಳನ್ನು ಗ್ರಾಹಕರು ಪಡೆಯಬಹುದಾಗಿದೆ. [ವಿವರ ಇಲ್ಲಿದೆ]
(ಪಿಟಿಐ)

English summary
Subsidised cooking gas rates have been hiked by Rs 3 per cylinder after the government raised the commission paid to dealers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X