ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸ್ ಪೋರ್ಟ್ ಗಾಗಿ ಅಂಚೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಕೆ ವ್ಯವಸ್ಥೆ

By Ramesh
|
Google Oneindia Kannada News

ನವದೆಹಲಿ, ಸೆ. 26 : ವಿದೇಶಾಂಗ ಸಚಿವಾಲಯ ಪಾಸ್ ಪೋರ್ಟ್ ಪಡೆಯುವ ವಿಧಾನವನ್ನು ಇನ್ನಷ್ಟು ಸುಲಭವಾಗಿಸಲು ಮುಂದಾಗಿದೆ. ಇನ್ನು ಮುಂದೆ ಅಂಚೆ ಕಚೇರಿಗಳಲ್ಲಿ ಪಾಸ್ ಪೋರ್ಟ್ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.[ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?]

ಪ್ರಾಯೋಗಿಕವಾಗಿ ದೆಹಲಿಯ ಅಂಚೆ ಕಚೇರಿಗಳಲ್ಲಿ ಈ ವರ್ಷಾಂತ್ಯಕ್ಕೆ ವ್ಯವಸ್ಥೆ ಜಾರಿಯಾಗಲಿದೆ. ಅದು ಯಶಸ್ವಿಯಾದರೆ ಅದನ್ನು ದೇಶದ ಉಳಿದ ಭಾಗಗಳಿಗೆ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಿದೆ. ಇದರಿಂದ ಪಾಸ್ ಪೋರ್ಟ್ ಗಾಗಿ ನಡೆಸುವ ಒದ್ದಾಟ ಕಡಿಮೆಯಾಗಲಿದೆ. [ಪಾಸ್ ಪೋರ್ಟ್ ಅರ್ಜಿಗೆ ತಂದೆ ಹೆಸರು ಕಡ್ಡಾಯವಲ್ಲ]

Post Office

ವರ್ಷದಿಂದ ವರ್ಷಕ್ಕೆ ಪಾಸ್‌ಪೋರ್ಟ್ ಕೋರಿ ಅರ್ಜಿ ಸಲ್ಲಿಸುತ್ತಿರುವವ ಸಂಖ್ಯೆ ಹೆಚ್ಚುತ್ತಿದೆ. ಅದನ್ನು ವಿಲೇವಾರಿ ಮಾಡಲು ಕೇಂದ್ರ ವಿದೇಶಾಂಗ ಇಲಾಖೆಗೆ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ತ್ವರಿತವಾಗಿ ವಿಲೇವಾರಿ ಮಾಡಲು ಅಂಚೆ ಕಚೇರಿಗಳಲ್ಲೂ ಪಾಸ್‌ಪೋರ್ಟನ್ನು ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. [ಮಕ್ಕಳ ಪಾಸ್ ಪೋರ್ಟಿಗೆ ತಾಯಿ ಹೆಸರಿದ್ದರೆ ಸಾಕು!]

ದೆಹಲಿಯಲ್ಲಿ ಸದ್ಯಕ್ಕೆ ಐದು ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿದ್ದು, ಅವುಗಳು ಪ್ರತಿ ದಿನ 2 ಸಾವಿರ ಅರ್ಜಿಗಳನ್ನು ಇತ್ಯರ್ಥಗೊಳಿಸುತ್ತವೆ. ಸದ್ಯ ಪಾಸ್‌ಪೋರ್ಟ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ 3-4 ತಿಂಗಳು ಕಾಯಬೇಗುತ್ತದೆ. ಹೀಗಾಗಿ ಅಂಚೆ ಕಚೇರಿಗಳಿಗೆ ಈ ಹೊಣೆ ವಹಿಸಿದರೆ ದಿನಕ್ಕೆ 1500-2000 ಅರ್ಜಿಗಳು ವಿಲೇವಾರಿಯಾಗಲಿವೆ.

ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಎಸ್ ಕೆ)ಗಳಲ್ಲಿ ಎ, ಬಿ ಮತ್ತು ಸಿ ಎಂಬ ವರ್ಗೀಕರಣಗಳಿವೆ. ಅದರಲ್ಲಿ ಎ ವಿಭಾಗವನ್ನು ಅರ್ಜಿದಾರರ ದಾಖಲೆಗಳನ್ನು ಅಪ್ ಲೋಡ್ ಮಾಡಲು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್)ಗೆ ಗುತ್ತಿಗೆ ನೀಡಲಾಗಿದೆ. ಇನ್ನು ಬಿ ಮತ್ತು ಸಿ ವಿಭಾಗಗಳನ್ನು ವಿದೇಶಾಂಗ ಇಲಾಖೆ ನೋಡಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಅಂಚೆ ಇಲಾಖೆ ನೋಡಿಕೊಳ್ಳಲಿದೆ.

English summary
The Postal Department will start processing passport applications at major post offices in the capital by the year-end. If the project is successful, all Indian post offices will start issuing the document.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X