ವೆಂಕಯ್ಯ ನಾಯ್ಡು ಖಾತೆಗಳೀಗ ಸ್ಮೃೃತಿ ಇರಾನಿ, ತೋಮರ್ ಹೆಗಲಿಗೆ

Posted By:
Subscribe to Oneindia Kannada

ನವದೆಹಲಿ, ಜುಲೈ 18: ಕೇಂದ್ರದ ಮಾಜಿ ಸಚಿವ ವೆಂಕಯ್ಯ ನಾಯ್ಡು ಅವರ ಉಸ್ತುವಾರಿಯಲ್ಲಿದ್ದು ಎರಡು ಇಲಾಖೆಗಳನ್ನು ಕೇಂದ್ರದ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಹಾಗೂ ಗಣಿ ಇಲಾಖೆ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ವಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಉಪ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾದ ಹಿನ್ನೆಲೆಯಲ್ಲಿ, ವೆಂಕಯ್ಯ ನಾಯ್ಡು ಅವರು ಕೇಂದ್ರದಲ್ಲಿ ತಾವು ಹೊಂದಿದ್ದ ಸಚಿವ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರಿಂದ ತೆರವಾಗಿರುವ ಇಲಾಖೆಗಳನ್ನು ಸಂಪುಟದ ಇತರ ಸಚಿವರಿಗೆ ವರ್ಗಾಯಿಸಲಾಗಿದೆ.

Smriti Irani Gets Additional Charge Of Information And Broadcasting Ministry After Venkaiah Naidu Resigns

ಅದರಂತೆ, ವೆಂಕಯ್ಯ ಅವರು ನಿರ್ವಹಿಸುತ್ತಿದ್ದ ಮಾಹಿತಿ ಮತ್ತು ಪ್ರಚಾರ ಇಲಾಖೆಯು ಸ್ಮೃತಿ ಇರಾನಿ ಹೆಗಲೇರಿದರೆ, ನಗರಾಭಿವೃದ್ಧಿ ಇಲಾಖೆಯು ತೋಮರ್ ಅವರ ಸುಪರ್ದಿಗೊಳಪಡಲಿದೆ.

ಇದೊಂದು ತಾತ್ಕಾಲಿಕ ನಡೆಯಾಗಿದ್ದು, ಉಪ ರಾಷ್ಟ್ರಪತಿ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಆಗುವ ಬದಲಾವಣೆಗಳನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಆಗ, ಕೇಂದ್ರ ಮಂತ್ರಿ ಮಂಡಲ ಪುನಾರಾಚನೆಗೊಳ್ಳುವ ಸಾಧ್ಯತೆಗಳನ್ನೂ ಅಲ್ಲಗಳೆಯುಂತಿಲ್ಲ.

Siddaramaiah Accuses BJP On Dividing Society In The Name Of Caste | Oneindia Kannada
English summary
Smriti Irani, Minister for Textiles, will hold an additional charge of the important Information and Broadcasting Ministry, the government has announced. Another ministry of Venkaiah Naidu Urban Development will be look after by Mining Minister Narendra Singh Tomar.
Please Wait while comments are loading...