ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಮುಷ್ಕರ : ಯಾವ ಬ್ಯಾಂಕ್ ಕಾರ್ಯನಿರ್ವಹಿಸುತ್ತಿವೆ

By ವಿಕಾಸ
|
Google Oneindia Kannada News

ಬೆಂಗಳೂರು, ಫೆಬ್ರವರಿ 28 : ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ರಾಷ್ಟ್ರದಾದ್ಯಂತ 9 ಬ್ಯಾಂಕ್ ಯೂನಿಯನ್ ಗಳು ಕರೆದಿರುವ ಮುಷ್ಕರದಿಂದಾಗಿ ಶೇ.75ರಷ್ಟು ಬ್ಯಾಂಕ್ ಗಳು ಮಂಗಳವಾರ ವಹಿವಾಟು ನಿಲ್ಲಿಸಿರುತ್ತವೆ.

ಖಾಸಗಿ ಬ್ಯಾಂಕುಗಳಾದ ಐಸಿಐಸಿಐ, ಎಚ್‌ಡಿಎಫ್‌ಸಿ, ಕೊಟಕ್ ಮಹೀಂದ್ರ, ಆಕ್ಸಿಸ್ ಬ್ಯಾಂಕ್ ಮುಂತಾದವುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಎಲ್ಲ ವಹಿವಾಟುಗಳು ಎಂದಿನಂತೆ ಇರುತ್ತವೆ. ಆದರೆ, ಉಳಿದ ಬ್ಯಾಂಕ್ ಗಳು ಮುಷ್ಕರ ನಿರತವಾಗಿರುವುದರಿಂದ ಚೆಕ್ ಕ್ಲಿಯರನ್ಸ್ ಈ ಬ್ಯಾಂಕ್ ಗಳಲ್ಲಿ ಇರುವುದಿಲ್ಲ.[ಫೆಬ್ರವರಿ 28ರಂದು ದೇಶವ್ಯಾಪ್ತಿ ಬ್ಯಾಂಕ್ ಮುಷ್ಕರ]

Strike: Which banks are open today and what services are available

ಈ ಮುಷ್ಕರದಿಂದಾಗಿ ದೈನಂದಿನ ಬ್ಯಾಂಕ್ ಚಟುವಟಿಕೆಗಳು ಇರುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮುಂತಾದವುಗಳು ಮುಂಚಿತವಾಗಿಯೇ ತಮ್ಮ ಗ್ರಾಹಕರಿಗೆ ತಿಳಿಸಿವೆ.

ಬ್ಯಾಂಕ್ ಒಕ್ಕೂಟದಲ್ಲಿರುವ ಭಾರತೀಯ ಮಜದೂರ್ ಸಂಘದ ಅಂಗಸಂಸ್ಥೆಗಳಾದ ಬ್ಯಾಂಕ್ ಕಾರ್ಮಿಕರ ರಾಷ್ಟ್ರೀಯ ಒಕ್ಕೂಟ ಮತ್ತು ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಒಕ್ಕೂಟಗಳು ಈ ಮುಷ್ಕರದಲ್ಲಿ ಪಾಲ್ಗೊಂಡಿಲ್ಲ.

ಸಾಲ ವಂಚಕರಿಂದ ಸಾಲ ವಸೂಲಿ, ವಂಚಕರನ್ನು ಹೊಣೆಗಾರರನ್ನಾಗಿ ಮಾಡುವುದು ಮತ್ತು ಮರುಪಾವತಿಸುವುದನ್ನು ತಪ್ಪಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂಬ ಆಗ್ರಹ ಮುಂದಿಟ್ಟುಕೊಂಡು ಮುಷ್ಕರ ಹೂಡಲಾಗಿದೆ. ಒಟ್ಟು 10 ಲಕ್ಷಕ್ಕೂ ಹೆಚ್ಚು ನೌಕರರು ಹರತಾಳದಲ್ಲಿ ಭಾಗವಹಿಸುತ್ತಿದ್ದಾರೆ.

ಕಾರ್ಮಿಕ ಆಯುಕ್ತರೊಂದಿಗೆ ಫೆಬ್ರವರಿ 21ರಂದು ಬ್ಯಾಂಕ್ ಒಕ್ಕೂಟದ ಮುಖಂಡರು ನಡೆಸಿದ ಮಾತುಕತೆ ವಿಫಲವಾಗಿತ್ತು. ಆದಕಾರಣ, ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ನೌಕರರು ಮುಷ್ಕರನಿರತರಾಗಿದ್ದಾರೆ. ಇದರಲ್ಲಿ ಕಾರಕೂನರಿಂದ ಹಿಡಿದು ಹಿರಿಯ ಅಧಿಕಾರಿಗಳು ಕೂಡ ಭಾಗವಹಿಸುತ್ತಿದ್ದಾರೆ.

English summary
Nearly 75 per cent of the banking services will be hit today owing to the strike call given by most unions under the Union Forum of Bank Unions. While most of the banks would go on strike on Tuesday, top private lenders such as the ICICI, HDFC, Kotak Mahindra Bank and Axis bank would function normally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X