ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸೈನಿಕರಿಗೆ ತಂತ್ರಜ್ಞಾನ ಪಾಠ ಕಲಿಸುವ ಸಿಂಪ್ಲಿಲರ್ನ್.ಕಾಂ

By Mahesh
|
Google Oneindia Kannada News

ಬೆಂಗಳೂರು, ಮೇ 13, 2016: ದೇಶದ ವೃತ್ತಿಪರ ಆನ್‍ಲೈನ್ ಕೋರ್ಸ್ ಗಳನ್ನು ನೀಡುತ್ತಿರುವ ಅತಿದೊಡ್ಡ ಸಂಸ್ಥೆಯಾಗಿರುವ ಸಿಂಪ್ಲಿಲರ್ನ್ ಮತ್ತು ಮಿಲಿಟರಿ ಟು ಕಾರ್ಪೊರೇಟ್ ಸಂಸ್ಥೆಗಳು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಮೂಲಕ ಮಾಜಿ ಸೈನಿಕರಿಗೆ ನಾಗರಿಕ ಸೇವಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗುವಂತೆ ಮಾಡಲಾಗುತ್ತದೆ.

ಮಿಲಿಟರಿ ಟು ಕಾರ್ಪೊರೇಟ್ ಮತ್ತು ಸಿಂಪ್ಲಿಲರ್ನ್ ಸಂಸ್ಥೆಗಳ ಈ ಒಪ್ಪಂದದ ಹಿನ್ನೆಲೆಯಲ್ಲಿ ಪ್ರತಿವರ್ಷ ನಿವೃತ್ತರಾಗುವ ಸುಮಾರು 60,000 ಪುರುಷ ಮತ್ತು ಮಹಿಳಾ ಮಾಜಿ ಸೈನಿಕರಿಗೆ ವೃತ್ತಿಪರ ತರಬೇತಿ ಕೋರ್ಸ್ ಗಳನ್ನು ನೀಡಿ ಅವರನ್ನು ನಾಗರಿಕ ಸೇವೆಗಳಲ್ಲಿ ತೊಡಗುವಂತೆ ಮಾಡಲಾಗುತ್ತದೆ.

ಸಿಂಪ್ಲಿಲರ್ನ್ ನತರಬೇತಿ ಮತ್ತು ಸರ್ಟಿಫಿಕೇಶನ್ ಕೋರ್ಸ್ ಗ ಆನ್‍ಲೈನ್ ಆಧಾರದಲ್ಲಿರುತ್ತವೆ. ಮಿಲಿಟರಿ ಕಲಿಕೆ ಆಧಾರದಲ್ಲಿರಲಿದ್ದು, ಫಲಿತಾಂಶ ಆಧಾರಿತ ಕೋರ್ಸ್ ಗಳಾಗಿರುತ್ತವೆ. ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ಬಿಗ್ ಡಾಟಾ, ಐಟಿ ಸೆಕ್ಯೂರಿಟಿ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಕೋರ್ಸ್‍ಗಳನ್ನು ನಮ್ಮ ಮಾಜಿ ಸೈನಿಕರಿಗೆ ನೀಡಲಾಗುತ್ತದೆ.

Simplilearn partners with MilitarytoCorporate to aid Indian military veterans transition into civilian workforce

ಈ ಸರ್ಟಿಫಿಕೇಶನ್ ಕೋರ್ಸ್ ಗಳು ರಿಯಾಯತಿ ದರದಲ್ಲಿ ಲಭ್ಯವಿರಲಿದ್ದು, ಈ ತರಬೇತಿ ಕೋರ್ಸ್ ಗಳನ್ನು ಪಡೆಯುವ ಮೂಲಕ ಮಾಜಿ ಸೈನಿಕರು ನಾಗರಿಕ ಸೇವಾ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಬಹುದು. ಅಲ್ಲದೇ, ಸೇನೆಯಲ್ಲಿ ಅವರು ಕಲಿತಿರುವ ಕೌಶಲ್ಯಗಳನ್ನು ಈ ತರಬೇತಿ ಕೋರ್ಸ್ ಗಳಲ್ಲಿ ಪ್ರದರ್ಶಿಸಬಹುದಾಗಿದೆ.

