ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ ಭೂಕಂಪ :ಭೀಕರ, ಭಯಾನಕ ವಿಡಿಯೋಗಳು

By Mahesh
|
Google Oneindia Kannada News

ಕಠ್ಮಂಡು, ಏ.28: ನೇಪಾಳದಲ್ಲಿ ಸರಣಿಯಾಗಿ ಭೂಮಿ ಕಂಪಿಸಿ ಮೂಲಕ ಹುಲುಮಾನವನಿಗೆ ಸ್ಥಿರವಾಗಿ ನಿಲ್ಲದಂತೆ ಮಾಡಿದೆ. ಹಿಮಾಲಯದ ತಪ್ಪಲಿನಲ್ಲಿ ಸಂಭವಿಸಿದ ಈ ಮಹಾ ದುರಂತದಿಂದ ನೇಪಾಳವಷ್ಟೇ ಅಲ್ಲ ಭಾರತ ಉಪಖಂಡ ಕೂಡಾ ಬೆಚ್ಚಿದೆ.

ಭೂಕಂಪದ ನಂತರದ ಪರಿಣಾಮಗಳು ಇನ್ನೂ ನಿಂತಿಲ್ಲ, ಆತಂಕದ ವಾತಾವರಣ ಸೃಷ್ಟಿಸಿ ನಡುಕ ಹುಟ್ಟಿಸಿದ ಈ ವಿಕೋಪದ ಕೆಲ ವಿಡಿಯೋ ತುಣುಕುಗಳು ಇಲ್ಲಿವೆ

ಭೂಕಂಪನ ಅನುಭವ ಕೆಲ ಸೆಕೆಂಡುಗಳಿಂದ ಕೆಲ ನಿಮಿಷಗಳ ತನಕ ಇರಬಹುದು. ಅದರೆ, ನಂತರ ಧರೆಗೆ ಕುಸಿಯುವ ಮನೆ, ಕಟ್ಟಡ, ಐತಿಹಾಸಿಕ ಸ್ಮಾರಕಗಳು ಮನುಷ್ಯನ ನಂಬಿಕೆಯ ಸೌಧವನ್ನೇ ಅಲ್ಲಾಡಿಸಿ ಬಿಡುತ್ತದೆ. ಪ್ರಕೃತಿಯ ಆಟದ ಮುಂದೆ ಎಲ್ಲವೂ ಗೌಣ ಎಂಬ ಮಾತು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು. ನೇಪಾಳದ ವಿವಿಧೆಡೆ ಉಂಟಾದ ಕಂಪನದ ಅನುಭವದ ಕಥೆ ಹೇಳುವ ಸಿಸಿಟಿವಿ ದೃಶ್ಯಾವಳಿಗಳ ಸಂಗ್ರಹ ಇಲ್ಲಿದೆ...

ಸಾವಿನ ಸಂಖ್ಯೆ 10,000ಕ್ಕೆ ಏರಿಕೆ : ಪ್ರಧಾನಿ ಕೊಯಿರಾಲ

ಸಾವಿನ ಸಂಖ್ಯೆ 10,000ಕ್ಕೆ ಏರಿಕೆ : ಪ್ರಧಾನಿ ಕೊಯಿರಾಲ

ನೇಪಾಳ ಭೂಕಂಪದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 10,000ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ನೇಪಾಳ ಪ್ರಧಾನಿ ಸುಶೀಲ್ ಕುಮಾರ್ ಕೊಯಿರಾಲ ಹೇಳಿದ್ದಾರೆ. 1934ರಲ್ಲಿ ಸಂಭವಿಸಿದ ಭೂಕಂಪದಲ್ಲಿ 8,500 ಮಂದಿ ಬಲಿಯಾಗಿದ್ದರು. ಈ ಬಾರಿ ಪ್ರಕೃತಿಯ ರುದ್ರನರ್ತನಕ್ಕೆ ಮಾನವ ತಲೆ ಬಾಗಿದ್ದಾನೆ.

50 ಭಯ ಹುಟ್ಟಿಸುವ ದೃಶ್ಯಗಳು

7.9 ರಿಕ್ಚರ್ ಮಾಪಕದಲ್ಲಿ ಪ್ರಮಾಣದ ಭೂಕಂಪನ ಏ.25ರಂದು ಸಂಭವಿಸಿದ ನಂತರ ನಿರಂತರವಾಗಿ ಕಂಪನಗಳು ಉಂಟಾಗುತ್ತಲೇ ಇವೆ., ಪೋಖರಾ, ಲುಜುಂಗ್ ಕೇಂದ್ರ ಬಿಂದುವಿನಿಂದ ನೂರಾರು ಕಿ.ಮೀ ದೂರದವರೆಗೂ ಇದರ ಪರಿಣಾಮ ಎದುರಿಸಬೇಕಾಗಿದೆ.

ಪೋಕರಾದ ಶಾಪಿಂಗ್ ಮಾಲ್ ನಲ್ಲಿ

ಭೂಕಂಪದ ಸಂದರ್ಭದಲ್ಲಿ ಪೋಕರಾದ ಶಾಪಿಂಗ್ ಮಾಲ್ ನಲ್ಲಿ ಕಂಡು ಬಂದ ದೃಶ್ಯ

ಕಠ್ಮಂಡುವಿನ ಈಜುಕೊಳವೊಂದರ ದೃಶ್ಯ

ಕಠ್ಮಂಡುವಿನ ಈಜುಕೊಳವೊಂದರ ದೃಶ್ಯ ಹೀಗಿತ್ತು.

ಲಮ್ಜುಂಗ್ ನಿಂದ ಹರಿದು ಬಂದ ಕಂಪನಗಳು

ಲಮ್ಜುಂಗ್ ನಿಂದ 35 ಕಿ.ಮೀ ನಲ್ಲಿ ಕೇಂದ್ರಿಕೃತವಾದ ಭೂಕಂಪ 7.9 ರಿಕ್ಚರ್ ಮಾಪಕದಲ್ಲಿ ದಾಖಲಾಗಿದ್ದು, ಸಿಸಿಟಿವಿ ದೃಶ್ಯವೊಂದರಲ್ಲಿ ಕಂಡು ಬಂದಿದ್ದು ಹೀಗೆ

rn

ಏನಾಗುತ್ತಿದೆ ಎಂದು ತಿಳಿಯದೆ ಕಂಗಾಲು

ಏನಾಗುತ್ತಿದೆ ಎಂದು ತಿಳಿಯದೆ ಜನತೆ ಕಂಗಾಲು.

English summary
Shocking videos of the ill-fated Nepal earthquake (on April 25th) have emerged and making rounds of the Internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X