ವಿಶಾಲ್ ಸಿಕ್ಕಾ V/S ಸಂಸ್ಥಾಪಕರು: ಇನ್ಫೋಸಿಸ್ ನಲ್ಲೇನಿದು ಗಲಾಟೆ?

Subscribe to Oneindia Kannada

ಬೆಂಗಳೂರು, ಫೆಬ್ರವರಿ 9: ದೇಶದ ಪ್ರತಿಷ್ಠಿತ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶಾಲ್ ಸಿಕ್ಕಾ ಮತ್ತು ಸಂಸ್ಥಾಪಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಆದರೆ ಈ ಸುದ್ದಿಯನ್ನು ನಿನ್ನೆಯಷ್ಟೇ (ಫೆ. 8) ಇನ್ಫೋಸಿಸ್ ನಿರಾಕರಿಸಿದ್ದು, 'ನಮ್ಮ ನಡುವೆ ಅಂಥ ಯಾವುದೇ ಭಿನ್ನಾಭಿಪ್ರಾಯವಿಲ್ಲ' ಎಂದಿದೆ.[ಸ್ಕಾವಾ' ಖರೀದಿಸಿದ ಐಟಿ ದಿಗ್ಗಜ ಇನ್ಫೋಸಿಸ್]

ಕಂಪೆನಿಯಲ್ಲಿ ಇಂಥಹದ್ದೊಂದು ಗೊಂದಲು ಮೂಡಲು ಮೂಲ ಕಾರಣವಾಗಿದ್ದು ಸಂಸ್ಥೆಯ ಸಿಇಒ ವಿಶಾಲ್ ಸಿಕ್ಕಾ ಸಂಬಳ ಹೆಚ್ಚು ಮಾಡಿದ್ದು. ಇದಕ್ಕೆ ಸಂಸ್ಥಾಪಕರಾದ ಎನ್. ಆರ್. ನಾರಾಯಣ ಮೂರ್ತಿ, ನಂದನ್ ನೀಲೇಕಣಿ ಮತ್ತು ಕ್ರಿಸ್ ಗೋಪಾಲಕೃಷ್ಣನ್ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದರು ಎಂಬುದು ಸುದ್ದಿಯಾಗಿತ್ತು. ಆದರೆ ಸಿಕ್ಕಾಗೆ ಸಂಬಳ ಹೆಚ್ಚಿಸಿರುವುದನ್ನು ಇನ್ಫೋಸಿಸ್ ಸಮರ್ಥಿಸಿಕೊಂಡಿದೆ. ಕಂಪೆನಿಯ ಹಿತಾಸಕ್ತಿಯೇ ಈ ನಿರ್ಧಾರಕ್ಕೆ ಕಾರಣ ಎಂದಿದೆ.[2017ರಲ್ಲಿ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಆರಂಭ]

ಹಾಗಾದರೆ ಸಿಕ್ಕಾ ಪಡೆಯುತ್ತಿರುವ ಸಂಬಳದಲ್ಲಾದ ವ್ಯತ್ಯಾಸಗಳೇನು? ಸದ್ಯ ಸಿಇಒಗೆ ಎಷ್ಟು ಸಂಬಳ ನೀಡಲಾಗುತ್ತಿದೆ? ಸಿಕ್ಕಾ ಸಂಬಳದ ಸಂಪುರ್ಣ ವಿವರಗಳು ಇಲ್ಲಿವೆ,

73.7 ಕೋಟಿ ಸಂಬಳ

73.7 ಕೋಟಿ ಸಂಬಳ

ಸದ್ಯ 2017ನೇ ವರ್ಷದಲ್ಲಿ ಸಿಕ್ಕಾ ಪಡೆಯಲಿರುವ ವಾರ್ಷಿಕ ಸಂಬಳವನ್ನು 73.7 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. ಈ ಹಿಂದೆ 2016ರಲ್ಲಿ ಅವರಿಗೆ 47.4 ಕೋಟಿ ರೂಪಾಯಿ ಸಂಬಳ ನೀಡಲಾಗುತ್ತಿತ್ತು. ಈ ಮೂಲಕ ಏಕಾಏಕಿ 26.3 ಕೋಟಿ ರೂಪಾಯಿ ವೇತನ ಹೆಚ್ಚಿಸಲಾಗಿದೆ.

