ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ವಿಂದರ್ ಸಿಂಗ್, ಗೋಪಾಲ್, ವರ್ಮಾ ಮುಖಾಮುಖಿ ವಿಚಾರಣೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜನವರಿ 12 : ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ತನಿಖೆ ನಡೆಸುತ್ತಿರುವ ಎನ್‌ಐಎ ಎಸ್ಪಿ ಸಲ್ವಿಂದ್ ಸಿಂಗ್, ಅಡುಗೆ ಸಹಾಯಕ ಮದನ್ ಗೋಪಾಲ್ ಮತ್ತು ಸಿಂಗ್ ಸ್ನೇಹಿತ ರಾಜೇಶ್‌ ವರ್ಮಾ ಅವರನ್ನು ಒಟ್ಟಿಗೆ ವಿಚಾರಣೆ ನಡೆಸಲಿದೆ.

ಈಗಾಗಲೇ ಎನ್‌ಐಎ ಎರಡು ಬಾರಿ ಸಲ್ವಿಂದರ್ ಸಿಂಗ್ ವಿಚಾರಣೆ ನಡೆಸಿದೆ. ಉಗ್ರರು ಸಿಂಗ್ ಅಪಹರಣ ಮಾಡುವಾಗ ಮದನ್ ಗೋಪಾಲ್ ಮತ್ತು ರಾಜೇಶ್ ಶರ್ಮಾ ಅವರು ಜೊತೆಗಿದ್ದರು. ಆದ್ದರಿಂದ, ಮೂವರನ್ನು ಒಟ್ಟಿಗೆ ವಿಚಾರಣೆ ನಡೆಸಲು ಎನ್‌ಐಎ ತೀರ್ಮಾನಿಸಿದೆ. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

punjab

ಸಾಕ್ಷಿಗಳಿಗಾಗಿ ಹುಡುಕಾಟ : ಎನ್‌ಐಎ ಅಧಿಕಾರಿಗಳ ತಂಡವೊಂದು ಪಠಾಣ್‌ ಕೋಟ್ ವಾಯಿನೆಲೆಗೆ ನುಗ್ಗಿದ್ದು, ಅಲ್ಲಿ ಸಾಕ್ಷಿಗಳಿಗಾಗು ಹುಡುಕಾಟ ನಡೆಸುತ್ತಿದೆ. ವಾಯುನೆಲೆಗೆ ನುಗ್ಗಿದ್ದ ಉಗ್ರರು ಅಲ್ಲಿ ಸ್ಫೋಟಕಗಳನ್ನು ಹುದುಗಿಸಿಟ್ಟಿರುವ ಶಂಕೆ ಇದೆ. ಉಗ್ರರು ಬಳಸುತ್ತಿದ್ದ ವಸ್ತುಗಳು ಅಲ್ಲಿ ಸಿಕ್ಕರೆ ಸಾಕ್ಷಿ ಲಭ್ಯವಾಗಲಿದೆ. ಆದ್ದರಿಂದ, ಅಧಿಕಾರಿಗಳ ತಂಡ ಹುಡುಕಾಟ ಆರಂಭಿಸಿದೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ವರದಿ ಕಳಿಸಿದ ಪಾಕಿಸ್ತಾನ : ಭಾರತದ ಒತ್ತಾಯಕ್ಕೆ ಮಣಿದು ಪಠಾಣ್‌ ಕೋಟ್ ವಾಯುನೆಲೆ ಮೇಲಿನ ದಾಳಿಯ ಸಂಚುಕೋರರ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಪಾಕಿಸ್ತಾನ ಭಾರತಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದೆ ಎಂದು ಪಾಕ್ ಹೇಳಿದೆ.

ವಾಯುನೆಲೆ ಮೇಲೆ ದಾಳಿ ನಡೆಸಿದ ಉಗ್ರರು ಕರೆ ಮಾಡಿದ್ದ ಬಗ್ಗೆ ಕೆಲವು ಮೊಬೈಲ್ ನಂಬರ್‌ಗಳನ್ನು ಭಾರತ ನೀಡಿತ್ತು. ಆದರೆ, ಈ ನಂಬರ್‌ಗಳು ನಮ್ಮ ದೇಶದ್ದಲ್ಲ ಎಂದು ಪಾಕ್ ತನ್ನ ವರದಿಯಲ್ಲಿ ಹೇಳಿದೆ. [ಟ್ಯಾಕ್ಸಿ ಚಾಲಕನ ಕೊಂದು ಪಾಕಿಸ್ತಾನಕ್ಕೆ ಕರೆ ಮಾಡಿದ ಉಗ್ರರು]

ಭಾರತ-ಪಾಕ್ ಶಾಂತಿ ಮಾತುಕತೆಗಳು ನಡೆಯುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರು ನವದೆಹಲಿಯಲ್ಲಿ ಇಂದು ಸಭೆ ನಡೆಸಿ, ಶಾಂತಿ ಮಾತುಕತೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

English summary
The Gurdaspur Superintendent of Police, Salwinder Singh, his cook Madan Gopal and friend Rajesh Varma will be questioned together by the National Investigation Agency in New Delhi. All the three of them were abducted by the terrorists who carried out the Pathankot terror attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X