ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿವಿ ನರಸಿಂಹ ರಾವ್ ಗೆ ಭಾರತ ರತ್ನ ನೀಡಿ: ಸ್ವಾಮಿ

By Mahesh
|
Google Oneindia Kannada News

ನವದೆಹಲಿ, ಡಿ.24: ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ದಿವಂಗತ ಪಿ.ವಿ.ನರಸಿಂಹರಾವ್ ಅವರಿಗೆ ಭಾರತರತ್ನ ನೀಡುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ. ನರಸಿಂಹರಾವ್ ಅವರ 10ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಸುಬ್ರಮಣ್ಯಸ್ವಾಮಿ ಹೀಗೊಂದು ಬೇಡಿಕೆ ಇಟ್ಟಿದ್ದಾರೆ.

ನರಸಿಂಹರಾವ್ ಅವರು ದೇಶದಲ್ಲಿ ಆರ್ಥಿಕ ಪ್ರಗತಿ ತಂದರು ಮತ್ತು ಆರ್ಥಿಕ ಪ್ರಗತಿಗೆ ಬೇಕಾದ ಉತ್ತಮ ಯೋಜನೆಗಳನ್ನು ರೂಪಿಸಿದ್ದರು. ದೇಶವನ್ನು ಆರ್ಥಿಕ ಪ್ರಗತಿಗೆ ತಂದ ನರಸಿಂಹರಾವ್ ಅವರಿಗೆ ದೇಶದ ಅತ್ಯುನ್ನತ ಗೌರವ ಸಲ್ಲಬೇಕು. ಅವರಿಗೆ ಭಾರತರತ್ನ ಪ್ರಶಸ್ತಿ ಸಲ್ಲಬೇಕು ಎಂದು ಸುಬ್ರಮಣ್ಯ ಸ್ವಾಮಿ ಹೇಳಿದರು.

Subramanian Swamy demands Bharat Ratna for P V Narasimha Rao

ಪಿ.ವಿ.ನರಸಿಂಹರಾವ್ ನೆಹರು ಮತ್ತು ಗಾಂಧಿ ಕುಟುಂಬದವರಲ್ಲದ ಮೊದಲ ಕಾಂಗ್ರೆಸ್ ಪ್ರಧಾನಿ. 1991 ರಿಂದ 1996ರ ವರೆಗೆ ಪ್ರಧಾನಿಯಾಗಿ ನರಸಿಂಹರಾವ್ ಪೂರ್ಣಾವಧಿ ಪೂರೈಸಿದ್ದರು. 2004 ಡಿಸೆಂಬರ್ 23 ರಂದು ನರಸಿಂಹರಾವ್ ವಿಧಿವಶರಾಗಿದ್ದರು.

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್, ಶಿಕ್ಷಕ ತಜ್ಞ ಮದನ್ ಮೋಹನ್ ಮಾಳವೀಯ, ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರಿಗೂ ಭಾರತ ರತ್ನ ಪ್ರಶಸ್ತಿ ಮರಣೋತ್ತರವಾಗಿ ಲಭಿಸುವ ಸುದ್ದಿ ಹಬ್ಬಿತ್ತು.


ಇದಾದ ಬೆನ್ನಲ್ಲೇ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರ 'ಭಾರತ ರತ್ನ' ಪದಕಗಳನ್ನು ತಯಾರಿಸಿಕೊಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ನರೇಂದ್ರ ಮೋದಿ ಸರ್ಕಾರ ಕೇಳಿಕೊಂಡಿತ್ತು.

ಬಿಜೆಪಿ ಹಿರಿಯ ನಾಯಕ,ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮದನ್ ಮೋಹನ್ ಮಾಳವೀಯಾ ಅವರಿಗೆ ಭಾರತ ರತ್ನ ನೀಡುವುದರ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಬುಧವಾರ ಪ್ರಕಟಿಸಲಿದೆ.

ಯುಪಿಎ 2 ಸರ್ಕಾರ ತನ್ನ ಅವಧಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ವಿಜ್ಞಾನಿ, ಕನ್ನಡಿಗ ಪ್ರೊ.ಸಿ.ಎನ್ ಆರ್ ರಾವ್ ಅವರಿಗೆ ಭಾರರ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)

English summary
BJP leader Subramanian Swamy today demanded country's highest civilian award Bharat Ratna for former Prime Minister P V Narasimha Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X