ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಮಾಘಮೇಳ? ಏನಿದರ ವೈಶಿಷ್ಟ್ಯ?

By Vanitha
|
Google Oneindia Kannada News

ಬೆಂಗಳೂರು, ಫೆಬ್ರವರಿ,01: ಮಾಘಮೇಳ ಇದು ಹಿಂದೂಗಳ ಬಹುಮುಖ್ಯವಾದ ಧಾರ್ಮಿಕ ಹಬ್ಬ. ಇದನ್ನು ಗಂಗಾ, ಯಮುನಾ, ಸರಸ್ವತಿ ಈ ಮೂರು ನದಿಗಳ ಸಂಗಮದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಪಾಲ್ಗೊಂಡ ಭಕ್ತಾಧಿಗಳು ಗಂಗಾ ಸಂಗಮದಲ್ಲಿ ಮಿಂದು ಪುನೀತರಾಗುತ್ತಾರೆ.

ಮಾಘ ಮೇಳ ಸಾಮಾನ್ಯವಾಗಿ ಜನವರಿ 14ರಿಂದ ಪ್ರಾರಂಭವಾಗಿ ಮಾರ್ಚ್ 7ಕ್ಕೆ ಮುಕ್ತಾಯವಾಗುತ್ತದೆ. ಮಾಘಮೇಳವನ್ನು ಸಣ್ಣದಾದ ಕುಂಭ ಮೇಳ ಎಂದು ಕರೆಯಲಾಗುತ್ತದೆ. ಉತ್ತರ ಭಾರತದ ಕ್ಯಾಲೆಂಡರ್ ಪ್ರಕಾರ ಈ ಹಬ್ಬವನ್ನು ಮಾಘಮಾಸದಲ್ಲಿ ಕೈಗೊಳ್ಳಲಾಗುತ್ತದೆ.

ಗಂಗಾನದಿ ಸಂಗಮದಲ್ಲಿ ಮಿಂದೆದ್ದರೆ ನಮ್ಮ ಎಲ್ಲಾ ಪಾಪಗಳು ನಿವಾರಣೆಯಾಗುತ್ತದೆ. ಮೋಕ್ಷ ಸಿಗುತ್ತದೆ ಎಂಬ ಉದ್ದೇಶದಿಂದ ಪ್ರತಿಯೊಬ್ಬರು ಈ ಮಾಘಮೇಳದಲ್ಲಿ ಪಾಲ್ಗೊಂಡು ಮಿಂದೇಳುತ್ತಾರೆ. ಇದು ಸರಾಸರಿ ಒಂದುವರೆ ತಿಂಗಳು ಅಂದರೆ 45 ದಿನಗಳ ಕಾಲ ವಿವಿಧ ಭಾಗಗಳಲ್ಲಿ ಜನರು ಆಚರಿಸುತ್ತಾರೆ.[ಸ್ಥಳ ಪುರಾಣ: ಗಂಗೆ ಕಥೆ ಹೇಳುವ ಗಂಗಾ ಸಾಗರ]

ಈ ವರ್ಷದಲ್ಲಿ ಮಾಘಮೇಳವು ಜನವರಿ 14ರಿಂದ ಆರಂಭಗೊಂಡಿದ್ದು, ಫೆಬ್ರವರಿ 08 (ಪೌಷ್ ಪೂರ್ಣಿಮಾ), ಫೆಬ್ರವರಿ 12 (ಬಸಂತ್ ಅಮವಾಸ್ಯೆ), ಫೆಬ್ರವರಿ 22 ( ಮಾಘಿ ಪೂರ್ಣಿಮಾ), ಮಾರ್ಚ್ 7(ಮಹಾಶಿವರಾತ್ರಿ) ನಡೆಯುತ್ತದೆ. ಹೀಗೆ ಈ ಸುದ್ದಿಯ ಜೊತೆ ಇನ್ನಷ್ಟು ಮಾಹಿತಿಯ ಜೊತೆಗೆ ಇನ್ನಿತರ ಸುದ್ದಿಗಳು ಇಲ್ಲಿವೆ. (ಚಿತ್ರ: ಪಿಟಿಐ)

