ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಗರದಲ್ಲಿ 30 ವರ್ಷಗಳಲ್ಲೇ ಕನಿಷ್ಠ ಮತದಾನ, ಹಿಂಸಾಚಾರಕ್ಕೆ 6 ಬಲಿ

ಶ್ರೀನಗರ ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆ ವೇಳೆ ಹಿಂಸಾಚಾರ ಭುಗಿಲೆದ್ದಿದೆ. ಪರಿಣಾಮ ಘರ್ಷಣೆಯಲ್ಲಿ ಐವರು ಸಾವನ್ನಪ್ಪಿದ್ದರೆ, 36 ಜನ ಗಾಯಗೊಂಡಿದ್ದಾರೆ.

By Sachhidananda Acharya
|
Google Oneindia Kannada News

ಶ್ರೀನಗರ, ಏಪ್ರಿಲ್ 9: ಶ್ರೀನಗರ ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆ ವೇಳೆ ಹಿಂಸಾಚಾರ ಭುಗಿಲೆದ್ದಿದೆ. ಪರಿಣಾಮ ಘರ್ಷಣೆಯಲ್ಲಿ ಆರು ಜನ ಸಾವನ್ನಪ್ಪಿದ್ದರೆ, 36 ಜನ ಗಾಯಗೊಂಡಿದ್ದಾರೆ.

ಬುದ್ಗಾಮ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಸಂಘರ್ಷ ನಡೆಯಿತು. ಇಲ್ಲಿನ ಪಖೇರ್ಪೋರಾ, ಬೀರ್ವಾಹ್ ಚದೂರ ಮತ್ತು ಮಗಮ್ ಪ್ರದೇಶದಲ್ಲಿ ಹೆಚ್ಚಿನ ಹಿಂಸಾಚಾರ ನಡೆದಿದೆ.

ನೂರಾರು ಪ್ರತಿಭಟನಾಕಾರರು ಇಲ್ಲಿನ ಪಖೇರ್ಪೊರಾ ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಈ ವೇಳೆ ಭದ್ರತಾ ಪಡೆಗಳು ರಕ್ಷಣೆಗಾಗಿ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದರು. ಹೀಗಿದ್ದೂ ಪರಿಸ್ಥಿತಿ ತಹಬದಿಗೆ ಬರದಿದ್ದಾಗ ಗುಂಡಿನ ದಾಳಿ ಆರಂಭಿಸಿದ್ದಾರೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದರೆ 4 ಜನ ಗಾಯಗೊಂಡಿದ್ದಾರೆ. ಸಾವಿಗೀಡಾದವರಿಬ್ಬರೂ 20 ವರ್ಷ ಒಳಗಿನವರಾಗಿದ್ದಾರೆ.

Srinagr by poll: Protesters-Security forces clash, 5 killed

ಇದೇ ರೀತಿ ಬೀರ್ವಾಹ್ ಚದೂರ ಮತ್ತ ಮಗಮ್ ಭಾಗಗಳಲ್ಲಿ ಹಿಂಸಾಚಾರ ನಡೆದಿದ್ದು 2ಜನ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ.
ಘರ್ಷಣೆ ಹಿನ್ನಲೆಯಲ್ಲಿ ಬುದ್ಗಾಮ್ ನ ಹಲವು ಮತಗಟ್ಟೆಗಳಲ್ಲಿ ಸಂಜೆ 4 ಗಂಟೆ ವೇಳೆಗೆ ಕೇವಲ 5.52ರಷ್ಟು ಮತದಾನವಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಮತದಾನ ನಡೆಯುತ್ತಿದ್ದ ಬುದ್ಗಾಮ್, ಇಚ್ಗಾಮ್, ಮಲೋರಾದಲ್ಲಿಯೂ ಹೇಳಿಕೊಳ್ಳುವಂಥ ಮತದಾನ ನಡೆದಿಲ್ಲ.

ಗಂಡೆರ್ಬಾಲ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರ ಗುಂಪು ಮತಗಟ್ಟೆಯ ಮೇಲೆ ಕಲ್ಲು ತೂರಾಟ ಮಾಡಿ, ಪೆಟ್ರೋಲ್ ಬಾಂಬ್ ಗಳನ್ನು ಎಸೆದಿದ್ದಾರೆ. ಪರಿಣಾಮ ಇಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಕಳೆದ ಜುಲೈ 8ರಂದು ಹಿಜ್ಬುಲ್ಲಾ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿ ಸಾವನ್ನಪ್ಪಿದ್ದ. ನಂತರ ಕಾಶ್ಮೀರದಲ್ಲಿ ಹುಟ್ಟಿಕೊಂಡ ಹಿಂಸಾಚಾರದಲ್ಲಿ ಕಾಶ್ಮೀರಿಗರ ಮೇಲೆ ದೌರ್ಜನ್ಯ ನಡೆದಿದೆ ಎಂದು ಹೇಳಿ ಇಲ್ಲಿನ ಪಿಡಿಪಿ ಸಂಸದ ತಾರೀಕ್ ಹಮೀದ್ ಕರ್ರಾ ರಾಜೀನಾಮೆ ನೀಡಿದ್ದರು. ಹೀಗಾಗಿ ಇಲ್ಲಿ ಮತದಾನ ನಡೆಯುತ್ತಿದೆ.

2014ರ ಲೋಕಸಭೆ ಚುನಾವಣೆ ವೇಳೆ ಇಲ್ಲಿ ಶೇಕಡಾ 26 ಮತದಾನ ನಡೆದಿತ್ತು. ಈ ಬಾರಿ ಅದಕ್ಕಿಂತಲೂ ತುಂಬಾ ಕಡಿಮೆ ಮತದಾನ ದಾಖಲಾಗುವ ಸಾಧ್ಯತೆ ಇದೆ.

UPDATE: ಸಂಜೆ 5 ಗಂಟೆ ವೇಳೆಗೆ ಶ್ರೀನಗರದಲ್ಲಿ ಕೇವಲ ಶೇಕಡಾ 6.5 ಮತದಾನ ನಡೆದಿದೆ. ಇದು ಕಳೆದ 30 ವರ್ಷಗಳಲ್ಲಿ ದಾಖಲಾದ ಕನಿಷ್ಠ ಮತದಾನವಾಗಿದೆ. ಹೆಚ್ಚಿನ ಮತಗಟ್ಟೆಗಳಲ್ಲಿ ಮತದಾನ 50, 100 ಗಡಿಯೂ ದಾಟಿಲ್ಲ.

English summary
Protest erupted between protesters and security forces in Budgam district of Jammu and Kashmir. 5 killed and 36 injured including poll officials in this clash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X