ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ : ಮಧ್ಯರಾತ್ರಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಜೊತೆ ರಾಹುಲ್

|
Google Oneindia Kannada News

ಹೈದರಾಬಾದ್, ಜ 30: ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿವಿ ವಿದ್ಯಾರ್ಥಿ ರೋಹಿತ್ ಮೇಮುಲ ಜನ್ಮದಿನದ ಸ್ಮರಣಾರ್ಥ ನಡೆಯುತ್ತಿರುವ ಪ್ರತಿಭಟನೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಶುಕ್ರವಾರ (ಜ 29) ತಡರಾತ್ರಿ ನಗರಕ್ಕೆ ಆಗಮಿಸಿ ಸಾಥ್ ನೀಡಿದ್ದಾರೆ.

ರೋಹಿತ್ ಕುಟುಂಬದವರು ಮತ್ತು ಹೈದರಾಬಾದ್ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ರೋಹಿತ್ ಜನ್ಮದಿನದ ಪ್ರಯುಕ್ತ ಶುಕ್ರವಾರ ರಾತ್ರಿ ಕ್ಯಾಂಡಲ್ ಮಾರ್ಚ್ ಪ್ರತಿಭಟನೆ ಮತ್ತು ಶನಿವಾರ ಬೆಳಗ್ಗೆ ಆರರಿಂದ ಹನ್ನೆರಡು ತಾಸಿನ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. (ವಿದ್ಯಾರ್ಥಿ ಆತ್ಮಹತ್ಯೆ, ಜಾತಿ ಬೆಂಕಿಗೆ ರಾಜಕೀಯ ತುಪ್ಪ)

ಶುಕ್ರವಾರ ತಡರಾತ್ರಿ ಕೇಂದ್ರಿಯ ವಿಶ್ವವಿದ್ಯಾಲಯಕ್ಕೆ ಆಗಮಿಸಿದ ರಾಹುಲ್ ಗಾಂಧಿ, ಸಾವಿರಾರು ವಿದ್ಯಾರ್ಥಿಗಳ ಜೊತೆ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉಪಕುಲಪತಿಯವರನ್ನು ವಜಾಗೊಳಿಸಬೇಕು ಮತ್ತು ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಬಂಡಾರು ದತ್ತಾತ್ರೇಯ ರಾಜೀನಾಮೆಗೆ ಪ್ರತಿಭಟನೆಗಾರರು ಆಗ್ರಹಿಸುತ್ತಿದ್ದಾರೆ.

ವಿದ್ಯಾರ್ಥಿ ಆತ್ಯಹತ್ಯೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಎರಡನೇ ಬಾರಿ ರಾಹುಲ್ ಗಾಂಧಿ ಆಗಮಿಸುವುದರೊಂದಿಗೆ, ಪ್ರಕರಣ ಇನ್ನಷ್ಟು ರಾಜಕೀಯ ಬಣ್ಣ ಪಡೆದುಕೊಂಡಿದೆ.

ವಿಶ್ವವಿದ್ಯಾಲಯದ ಉಪ ಕುಲಪತಿ ಅಪ್ಪಾ ರಾವ್ ರಜೆಯ ಮೇಲೆ ತೆರಳಿದ್ದರಿಂದ, ಮಧ್ಯಂತರ ವಿಸಿಯಾಗಿ ವಿಪಿನ್ ಶ್ರೀ ವಾತ್ಸವ್ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ವಿಪಿನ್ ಶ್ರೀ ವಾತ್ಸವ್ ಕೂಡಾ ರಜೆಯ ಮೇಲೆ ತೆರಳಿದ್ದಾರೆ. (ರೋಹಿತ್ ಸಾವು, ಸ್ಮೃತಿ ರಾಜೀನಾಮೆಗೆ ಆಗ್ರಹ)

ವಿಶ್ವವಿದ್ಯಾಲಯದ ಆವರಣದಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ಮಾಡುವ ಮೂಲಕ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಿ ಎಬಿವಿಪಿ ಕೂಡಾ ಪ್ರತಿಭಟನೆ ನಡೆಸುತ್ತಿದೆ. ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಮಧ್ಯರಾತ್ರಿ ಹೈದರಾಬಾದಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಕೆಲವೊಂದು ಪ್ರತಿಕ್ರಿಯೆಗಳು ಹೀಗಿವೆ..

ರಾಹುಲ್ ಗಾಂಧಿ

ರಾಹುಲ್ ಗಾಂಧಿ ಮುಖದಲ್ಲಿ ನಗುವಿದೆ. ಇವರು ರೋಹಿತ್ ಸಾವಿಗೆ ಸಂತೋಷ ವ್ಯಕ್ತ ಪಡಿಸುತ್ತಿದ್ದಾರೆ.

ಜಾತಿ ಪಾಲಿಟಿಕ್ಸ್

ಜಾತಿಜಾತಿ ಮಧ್ಯೆ ಕಂದಕ ಸೃಷ್ಟಿಸುವ ಡರ್ಟಿ ಪಾಲಿಟಿಕ್ಸ್.

ಬಿಜೆಪಿ ಪ್ರತಿಕ್ರಿಯೆ

ಬಿಜೆಪಿ ಪ್ರತಿಕ್ರಿಯೆ

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯ ವಿಚಾರದಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಹೇಸಿಗೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ರಾಹುಲ್ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಿ ತೆಲಂಗಾಣದ ಎಲ್ಲಾ ಕಾಲೇಜ್ ಬಂದ್ ಮಾಡಲು ನಾವು ಎಬಿವಿಪಿ ಕರೆಕೊಟ್ಟಿದೆ.

ಸಂಗ್ಮಾ ಸಾಥ್

ರಾಹುಲ್ ಗಾಂಧಿ ಭಾಗಿಯಾಗಿರುವ ಪ್ರತಿಭಟನೆಗೆ ಲೋಕಸಭೆಯ ಮಾಜಿ ಸ್ಪೀಕರ್ ಪಿ ಎ ಸಂಗ್ಮಾ ಕೂಡಾ ಸಾಥ್ ನೀಡಿದ್ದಾರೆ.

ಆಗ ಯಾಕೆ ರಾಹುಲ್ ಬಂದಿರಲಿಲ್ಲ

ಸೆಂಥಿಲ್ ಎನ್ನುವ ವಿದ್ಯಾರ್ಥಿ ಯುಪಿಎ ಸರಕಾರದ ಅವಧಿಯಲ್ಲಿ ಸಾವನ್ನಪ್ಪಿದಾಗ ರಾಹುಲ್ ಗಾಂಧಿ ಯಾಕೆ ಹೈದರಾಬಾದಿಗೆ ಆಗಮಿಸಿರಲಿಲ್ಲ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಕನಸು ತುಂಬಿಕೊಂಡಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ನೋವಿನ ವಿಚಾರ. ನಿಮ್ಮ ಪ್ರತಿಭಟನೆಗೆ ಸಾಥ್ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ. ಮಹಾತ್ಮ ಗಾಂಧಿ ಆಶಯದಂತೆ ಪ್ರತಿಯೊಬ್ಬ ಭಾರತೀಯನಿಗೂ ತನ್ನ ಹಕ್ಕು ಸಿಗುವಂತಾಗಬೇಕು ಎಂದು ರಾಹುಲ್ ಗಾಂಧಿ ಪ್ರತಿಭಟನಾ ಸಭೆಯಲ್ಲಿ ಹೇಳಿದ್ದಾರೆ.

English summary
Student suicide in Hyderabad : AICC Vice President Rahul Gandhi sits on hunger strike with students and family members of Rohith Vemula.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X