ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡುಪ್ರಾಣಿಗಳ ಉಪಟಳದಿಂದ ನಗರ ಮಂದಿಗೆ ಮುಕ್ತಿ ಯಾವಾಗ?

By Vanitha
|
Google Oneindia Kannada News

ಬೆಂಗಳೂರು,ಫೆಬ್ರವರಿ, 10: ಹಿಂದೆಲ್ಲಾ ಜೀವನ ನಿರ್ವಹಣೆಗೆಂದು ಕರಡಿ, ಆನೆ, ಕೋತಿ, ಹಾವು ಇವುಗಳನ್ನು ಹಿಡಿದುಕೊಂಡು ಕೆಲವು ಜನ ಮನೆಮನೆಗೆ ಬರುತ್ತಿದ್ದರು. ಆಗ ಕಾಡು ಪ್ರಾಣಿಗಳು ನಾಡಿನೊಳಗೆ ಬಂದಾಕ್ಷಣ ಅವುಗಳನ್ನು ನೋಡಲು ಜನರು ಮುಗಿಬೀಳುತ್ತಿದ್ದರು.

ಈಗ, ನಾಡಿನ ಜನರು ಕಾಡು ಪ್ರದೇಶವನ್ನು ವಶಪಡಿಸಿಕೊಳ್ಳಲು ಶುರು ಮಾಡಿದರೋ, ಕಬಳಿಸಲು ಹೊಂಚು ಹಾಕಿದರೋ ಅಂದಿನಿಂದ ಕಾಡುಪ್ರಾಣಿಗಳು ಆಹಾರ ಹುಡುಕುತ್ತಲೋ, ಪ್ರಾಣ ರಕ್ಷಣೆಗೆಂದೋ ನಾಡಿಗೆ ಬರಲಾರಂಭಿಸಿವೆ. ಒಟ್ಟಿನಲ್ಲಿ ಜನರು ತಮ್ಮ ನಿದ್ದೆಯನ್ನು ತಾವೇ ಹಾಳು ಮಾಡಿಕೊಂಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಎರಡು ದಿನದ ಹಿಂದೆ ಬೆಂಗಳೂರಿನ ವಿಬ್ ಗಯರ್ ಶಾಲೆಯೊಳಗೆ ಚಿರತೆಯೊಂದು ನುಗ್ಗಿ ಆರು ಜನರನ್ನು ಗಾಯಗೊಳಿಸಿತ್ತು. ಇದರ ಭಯದಲ್ಲೇ ಬೆಂಗಳೂರು ಜನರು ಬದುಕುತ್ತಿದ್ದು, ಇದೀಗ ಹಳ್ಳಿಗಳಲ್ಲಿ ಕಾಣಿಸುತ್ತಿದ್ದ ಆನೆಯ ಉಪಟಳ ನಗರದಲ್ಲಿ ಕಾಣಿಸಿಕೊಂಡಿದೆ.

ಬೆಂಗಳೂರಿನ ಮಂದಿ ಚಿರತೆಯ ಭೀತಿಯಲ್ಲಿ ಕಾಲ ತಳ್ಳುತ್ತಿದ್ದರೆ, ಪಶ್ವಿಮ ಬಂಗಾಳದ ಸಿಲಿಗುರಿ ಪ್ರದೇಶದ ಜನರು ಆನೆಯ ಕಾಟದಿಂದ ಬೇಸತ್ತಿದ್ದಾರೆ. ಸಿಲಿಗುರಿಗೆ ಬಂದ ಆನೆಯೂ ಜನರು ನಿಲ್ಲಿಸಿದ್ದ ಬೈಕ್ ಗಳನ್ನು ಜಖಂಗೊಳಿಸಿದೆ. ತನ್ನ ಕಾಲಿಗೆ ಸಿಗುವ ಯಾವುದೇ ವಸ್ತುಗಳನ್ನು ಬಿಡುತ್ತಿಲ್ಲ.[ಚಿತ್ರಗಳು : ಬೆಂಗಳೂರು ಶಾಲೆಗೆ ಲಗ್ಗೆ ಹಾಕಿದ ಚಿರತೆ]

ಚಿರತೆಯ ಉಪಟಳ ನೋಡಿರುವ ನಿಮಗೆ ಆನೆಯ ಆರ್ಭಟ ತೋರಿಸ್ತೀವಿ. ಈ ಸುದ್ದಿಯ ಜೊತೆಗೆ ಬುದ್ದಗಯಾ, ಪಶ್ಚಿಮ ಬಂಗಾಳ, ಅಹಮದಾಬಾದ್, ರಾಂಚಿ ಹೀಗೆ ನಾನಾ ನಗರಗಳ ಸುದ್ದಿಗಳು ಈ ಕೆಳಗಿನ ಸ್ಲೈಡ್ ಗಳಲ್ಲಿವೆ.