ಮಾಘಮೇಳ ಜಾಥಾದಲ್ಲಿ ಸಾಧುಗಳು

ಮಾಘಮೇಳ ಜಾಥಾದಲ್ಲಿ ಸಾಧುಗಳು

ಅಖಿಲಾ ಭಾರತೀಯ ಆಕಾರ ಪರಿಷತ್ ಸಾಧುಗಳು ಮಾಘಮೇಳ ಹಬ್ಬದ ಪ್ರಯುಕ್ತ ಭಾನುವಾರ ಅಲಹಾಬಾದಿನ ಗಂಗಾ ಸಂಗಮದಲ್ಲಿ ಮಿಂದು ಪುನೀತರಾದರು.

ಮೋಟಾರು ವಾಹನ ಕಾಯ್ದೆ 8ನೇ ನಿಯಮ ವಿರೋಧಿಸಿದ ಕೇಜ್ರಿವಾಲ್

ಮೋಟಾರು ವಾಹನ ಕಾಯ್ದೆ 8ನೇ ನಿಯಮ ವಿರೋಧಿಸಿದ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ನಗರದ ಸಂತ ಜೋಸೆಫರ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಮೋಟಾರು ವಾಹನ ಕಾಯ್ದೆ 8ನೇ ನಿಯಮ ವಿರೋಧಿಸಿ ನಡೆದ 'ಅಯ್ಯೋ ನಮ್ಮಪ್ಪಾ, ದುಡಿಯೋದೆ ತಪ್ಪಾ? ಎಂಬ ಜಾಥಾದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

ಪ್ರತಿಭೆ ಪ್ರದರ್ಶಿಸಿದ ವಿದ್ಯಾರ್ಥಿಗಳು

ಪ್ರತಿಭೆ ಪ್ರದರ್ಶಿಸಿದ ವಿದ್ಯಾರ್ಥಿಗಳು

ಅಲಹಾಬಾದಿನ ಶಾಲೆ ಮಕ್ಕಳು ಶಾಲೆಯಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ನಡೆದ ಫೈರ್ ಜಂಪ್ ನಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಚುಮು ಚುಮು ಚಳಿಯಲ್ಲಿ ಸೈಕಲ್ಥಾನ್

ಚುಮು ಚುಮು ಚಳಿಯಲ್ಲಿ ಸೈಕಲ್ಥಾನ್

ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಗುರ್ ಗಾಂವ್ ನಲ್ಲಿ ಏರ್ಪಡಿಸಿದ್ದ ಸೈಕಲ್ಥಾನ್ ನಲ್ಲಿ ಸಾರ್ವಜನಿಕರು ಚಳಿಯನ್ನು ಲೆಕ್ಕಿಸದೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಚಳಿಯೇ ಇವರಿಗೆ ಹೆದರಿತ್ತು ಎಂದರೆ ತಪ್ಪಾಗಲಾರದು.

30ನೇ ಅಂತಾರಾಷ್ಟ್ರೀಯ ಆರ್ಟ್ ಆಂಡ್ ಕ್ರಾಫ್ ಮೇಳ

30ನೇ ಅಂತಾರಾಷ್ಟ್ರೀಯ ಆರ್ಟ್ ಆಂಡ್ ಕ್ರಾಫ್ ಮೇಳ

ತೆಲಂಗಾಣದ ಜಾನಪದ ಕಲಾವಿದರು ಫರಿದಾಬಾದಿನ ಸೂರಜ್ ಕುಂಡ್ ನಲ್ಲಿ ನಡೆದ 30ನೇ ಅಂತಾರಾಷ್ಟ್ರೀಯ ಆರ್ಟ್ ಆಂಡ್ ಕ್ರಾಫ್ ಮೇಳದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.

English summary
Some sadhus celebrates Magh Mela festival at Bank of river Ganges at Sangam in Allahabad. People taking part in CYCLOTHON , a cycle rally organised by Cycling Federation of India to promote the use of bicycles in Gurgaon. Delhi Chief Minister Arvind Kejriwal being garlanded by AAP members during a public rally against the Rule 8 of Motor Vehicle Act in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X