6.7 ಕೋಟಿ ಮೂಲ ವೇತನ

6.7 ಕೋಟಿ ಮೂಲ ವೇತನ

ವಿಶಾಲ ಸಿಕ್ಕಾ ಕಂಪೆನಿಯ ಮೊದಲ ಸಂಸ್ಥಾಪಕೇತರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ. ಅವರು ಸುಮಾರು 6.7 ಕೋಟಿ ರೂಪಾಯಿ ಮೂಲ ವೇತನ ಪಡೆಯುತ್ತಾರೆ. 73.7 ಕೋಟಿಯಲ್ಲಿ ಉಳಿದ ಹಣ ಭತ್ಯೆ, ಲಾಭಾಂಶ ಮುಂತಾದ ರೂಪದಲ್ಲಿ ಅವರಿಗೆ ನೀಡಲಾಗುತ್ತದೆ.

ಮೂರ್ತಿ ಸಿದ್ಧಾಂತ

ಮೂರ್ತಿ ಸಿದ್ಧಾಂತ

ಸಿಕ್ಕಾ ಸಂಬಳ ಈ ರೀತಿ ಹೆಚ್ಚಾಗಿದ್ದಕ್ಕೆ ಸಂಸ್ಥಾಪಕರು ಸಿಟ್ಟಾಗಿದ್ದಾರೆ ಎಂಬುದು ಒಂದು ಸುದ್ದಿ. ಈ ಹಿಂದೆ ಸ್ವತಃ ನಾರಾಯಣ ಮೂರ್ತಿ ಸಿದ್ಧಾಂತವೊಂದನ್ನು ಮಂಡಿಸಿದ್ದರು. ಅದರ ಪ್ರಕಾರ ಕಂಪೆನಿಯಲ್ಲಿ ಮಧ್ಯಮ ಸಂಬಳ ಪಡೆಯುವವರಿಗೂ, ಅತೀ ಹೆಚ್ಚು ಸಂಬಳ ಪಡೆಯುವವರಿಗೂ 1:50 ರಿಂದ 1:60 ರಷ್ಟು ಮಾತ್ರ ವ್ಯತ್ಯಾಸ ಇರಬೇಕು ಎಂದು ವಾದಿಸಿದ್ದರು. ಅಂದರೆ ಒಬ್ಬ ಮಧ್ಯಮ ಸಂಬಳ ಪಡೆಯುವವನ ಸಂಬಳದ 50 ರಿಂದ 60 ಪಟ್ಟು ಸಂಬಳವಷ್ಟೆ ಸಿಇಒ ಮುಂತಾದವರಿಗೆ ನೀಡಬೇಕು ಎಂಬುದು. ಆದರೆ ಸದ್ಯ ಸಿಕ್ಕಾ ಸಂಬಳ ನಾರಾಯಣ ಮೂರ್ತಿ ವಾದಕ್ಕಿಂತ ತೀರಾ ಜಾಸ್ತಿಯಾಗಿದೆ.

ಯಾರಿಗೂ ಇಲ್ಲ ಬೊಂಬಾಟ್ ಗಿಫ್ಟ್

ಯಾರಿಗೂ ಇಲ್ಲ ಬೊಂಬಾಟ್ ಗಿಫ್ಟ್

ಹಾಗೆ ನೋಡಿದರೆ ಕಂಪೆನಿಯ ಉಳಿದ ನೌಕರರಿಗೆ ವರ್ಷಕ್ಕೆ ಶೇಕಡಾ 6-8ರಷ್ಟು ಸಂಬಳ ಹೆಚ್ಚು ಮಾಡಲಾಗುತ್ತದೆ. ಆದರೆ ವಿಶಾಲ್ ಸಿಕ್ಕಾಗೆ ಮಾತ್ರ ಶೇಕಡಾ 55 ರಷ್ಟು ಸಂಬಳವನ್ನು ಒಮ್ಮೆಗೆ ಏರಿಕೆ ಮಾಡಲಾಗಿದೆ.