ಆನೆ ಕಾಲಿನ ತುಳಿತಕ್ಕೆ ಒಳಗಾದ ಹಲವು ಬೈಕ್ ಗಳು

ಆನೆ ಕಾಲಿನ ತುಳಿತಕ್ಕೆ ಒಳಗಾದ ಹಲವು ಬೈಕ್ ಗಳು

ಆನೆಯು ಪಶ್ವಿಮ ಬಂಗಾಳದ ಸಿಲಿಗುರಿ ನಗರದಲ್ಲಿರುವ ಶಾಪಿಂಗ್ ಮಾಲ್ ನ ಮುಂಭಾಗದಲ್ಲಿರುವ ಎಲ್ಲಾ ಬೈಕ್ ಗಳನ್ನು ತುಳಿದು ಹಾಕಿದೆ. ಇದರಿಂದ ಹೆದರಿದ ಮಂದಿ ಮಾಲ್ ನ ಮೇಲೆಯೇ ನಿಂತು ನೋಡುತ್ತಿದ್ದರು. ಅಯ್ಯೋ ನನ್ನ ಬೈಕ್ ಹೋಯ್ತು ಎಂದು ಗೊಣಗುತ್ತಿದ್ದರು.

ದೇಶಕ್ಕೆ ಬಂಗಾರ ಪದಕ ತಂದ ಸ್ಕ್ವಾಶ್ ಆಟಗಾರರು

ದೇಶಕ್ಕೆ ಬಂಗಾರ ಪದಕ ತಂದ ಸ್ಕ್ವಾಶ್ ಆಟಗಾರರು

ಗುವಾಹಟಿಯಲ್ಲಿ ನಡೆಯುತ್ತಿರುವ 12ನೇ ಸೌತ್ ಏಷಿಯನ್ ಗೇಮ್ಸ್ ನಡೆಯುತ್ತಿದೆ. ಇದರಲ್ಲಿ ಭಾರತೀಯ ಮಹಿಳಾ ಸ್ಕ್ವಾಶ್ ಆಟಗಾರರು ಪಾಕಿಸ್ತಾನ ತಂಡದ ವಿರುದ್ಧ ಬಂಗಾರ ಪದಕ ಗೆದ್ದರು. ಆಗ ಭಾರತೀಯ ಮಹಿಳಾ ಸ್ಕ್ವಾಶ್ ಆಟಗಾರರಾದ ಜೋಶ್ನಾ ಚಿನ್ನಪ್ಪ, ದೀಪಿಕಾ ಕಾರ್ತಿಕ್, ಸುಮ್ಯಾನ ಕುರುವಿಲ ಭಾರತದ ರಾಷ್ಟ್ರದ್ವಜ ಹಿಡಿದು ಸಂಭ್ರಮ ಪಟ್ಟಿದ್ದು ಹೀಗೆ.

ಹನುಮಂತಪ್ಪ ಕೊಪ್ಪದ ಅವರಿಗಾಗಿ ಗಂಗಾ ಸಂಗಮದಲ್ಲಿ ಪ್ರಾರ್ಥನೆ

ಹನುಮಂತಪ್ಪ ಕೊಪ್ಪದ ಅವರಿಗಾಗಿ ಗಂಗಾ ಸಂಗಮದಲ್ಲಿ ಪ್ರಾರ್ಥನೆ

ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಹನುಮಂತಪ್ಪ ಕೊಪ್ಪದ ಅವರು ಬೇಗನೇ ಗುಣಮುಖವಾಗಲಿ ಎಂದು ಅಲಹಾಬಾದಿನ ಗಂಗಾನದಿ ಸಂಗಮದಲ್ಲಿ ಅವರ ಹೆಸರಿನಲ್ಲಿ ಭಕ್ತಾಧಿಗಳು ಪ್ರಾರ್ಥನೆ ಮಾಡಿದರು. ಸಿಯಾಚಿನ್ ನಲ್ಲಿ 35 ಅಡಿ ಹಿಮಪಾತದಲ್ಲಿ ಹನುಮಂತಪ್ಪ ಕೊಪ್ಪದ ಸಿಲುಕಿದ್ದರು.

ಬುದ್ದಗಯಾದಲ್ಲಿ ಲೋಸರ್ ಹಬ್ಬ

ಬುದ್ದಗಯಾದಲ್ಲಿ ಲೋಸರ್ ಹಬ್ಬ

ಫೆಬ್ರವರಿ 9ರಿಂದ 11 ಮತ್ತು ಬುದ್ದಗಯಾದಲ್ಲಿ ನಡೆಯುವ ಲೋಸರ್ ಎಂಬ ಹಬ್ಬದ ಆಚರಣೆಯಲ್ಲಿ ಟಿಬೆಟಿಯನ್ನಿನ ಹದಿನೇಳನೇ ಕರ್ಮಪ ಓಜಿಯೇನ್ ತ್ರಿನ್ಲೆ ದೋರ್ಜಿ ಭಾಗವಹಿಸಿದ್ದರು.

ಗುರ್ ಗಾಂವ್ ನಲ್ಲಿ ಕಾರುಗಳದ್ದೇ ದರ್ಬಾರ್

ಗುರ್ ಗಾಂವ್ ನಲ್ಲಿ ಕಾರುಗಳದ್ದೇ ದರ್ಬಾರ್

ಟ್ರಾಫಿಕ್ ಸಮಸ್ಯೆ ಹರಿಯಾಣದ ನಗರವಾದ ಗುರ್ ಗಾಂವ್ ನಲ್ಲಿಯೂ ತಪ್ಪಿಲ್ಲ. ಇಲ್ಲಿ ಹೆಚ್ಚಾಗಿ ಕಾರುಗಳದ್ದೇ ದರ್ಬಾರ್ ಆಗಿರುವುದರಿಂದ ಟ್ರಾಫಿಕ್ ಸಮಸ್ಯೆ ಇನ್ನು ಹೆಚ್ಚಳವಾಗಿಯೇ ಇದೆ. ಗುರ್ ಗಾಂವ್ ನ ಅಲ್ವಾರ್ ರಾಷ್ಟ್ರೀಯ ಹೆದ್ದಾರಿಯ ಟ್ರಾಫಿಕ್ ನಲ್ಲಿ ನಿಂದ ಕಾರುಗಳು ಛಾಯಗ್ರಾಹಕನ ಕಣ್ಣಿಗೆ ಬಿದ್ದದ್ದು ಹೀಗೆ.

ದೊಡ್ಡ ಮೀನಿನ ಉಡುಗೊರೆ

ದೊಡ್ಡ ಮೀನಿನ ಉಡುಗೊರೆ

ಜಾರ್ಖಂಡ್ ನ ಮುಖ್ಯಮಂತ್ರಿ ರಘುಬಾರ್ ದಾಸ್ ಅವರು ಕಾಮಧೇನು ಪವ್ ಸ್ಥಾನ್ ವಿಕಾಸ್ ಮಹೋತ್ಸವನ್ನು ರಾಂಚಿಯಲ್ಲಿ ಉದ್ಘಾಟಿಸಿದ್ದು, ಆ ಸಂದರ್ಭದಲ್ಲಿ ಮೀನುಗಾರರೊಬ್ಬರು ಅವರಿಗೆ ಬಹಳ ದೊಡ್ಡದಾದ ಮೀನನ್ನು ಉಡುಗೊರೆಯಾಗಿ ನೀಡಿದರು.

ಒಮೆನ್ ಚಾಂಡಿ ಮತ್ತು ರಾಹುಲ್ ಗಾಂಧಿ

ಒಮೆನ್ ಚಾಂಡಿ ಮತ್ತು ರಾಹುಲ್ ಗಾಂಧಿ

ಸೋಲಾರ್ ಹಗರಣದಲ್ಲಿ ಸಿಲುಕಿರುವ ಕೇರಳದ ಮುಖ್ಯಮಂತ್ರಿ ಒಮೆನ್ ಚಾಂಡಿ ಅವರು ಕೆಪಿಸಿಸಿ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕೈಕುಲುಕಿ ಮುಗುಳ್ನಕ್ಕರು.

ಆತ್ಮಕ್ಕೆ ಶಾಂತಿ ದೊರೆಯಲಿ

ಆತ್ಮಕ್ಕೆ ಶಾಂತಿ ದೊರೆಯಲಿ

ಸಿಯಾಚಿನ್ ಪ್ರದೇಶದಲ್ಲಿ ಹಿಮದಡಿ ಸಿಲುಕಿ ಸಾವನ್ನಪ್ಪಿದ್ದ ಯೋಧರ ಆತ್ಮಕ್ಕೆ ಶಾಂತಿ ದೊರೆಯಲೆಂದು ಅಹಮದಾಬಾದ್ ಶಾಲೆಯ ಮಕ್ಕಳು ಗುಲಾಬಿ ಹೂವಿನಲ್ಲಿ ದೀಪ ಮಾಡಿ ಅದರ ಮುಂದೆ ಕಣ್ಣು ಮುಚ್ಚಿ ಮೌನಾಚರಣೆ ಮಾಡಿದರು

ಜಾನುವಾರು ಕಳ್ಳರ ಬಂಧನ

ಜಾನುವಾರು ಕಳ್ಳರ ಬಂಧನ

ಜಾನುವಾರುಗಳ ಕಳ್ಳಸಾಗಾಣೆ ಮಾಡುತ್ತಿದ್ದ ಬಾಂಗ್ಲಾದೇಶದ ಇಬ್ಬರು ಹಾಗೂ ಭಾರತದ ಒಬ್ಬ ವ್ಯಕ್ತಿಯನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಪಶ್ವಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

English summary
some important news pics of india: A view of heavy traffic jam on Gurgaon- Alwar National Highway in Gurgaon. Fisherman present a huge fish to Chief Minister of Jharkhand, Raghubar Das during inauguration of Kamdhenu Pasudhan Vikas Mahotsav in Ranchi. School students pay tributes to the Siachen avalanche martyrs in Ahmedabad
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X