ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ಹಯ್ಯಾ ಕುಮಾರ್‌ನನ್ನು ಶೂಟ್ ಮಾಡಿದರೆ 11 ಲಕ್ಷ ನಗದು!

|
Google Oneindia Kannada News

ನವದೆಹಲಿ, ಮಾರ್ಚ್, 05: "ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜವಾಹರಲಾಲ್ ನೆಹರು ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ನನ್ನು ಶೂಟ್ ಮಾಡಿ ಕೊಲ್ಲುವವರಿಗೆ 11 ಲಕ್ಷ ರು.!"

ಹೌದು...ಇಂಥದ್ದೊಂದು ಭಿತ್ತಿ ಪತ್ರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾಣಿಸಿಕೊಂಡಿವೆ. ನವದೆಹಲಿಯ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿರುವ ಚಿಕ್ಕ ಗಾತ್ರದ ಈ ಪೋಸ್ಟರ್‌ಗಳಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದ ಜನರಿಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಪೂರ್ವಾಂಚಲ ಸೇನೆ ಮತ್ತು ಅದರ ಅಧ್ಯಕ್ಷ ಆದರ್ಶ ಶರ್ಮಾ ಅವರ ಹೆಸರು ಕಂಡು ಬಂದಿದೆ.[ಮೋದಿ ಬಗ್ಗೆ ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?]

jnu

"ದೇಶದ್ರೋಹಿ ಕನ್ಹಯ್ಯಾ ಕುಮಾರ್‌ನನ್ನು ಶೂಟ್‌ ಮಾಡಿ ಕೊಲ್ಲುವ ಯಾರಿಗೇ ಆದರೂ ಪೂರ್ವಾಂಚಲ ಸೇನೆ 11 ಲಕ್ಷ ರೂ. ಇನಾಮು ನೀಡಲಿದೆ' ಎಂದು ಹಿಂದಿಯಲ್ಲಿ ಬರೆಯಲಾಗಿದೆ.[ಕನ್ಹಯ್ಯಾ ಕುಮಾರ್ ಘೋಷಣೆ ಕೂಗಿದ 2 ವಿಡಿಯೋ ನಕಲಿ!]

ನಾಲಿಗೆ ಕತ್ತರಿಸುವವರಿಗೆ 5 ಲಕ್ಷ
ಕನ್ಹಯ್ಯಾ ಕಮಾರ್‌ನ ನಾಲಗೆಯನ್ನು ಕತ್ತರಿಸಿ ತರುವವರಿಗೆ ಐದು ಲಕ್ಷ ರೂ. ನಗದು ಇನಾಮು ಕೊಡುವುದಾಗಿ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ನಾಯಕ ಕುಲದೀಪ್ ವರ್ಶ್ನೆ ಇನ್ನೊಂದೆಡೆ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿ ಮಾಡಿದೆ.

ಇನ್ನೊಬ್ಬ ಜಿನ್ನಾ ಹುಟ್ಟಲು ಬಿಡುವುದಿಲ್ಲ
ಕನ್ಹಯ್ಯಾ ಮೇಲೆ ವಾಗ್ದಾಳಿ ಮಾಡಿರುವ ಬಿಜೆಪಿ ಸಂಸದ ಯೋದಿ ಆದಿತ್ಯನಾಥ್, ಜೆಎನ್‌ಯುನಲ್ಲಿ ಮುಹಮ್ಮದ್ ಅಲಿ ಜಿನ್ನಾರಂತ ಇನ್ನೊಬ್ಬರನ್ನು ಹುಟ್ಟಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ದೇಶದ್ರೋಹದ ಚಟುವಟಿಕೆ ನಡೆಸುವ ಯಾರನ್ನೇ ಆದರೂ ನಾಶ ಮಾಡದೇ ಬಿಡುವುದಿಲ್ಲ ಎಂದು ಅಬ್ಬರಿಸಿದ್ದಾರೆ.

English summary
JNU row: Posters offering a reward of Rs 11 lakh to anyone who shoots dead JNU student leader Kanhaiya Kumar, who was released on bail two days ago, have surfaced in the national capital. Kuldeep Varshney, Badaun district chief of the Bharatiya Janata Yuva Morcha (BJYM), the BJP's youth wing, has been expelled from the party for six years hours after he declared Rs 5 lakh prize money for one who severes the tongue of Kanhaiya Kumar, the JNU Students' Union president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X