ಪ್ರತಿವಾದ

ಪ್ರತಿವಾದ

ಈ ಹಿಂದೆ ಕಂಪೆನಿಯ ಕಾರ್ಯ ನಿರ್ವಾಹಣಾಧಿಕಾರಿಗಳಾಗಿದ್ದವರು ಕಂಪೆನಿಯ ಸಂಸ್ಥಾಪಕರೇ ಆಗಿದ್ದರು. ಅವರ ಕೈಯಲ್ಲಿ ಷೇರುಗಳಿದ್ದರಿಂದ ಲಾಭಾಂಶದ ಪ್ರಮಾಣ ದೊಡ್ಡಮಟ್ಟದಲ್ಲಿ ಅವರ ಕೈಗೆ ಸಿಗುತಿತ್ತು. ಆದರೆ ಸಿಕ್ಕಾ ಹಾಗಲ್ಲ. ಸಿಕ್ಕಾಗೆ ಕಂಪೆನಿಯಲ್ಲಿ ಷೇರುಗಳಿಲ್ಲ. ಹಾಗಾಗಿ ಹೆಚ್ಚಿನ ಸಂಬಳ ಕೇಳುತ್ತಿದ್ದಾರೆ ಎಂಬ ವಾದವಿದೆ.

ಸಿಕ್ಕಾ ಆಪ್ತರ ವಾದ

ಸಿಕ್ಕಾ ಆಪ್ತರ ವಾದ

ಸಿಕ್ಕಾ ಆಪ್ತರ ಪ್ರಕಾರ ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ 'ಸ್ಯಾಪ್ ಲ್ಯಾಬ್ಸ್' ಕಂಪೆನಿಯ ಸಂಬಳಕ್ಕಿಂತ ಇನ್ಫೋಸಿಸ್ ನಲ್ಲಿ ಕಡಿಮೆ ವೇತನ ಪಡೆಯುತ್ತಿದ್ದಾರಂತೆ. ಇದೇ ವಾದವನ್ನೂ ಇನ್ಫೋಸಿಸ್ ಕೂಡಾ ಹೇಳುತ್ತಿದೆ. ನಾವು ಸಂಬಳ ಕೊಡುವುದು ಕಡಿಮೆ. ಆದರೆ 'ರೆಸ್ಟ್ರಿಕ್ಟೆಡ್ ಸ್ಟಾಕ್ ಯುನಿಟ್' ರೂಪದಲ್ಲಿ ಟಾರ್ಗೆಟ್ ಮುಟ್ಟಿದರೆ ಉಳಿದ ಹಣ ನೀಡುತ್ತೇವೆ ಎನ್ನುತ್ತಿದೆ. ಅದರ ಪ್ರಕಾರ ಕಂಪೆನಿಯ ಲಾಭವನ್ನು ಈ ವರ್ಷ 1.34 ಲಕ್ಷ ಕೋಟಿಗೆ ಏರಿಸುವ ಬಲು ಕಠಿಣ ಗುರಿಯನ್ನು ಸಿಕ್ಕಾ ಮುಂದಿಡಲಾಗಿದೆ.

ಸಂಸ್ಥಾಪಕರ ಪಾಲೆಷ್ಟು?

ಸಂಸ್ಥಾಪಕರ ಪಾಲೆಷ್ಟು?

ಸದ್ಯ 2016ರ ಅಂತ್ಯಕ್ಕೆ ಇನ್ಫೋಸಿಸ್ ಸಂಸ್ಥಾಪಕರು ಮತ್ತು ಅವರ ಕುಟುಂಬ ಸದಸ್ಯರು ಕಂಪೆನಿಯಲ್ಲಿ ಶೇಕಡಾ12.75 ರಷ್ಟು ಷೇರುಗಳನ್ನು ಹೊಂದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A rift was erupted between CEO Vishal Sikka and founders in nations popular software giant Infosys. One and only reason behind this tension was Vishal Sikka’s salary hike.
Please Wait while comments are loading...