ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಯಾಬ್ ಇಂಡಿಯಾ ಮಳಿಗೆಯಲ್ಲಿ ಸ್ಮೃತಿ ಇರಾನಿ ಕಂಡಿದ್ದೇನು?

By Mahesh
|
Google Oneindia Kannada News

ಕ್ಯಾಂಡೋಲಿಮ್(ಗೋವಾ), ಏ.3: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಫ್ಯಾಬ್ ಇಂಡಿಯಾ ಮಳಿಗೆಯ ಚೇಜಿಂಗ್ ರೂಮಿನಲ್ಲಿ ಹಿಡನ್ ಕೆಮರಾ ಕಂಡ ಸುದ್ದಿ ಈಗ ಚರ್ಚಾಸ್ಪದ ವಿಷಯವಾಗಿದೆ. ಫ್ಯಾಬ್ ಇಂಡಿಯಾ ಮಳಿಗೆ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆ, ನಾವು ಸ್ಟೋರ್ ನಲ್ಲಿ ಕೆಮರಾ ಇಟ್ಟಿದ್ದೇವೆ, ಚೇಜಿಂಗ್ ರೂಮಿನಲ್ಲಲ್ಲ ಎಂದು ಸ್ಪಷನೆ ನೀಡಿದೆ.

ಇಷ್ಟು ದಿನ ಯಾರ ಕಣ್ಣಿಗೂ ಕಾಣದ ಹಿಡನ್ ಕೆಮರಾ ಸಚಿವೆ ಸ್ಮೃತಿ ಇರಾನಿ ಅವರಿಗೆ ಕಂಡಿದ್ದು ಹೇಗೆ? ಎಂಬ ಸರಳ ಪ್ರಶ್ನೆ ಜೊತೆಗೆ ಫ್ಯಾಬ್ ಇಂಡಿಯಾ ಮಳಿಗೆಯನ್ನು ಭಾರತದಿಂದ ಹೊರಕ್ಕೆ ಹಾಕಿ ಎಂಬ ಆಗ್ರಹವೂ ಸಾಮಾಜಿಕ ಜಾಲ ತಾಣ, ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಕಂಡು ಬಂದಿದೆ. [ಸ್ಮೃತಿ ಇರಾನಿ ಭಾರತದ ರಾಷ್ಟ್ರಪತಿ ಆಗ್ತಾರಂತೆ?]

ಬೆಂಗಳೂರಿನಲ್ಲಿ ನಡೆದಿರುವ ಮಹತ್ವದ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಪಾಲ್ಗೊಳ್ಳದೆ ಸಚಿವೆ ಸ್ಮೃತಿ ಇರಾನಿ ಅವರು ಕುಟುಂಬ ಸಮೇತ ಗೋವಾ ಪ್ರವಾಸ ನಿರತರಾಗಿದ್ದಾರೆ.[24x7 ರಕ್ಷಣೆ ಸ್ಮಾರ್ಟ್ ಸಿಟಿ ಯೋಜನೆ]

ಘಟನೆ ಹಿನ್ನಲೆ: ಕ್ಯಾಂಡೋಲಿಮ್ ನಗರದಲ್ಲಿ ಶುಕ್ರವಾರ ಸುತ್ತಾಡುವಾಗ ಫ್ಯಾಬ್ ಇಂಡಿಯಾದ ಬಟ್ಟೆ ಶೋ ರೂಂ ಕಣ್ಣಿಗೆ ಬಿದ್ದಿದೆ. ಬಟ್ಟೆಯೊಂದನ್ನು ಆಯ್ಕೆ ಮಾಡಿಕೊಂಡು ಟ್ರಯಲ್ ರೂಮಿಗೆ ತೆರಳಿದ ಸ್ಮೃತಿ ಇರಾನಿ ಅವರು ರೂಂನಲ್ಲಿ ಹಿಡನ್ ಕೆಮರಾ ಇರುವುದು ಪತ್ತೆ ಮಾಡಿದ್ದಾರೆ. ತಕ್ಷಣವೇ ಸ್ಥಳೀಯ ಬಿಜೆಪಿ ಶಾಸಕ ಮೈಕಲ್ ಲೋಬೋ ಅವರಿಗೆ ವಿಷಯ ತಿಳಿಸಿದ್ದಾರೆ.[ತಡರಾತ್ರಿಯಲ್ಲಿ ಆಟಗಾರ್ತಿ ಎಳೆದಾಡಿದ ಕೋಚ್]

