ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕೆ ಹೆಸರು ಸೋನಿ: ವಿಡಿಯೋದಲ್ಲಿ ಹೇಳಿದ ಹಾಗೇ ಸತ್ತುಹೋದಳು

|
Google Oneindia Kannada News

ಉತ್ತರಪ್ರದೇಶ, ಆಗಸ್ಟ್ 26: 'ನನ್ನ ತಂದೆ, ಸೋದರ ನನ್ನನ್ನು ಕೊಲ್ಲಬೇಕು ಅಂತಿದ್ದಾರೆ. ಅದಕ್ಕೆ ನನ್ನನ್ನ ಹಳ್ಳಿಗೆ ಕರೆದುಕೊಂಡು ಹೋಗ್ತಿದ್ದಾರೆ. ನನ್ನ ಜೀವಕ್ಕೆ ಅಪಾಯ ಇದೆ' -ಆ ಹೆಣ್ಣುಮಗಳು ರೈಲಿನ ಶೌಚಾಲಯದಲ್ಲಿ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ.

ಹ್ಯಾಂಡ್ಸ್ ಫ್ರೀಯ ಮೈಕ್ ಬಾಯಿಯ ಹತ್ತಿರ ಇಟ್ಟುಕೊಂಡು, 'ನನಗೇನಾದರೂ ಆದರೆ ಅದಕ್ಕೆ ಇವರೇ ಕಾರಣ, ನಾನು ಇಮ್ರಾನ್ ನನ್ನು ಮದುವೆ ಆಗಬೇಕು' ಎಂದಿದ್ದಾಳೆ. ಆದರೆ ಈ ವಿಡಿಯೋ ಸ್ಪಷ್ಟವಾಗಿಲ್ಲ, ಮಂಗಳವಾರ ಈ ವಿಡಿಯೋ ವೈರಲ್ ಆಗಿದೆ. ಅದಾದ ಮೇಲೆ 26 ವರ್ಷದ ಸೋನಿ ಸಾವನ್ನಪ್ಪಿದ್ದಾಳೆ.[ನ.1ರಂದು ಬಯಲು ಶೌಚ ಮುಕ್ತ ರಾಜ್ಯಕ್ಕೆ ಮೋದಿ]

Soni

ಆನ್ ಲೈನ್ ನಲ್ಲಿ ಈ ವಿಡಿಯೋ ನೋಡಿದ ನಂತರ ಪೊಲೀಸರು ಉತ್ತರ ಪ್ರದೇಶದ ಪಶ್ಚಿಮದಲ್ಲಿರುವ ಆಕೆಯ ