ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕೆ ಅಪ್ರತಿಮ ಸುಂದರಿ: ಆದರೆ ವೇಶ್ಯೆಯರ ಊರಿನವಳು ಎನ್ನುವ ಕಪ್ಪುಚುಕ್ಕೆ!

By ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ
|
Google Oneindia Kannada News

ಆಕೆಯ ಹೆಸರು ಚಂದ್ರಲೇಖ, ಉತ್ತಮ ನೃತ್ಯಗಾರ್ತಿ ಮತ್ತು ತುಂಬಾ ರೂಪವತಿ ಕೂಡಾ. ಆಕೆ ತಮ್ಮ ಕುಟುಂಬದ ಸಾಂಪ್ರದಾಯಿಕ ನೃತ್ಯಗಳನ್ನು ಮಾಡುತ್ತಾ ಜನರನ್ನು ರಂಜಿಸುತ್ತಿದ್ದಳು. ಆದರೆ ಆಕೆಯ ಮೇಲೆ ಕಣ್ಣು ಹಾಕಿದ ಸ್ಥಿತಿವಂತ ವಿಟಪುರುಷರು ಆಕೆಯನ್ನು ಸೆರಗು ಹಾಸುವಂತೆ ಹೇಳುತ್ತಾರೆ.

ಆಕೆ ಅದಕ್ಕೆ ಒಪ್ಪದಿದ್ದಾಗ ನೀನು ವೇಶ್ಯೆಯರ ಊರವಳು, ನಿನಗೆ ಅಪ್ಪ ಯಾರು ಅಂತ ತಿಳಿದಿದೆಯೋ ಅದೂ ಇಲ್ಲ, ನೀನು ಅದೇನೇ ಮಾಡಿದರೂ ನಿನ್ನ ಊರಿನ ಸಂಪ್ರದಾಯ ಬಿಡಬಾರದು ಎಂದು ಹೆದರಿಸುತ್ತಾರೆ. ತನ್ನ ಮನೆಯವರೂ ಇದನ್ನೇ ಹೇಳಿದಾಗ ಕಡೆಗೆ ಆಕೆ ಶರಣಾಗಿಬಿಡುತ್ತಾಳೆ. ಏನದು ಸಂಪ್ರದಾಯ, ಆ ಹಳ್ಳಿ ಯಾವುದು? ಮುಂದೆ ಓದಿ.. (ಅಮಲಲ್ಲಿ ವೇಶ್ಯೆಯ ಸಂಗ,ಪಂಗನಾಮ)

ವ್ಯೇಶ್ಯೆಯರ ಊರು ಎಲ್ಲಿದೆ ಎಂಬ ಕುತೂಹಲ ಇರಬಹುದು. ವಿದೇಶಗಳಲ್ಲಿ ಬನ್ ಗಾಗಿ ವೇಶ್ಯಾವಾಟಿಕೆಗೆ ಇಳಿದ ಉದಾಹರಣೆಗಳು ಅಥವಾ ಪ್ರವಾಸಿ ತಾಣಗಳ ಹೆಸರಲ್ಲಿ ನಡೆಯುವ ವೇಶ್ಯಾವಾಟಿಕೆಗಳ ಬಗ್ಗೆ ನಿಮಗೆ ಗೊತ್ತಿರಬಹುದು.

ಆದರೆ ಈ ವೇಶ್ಯೆಯರ ಊರು ಇರುವುದು ಎಲ್ಲೋ ವಿದೇಶದಲ್ಲಿ ಅಲ್ಲ. ಬದಲಿಗೆ ನಾರಿಯನ್ನು ಶ್ರೇಷ್ಠ ಭಾವನೆಯಿಂದ ಕಾಣಬೇಕು ಅಂತಾ ಪ್ರತಿಪಾದಿಸುತ್ತಾ ಬಂದ ಭಾರತದಲ್ಲಿ! ಉತ್ತರಪ್ರದೇಶ ನಾತ್ ಪೂರ್ವ ಎಂಬ ಹಳ್ಳಿಯನ್ನು 'ವೇಶ್ಯೆಯರ ಊರು' ಎಂದು ಕರೆಯುತ್ತಾರೆ. ಸುಮಾರು ಐದು ಸಾವಿರ ಜನಸಂಖ್ಯೆ ಇರುವ ಈ ಹಳ್ಳಿಯಲ್ಲಿ ಎಲ್ಲಾ ಮಹಿಳೆಯರು ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಂಡವರು.

ದೊಡ್ಡ ಊರಿನ ಸಣ್ಣ ಪ್ರದೇಶವೊಂದರಲ್ಲಿ ವೇಶ್ಯೆಯರು ಇರುವುದನ್ನು ನೀವು ಕೇಳಿರಬಹುದು, ಉದಾಹರಣೆಗೆ ಮುಂಬೈಯ ಕಾಮಾಟಿಪುರ, ಗುಜರಾತಿನ ವಾಡಿಯಾ, ವಾರಣಾಸಿಯ ಶಿವದಾಸಪುರ, ದೆಹಲಿಯ ಜಿಬಿ ರೋಡ್, ಕೊಲ್ಕತ್ತಾದ ಶೋನಾಗಚಿ ಇತ್ಯಾದಿ. ಆದರೆ ಒಂದು ಹಳ್ಳಿ ಪೂರ್ತಿ ವೇಶ್ಯೆಯರಿಂದಲೇ ತುಂಬಿದೆ ಅಂದರೆ ಅದು ನಿಜಕ್ಕೂ ಆತಂಕಕಾರಿ. (ಖಾಸಗಿ ಶಾಲೆಗಳು ವೇಶ್ಯಾವಾಟಿಕೆಯ ಅಡ್ಡೆ)

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ. (ಮೂಲ ಮಾಹಿತಿ: ಅಲ್ ಜಜೀರಾ, ಲೇಖನಕ್ಕೆ ಸಾಂದರ್ಭಿಕ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ)

ಗಂಡಸರು ಜೀತದಾಳುಗಳು

ಗಂಡಸರು ಜೀತದಾಳುಗಳು

400 ವರ್ಷಗಳ ಹಿಂದೆ ಇಲ್ಲಿ ಆಡಳಿತ ನಡೆಸುತ್ತಿದ್ದವರು, ಈ ಹಳ್ಳಿಯವರು ಮಾಡಿಕೊಂಡು ಬರುತ್ತಿದ್ದ ನೃತ್ಯಕ್ಕೆ ನಿಷೇಧ ಹೇರಿದ್ದರಿಂದ ಹಾಗೂ ಮನೆಯ ಗಂಡಸರನ್ನು ಬಲವಂತವಾಗಿ ಜೀತದಾಳುಗಳಾಗಿ ಒತ್ತೆಯಿರಿಸಿದ್ದರಿಂದ ಇವರಿಗೆ ಒಂದು ಹೊತ್ತಿನ ಊಟಕ್ಕೂ ಸಮಸ್ಯೆ ಎದುರಾಯಿತು.

ಸಂಪ್ರದಾಯ ಎಂದು ನಂಬಿಸಲಾಯಿತು

ಸಂಪ್ರದಾಯ ಎಂದು ನಂಬಿಸಲಾಯಿತು

ಆಗ ಯಾರದ್ದೋ ಬಲವಂತಕ್ಕೆ ಮಣಿದು ಈ ಅನಿಷ್ಟ ವ್ಯವಸ್ಥೆಗೆ ದಾಸರಾದ ಇವರಿಗೆ, ದಿನ ಕಳೆದಂತೆ ಅದೊಂದು ಸಂಪ್ರದಾಯ ಅಂತಾ ನಂಬಿಸಲಾಯಿತು. ತಲೆಮಾರಿನಿಂದ ತಲೆಮಾರಿಗೆ ಇದು ಹರಡುತ್ತಲೇ ಹೋಯಿತು.

ಅಪ್ಪ ಯಾರೆಂಬುದು ಗೊತ್ತಿಲ್ಲ

ಅಪ್ಪ ಯಾರೆಂಬುದು ಗೊತ್ತಿಲ್ಲ

ಈ ಗ್ರಾಮದಲ್ಲಿರುವ ಹೊಸ ತಲೆಮಾರಿಗೆ , ಅಪ್ಪ ಯಾರೆಂಬುದು ಗೊತ್ತಿಲ್ಲ ಯಾಕೆಂದರೆ ಎಲ್ಲರೂ ವೇಶ್ಯೆಯರ ಮಕ್ಕಳು. ಶಿಕ್ಷಣ ಎಂಬುದು ಇಲ್ಲವೇ ಇಲ್ಲ. ಒಂದುವೇಳೆ ಯಾರಾದರೂ ಹೆಣ್ಣುಮಕ್ಕಳು ವಿರೋಧ ತೋರಿದರೆ ಅವರಿಗೆ ಸಂಪ್ರದಾಯ ಮುರಿಯಬಾರದು ಎಂಬ ಭಯ ಹುಟ್ಟಿಸಲಾಗುತ್ತದೆ. ಶಿಕ್ಷಣ ಇಲ್ಲದ ಹೆಣ್ಣು ಮಕ್ಕಳು ಬೇರೆ ದಾರಿಯಿಲ್ಲದೇ ವೇಶ್ಯಾವಾಟಿಕೆಗೆ ಇಳಿಯುತ್ತಾರೆ.

ಇವರೆಲ್ಲಾ ಹಿಂದೂಗಳು

ಇವರೆಲ್ಲಾ ಹಿಂದೂಗಳು

ಇವರೆಲ್ಲಾ ಹಿಂದೂಗಳು ಆದರೆ ಹಿಂದೂಗಳ ರಕ್ಷಣೆಯ ಬಗ್ಗೆ ಭಾಷಣ ಬಿಗಿಯುವವರೂ ಇವರ ರಕ್ಷಣೆಗೆ ಬಂದಿಲ್ಲ. ಇವರು ದಲಿತರೂ ಹೌದು , ದಲಿತರೋದ್ದಾರಕ ಸಂಘಟನೆಗಳು ಅಥವಾ ರಾಜಕೀಯ ನೇತಾರರ ಕಣ್ಣಿಗೂ ಇವರು ಬಿದ್ದಿಲ್ಲ. ಅದರೆ ಕೆಲ ವರ್ಷದ ಹಿಂದೆ "ಆಶಾ "ಎಂಬ NGO ಕಾರ್ಯಕರ್ತರ ಗಮನಕ್ಕೆ ಬಂದಿದ್ದರಿಂದ , ಅಲ್ಲಿ ಅವರು ಈಗ ಸುಧಾರಣಾ ಕ್ರಮಗಳನ್ನು ತರಲು ಯತ್ನಿಸುತ್ತಿದ್ದಾರೆ .

NGO ಸಂಘಟನೆ

NGO ಸಂಘಟನೆ

ಈ NGO ಸಂಘಟನೆಯವರು ಅನೇಕ ಮಹಿಳೆಯರನ್ನು ವೇಶ್ಯಾವಾಟಿಕೆಯಿಂದ ವಿಮುಖರಾಗಿಸುತ್ತಿದ್ದಾರೆ. ಜೊತೆಗೆ ಆ ಹಳ್ಳಿಯ ಪುಟ್ಟ ಮಕ್ಕಳಿಗೆ ಶಿಕ್ಷಣವನ್ನೂ ಕೊಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಲೆಯೊಂದನ್ನು ತೆರೆಯಲಾಗಿದೆ.

ಟಿವಿ ವಾಹಿನಿಯ ಸಂದರ್ಶನ

ಟಿವಿ ವಾಹಿನಿಯ ಸಂದರ್ಶನ

ಟಿವಿ ವಾಹಿನಿಯವರು ಸಂದರ್ಶನ ನಡೆಸುವಾಗ ಪುಟ್ಟ ಹುಡುಗಿಯೊಂದು, ನಾನು ಡಾಕ್ಟರ್ ಆಗುತ್ತೀನಿ.. ಮತ್ತೆ ಚಿಕಿತ್ಸೆ ಕೊಡಿಸುತ್ತೀನಿ ಎಂದು ತನ್ನ ತೊದಲು ನುಡಿಗಳಲ್ಲಿ ಹೇಳುವಾಗ ಒಂದು ಬಾರಿ ಕಣ್ಣು ತೇವವಾದ ಅನುಭವವಾಗುತ್ತದೆ. ಇದಕ್ಕೂ ಮೊದಲು ಇಂತಹ ಮುಗ್ದರೇ ತಾನೇ, ನಮ್ಮ ಸಮಾಜದಲ್ಲಿರುವ ಕಾಮುಕರ ಬಾಯಿಗೆ ಆಹಾರವಾದವರು.

ಆಹಾರ ಸಂಪಾದನೆಗೆ ಪರ್ಯಾಯ ದಾರಿ

ಆಹಾರ ಸಂಪಾದನೆಗೆ ಪರ್ಯಾಯ ದಾರಿ

ಈಗಾಗಲೇ ತೊಡಗಿರುವ ಮಹಿಳೆಯರನ್ನು ವೇಶ್ಯಾವೃತ್ತಿಯಿಂದ ಬಿಡಿಸುವುದು ಸುಲಭದ ಕೆಲಸವೇನು ಅಲ್ಲ. ಯಾಕೆಂದರೆ ಅವರ ಆಹಾರ ಸಂಪಾದನೆಗೆ ಪರ್ಯಾಯ ದಾರಿಯನ್ನು ಮಾಡಬೇಕು. ಜೊತೆಗೆ ಒಂದು ಬಾರಿ ವೇಶ್ಯಾವೃತ್ತಿಗೆ ಇಳಿದವಳನ್ನು ಸಮಾಜ ಗೌರವಯುತವಾಗಿ ಕಾಣುವುದು ಅಷ್ಟರಲ್ಲಿಯೇ ಇದೆ.

ವೇಶ್ಯೆಯರ ಹಳ್ಳಿಯವಳಲ್ಲವೇ

ವೇಶ್ಯೆಯರ ಹಳ್ಳಿಯವಳಲ್ಲವೇ

ಅವರ ಜೀವನವಂತೂ ಹಾಳಾಯಿತು, ಆದರೆ ಮುಂದೆ ಶಿಕ್ಷಣ ಪಡೆದು ಆ ಗ್ರಾಮದಿಂದ ಮುಂದೆ ಬರುವ ಆ ಮಕ್ಕಳ ಬಳಿ ನಿಮ್ಮ ಅಪ್ಪ ಯಾರು? ಅಥವಾ ನೀನು ಆ ವೇಶ್ಯೆಯರ ಹಳ್ಳಿಯವಳಲ್ಲವೇ ? ಎಂದು ಮತ್ತೆ ಮತ್ತೆ ಚುಚ್ಚಿ ಅವರ ಮನಸ್ಸಿಗೆ ಗಾಯ ಮಾಡಿದರೆ, ಅವರು ಮಾನಸಿಕ ಖಿನ್ನತೆಗೆ ಒಳಗಾಗಲೂ ಬಹುದು.

ಸಮಾಜದ ದುಸ್ಥಿತಿಗೆ ಹಿಡಿವ ಕನ್ನಡಿ

ಸಮಾಜದ ದುಸ್ಥಿತಿಗೆ ಹಿಡಿವ ಕನ್ನಡಿ

ಬಹುಷಃ ಸುತ್ತಮುತ್ತಲಿನ ಹಳ್ಳಿಯವರು ಹಾಗೂ ಸರಕಾರ ಇವರ ರಕ್ಷಣೆಗೆ ನಿಂತರೆ ಈ ವೇಶ್ಯೆಯರ ಹಳ್ಳಿ ಎಂಬ ಪಟ್ಟ ಹೋಗಿ, ನಮ್ಮ ನಿಮ್ಮ ಊರಿನಂತೆ ಜನರ ರಕ್ಷಣೆ ಮಾಡುವ ಪೋಲಿಸ್ ಅಥವಾ ಆರೋಗ್ಯ ಕಾಪಾಡುವ ವೈದ್ಯರು ಈ ಊರಿನಿಂದಲೂ ಹೊರಬರಬಹುದು ಇಲ್ಲದೇ ಹೋದಲ್ಲಿ ನಮ್ಮ ಭಾರತ ಎಷ್ಟೇ ಮುಂದುವರಿದರೂ ಈ ಒಂದು ಹಳ್ಳಿ ನಮ್ಮ ಸಮಾಜದ ದುಸ್ಥಿತಿಗೆ ಹಿಡಿವ ಕನ್ನಡಿಯಾಗಿ ಉಳಿದುಬಿಡುತ್ತದೆ.

English summary
Story of village in Uttar Pradesh: All women's are in this village are prostitutes. An article by Deekshith Shettigar Konaje, based on Al-Jajira report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X