ಈ ಒಪ್ಪಂದದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಿಂಪ್ಲಿಲರ್ ನ ಸಿಒಒ ಗೆರಾಲ್ಡ್ ಜೈದೀಪ್: 'ದೇಶಕ್ಕೆ ಅತ್ಯಮೂಲ್ಯ ಸೇವೆ ಸಲ್ಲಿಸಿದ ನಮ್ಮ ಮಾಜಿ ಸೈನಿಕರಿಗೆ ಇದೀಗ ನಾಗರಿಕ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಾವು ಈ ಬೆಂಬಲ ನೀಡುತ್ತಿದ್ದೇವೆ. ಪ್ರಮುಖವಾಗಿ ತಂತ್ರಜ್ಞಾನ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‍ಗಳನ್ನು ಮಾಜಿ ಸೈನಿಕರಿಗೆ ನೀಡುತ್ತಿದ್ದೇವೆ. ನಮ್ಮ ರಕ್ಷಣೆ ಮತ್ತು ದೇಶಕ್ಕಾಗಿ ಹೋರಾಟ ಮಾಡಿ ಬರುವ ಈ ಸೈನಿಕರಿಗೆ ನಮ್ಮದೇ ಈ ಕೋರ್ಸ್‍ಗಳನ್ನು ಹೇಳಿಕೊಡುವ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ'' ಎಂದರು.

ಮಿಲಿಟರಿ ಟು ಕಾರ್ಪೊರೇಟ್ ಸಂಸ್ಥೆಯ ಸಹ ಸಂಸ್ಥಾಪಕ ಸನ್ನಿ ಮಾಕ್ರೂ: "ಕಾರ್ಪೊರೇಟ್ ಸಂಸ್ಥೆಗಳು ಮತ್ತು ಮಾಜಿ ಸೈನಿಕ ಸಮುದಾಯಗಳು ಪರಸ್ಪರ ತಮ್ಮ ಚಿಂತನೆಗಳು, ವಿಚಾರಗಳು ಮತ್ತು ಅವಕಾಶಗಳನ್ನು ವಿನಿಮಯ ಮಾಡಿಕೊಳ್ಳಲು ವೇದಿಕೆಯನ್ನು ಒದಗಿಸುತ್ತಿದ್ದೇವೆ.

ಇದು ಕರ್ತವ್ಯ ನಿರತ ಸ್ಥಳಗಳಲ್ಲಿ ವೈವಿಧ್ಯತೆ ಮತ್ತು ಉತ್ತೇಜನಾಶೀಲತೆಯನ್ನು ತರಲು ಸಹಕಾರಿಯಾಗುತ್ತದೆ. ಸಿಂಪ್ಲಿಲರ್ನ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದದಿಂದಾಗಿ ಮಾಜಿ ಸೈನಿಕರು ನಾಗರಿಕ ಸೇವೆಯ ಎರಡನೇ ಇನ್ನಿಂಗ್ಷ್ ಆರಂಭಿಸಲು ನೆರವಾಗುತ್ತದೆ. ಅಲ್ಲದೇ, ದೇಶಕ್ಕಾಗಿ ಸೇವೆ ಸಲ್ಲಿಸಿದವರಿಗೆ ನಾವು ಸೇವೆ ಮಾಡಲು ವೇದಿಕೆಯೊಂದು ನಿರ್ಮಾಣವಾದಂತಾಗುತ್ತದೆ'' ಎಂದು ಸಂತಸ ವ್ಯಕ್ತಪಡಿಸಿದರು.

ಮಿಲಿಟರಿ ಟು ಕಾರ್ಪೊರೇಟ್ ಸಂಸ್ಥೆಗೆ ಮಾಜಿ ಸೈನಿಕರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವ ವ್ಯಾಪಕ ಅನುಭವ ಇದೆ. ಮಾರುಕಟ್ಟೆಯ ಬೇಡಿಕೆ ಮತ್ತು ಮಾಜಿ ಸೈನಿಕರ ಅಗತ್ಯತೆಗೆ ಅನುಗುಣವಾಗಿ ಸಂಸ್ಥೆ ಕೆಲಸ ಮಾಡುತ್ತಿದೆ. ಈ ಸರ್ಟಿಫಿಕೇಶನ್ ಕೋರ್ಸ್ ಗಳ ಮೂಲಕ ಮಾಜಿ ಸೈನಿಕರು ತಮ್ಮಲ್ಲಿರುವ ಕೌಶಲ್ಯಗಳನ್ನು ಕಾರ್ಪೊರೇಟ್ ಕ್ಷೇತ್ರಕ್ಕೆ ಧಾರೆ ಎರೆಯಬಹುದಾಗಿದೆ.

English summary
MilitarytoCorporate and Simplilearn will provide training certification opportunity to over 60,000 ex-service men and women who retire every year from active service thus aiding them to transition to civilian life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X