ಸ್ಥಳಕ್ಕಾಗಮಿಸಿದ ಲೋಬೊ ಅವರು ಸ್ಥಳೀಯ ಪೊಲೀಸರನ್ನು ಕರೆಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಟ್ರಯಲ್ ರೂಂನಲ್ಲಿದ್ದ ಹಿಡನ್ ಕೆಮರಾ ಹಾಗೂ ಹಾರ್ಡ್ ಡಿಸ್ಕನ್ನು ಪೊಲೀಸರು ವಶಪಡೆಸಿಕೊಂಡಿದ್ದಾರೆ. ಸ್ಮೃತಿ ಇರಾನಿ ಅವರು ಪತಿ ಸಮೇತ ಕ್ಯಾಂಡೋಲಿನ್ ಠಾಣೆಗೆ ತೆರಳಿ ದೂರು ನೀಡಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಎಫ್ ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದೇ ಮೊದಲಲ್ಲ, ಇದೊಂದೇ ಮಳಿಗೆಯಲ್ಲ

ಇದೇ ಮೊದಲಲ್ಲ, ಇದೊಂದೇ ಮಳಿಗೆಯಲ್ಲ

ಹಿಡನ್ ಕೆಮರಾ, ಸಿಸಿಟಿವಿ ದುರ್ಬಳಕೆ ಮಾಡಿಕೊಂಡಿರುವ ಉದಾಹರಣೆಗಳು ಇದೇ ಮೊದಲಲ್ಲ. ಅದರೆ, ಈಗ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ಕಣ್ಣಿಗೆ ಈ ದುಷ್ಕೃತ್ಯ ಬಿದ್ದಿರುವುದರಿಂದ ಕಠಿಣ ಕ್ರಮ ಎಲ್ಲೆಡೆ ನಿರೀಕ್ಷಿಸುವ ಸಾಧ್ಯತೆಯಿದೆ.

ಬೇರೆ ಯಾರ ಕಣ್ಣಿಗೂ ಕೆಮರಾ ಕಾಣಿಸಲಿಲ್ಲವೇ?

ಬೇರೆ ಯಾರ ಕಣ್ಣಿಗೂ ಈ ಹಿಡನ್ ಕೆಮರಾ ಇಲ್ಲಿವರೆಗೂ ಕಾಣಿಸಲಿಲ್ಲವೇ? ಇದು ಹೇಗೆ ಸಾಧ್ಯ ಎಂದು ಸಾರ್ವಜನಿಕರಿಂದ ಪ್ರಶ್ನೆ.

ಅದಕ್ಕೆ ಹೇಳೋದು ಆನ್ ಲೈನ್ ಶಾಪಿಂಗ್ ಮಾಡಿ

ಅದಕ್ಕೆ ಹೇಳೋದು ಆನ್ ಲೈನ್ ಶಾಪಿಂಗ್ ಮಾಡಿ.. ಸುರಕ್ಷತೆ ಹೆಚ್ಚು

ಇದು ತುಂಬಾ ಗಂಭೀರವಾದ ವಿಷಯ

ಫ್ಯಾಬ್ ಇಂಡಿಯಾ ಮಳಿಗೆಯಲ್ಲಿ ಜಪ್ತಿ ಮಾಡಲಾದ ಕೆಮೆರಾ ದೇಹ ಅರ್ಧಭಾಗವನ್ನು ಕವರ್ ಮಾಡುತ್ತದೆ.

ಫ್ಯಾಬ್ ಇಂಡಿಯಾದವರು ಕೇಜ್ರಿವಾಲ್ ಸಂಪರ್ಕಿಸುತ್ತಿದ್ದಾರಂತೆ

ಫ್ಯಾಬ್ ಇಂಡಿಯಾದವರು ಕೇಜ್ರಿವಾಲ್ ಸಂಪರ್ಕಿಸುತ್ತಿದ್ದಾರಂತೆ.. ಯಾರಿಗೂ ತಿಳಿಯದಂತೆ ಸಿಸಿಟಿವಿ ಅಳವಡಿಸುವ ತರಬೇತಿ ಪಡೆಯುತ್ತಾರಂತೆ!

English summary
Union Human Resource Development Minister Smriti Irani on Friday filed an FIR (First Information Report) against a garment store of popular clothing chain Fabindia here after she found a hidden camera in its changing room.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X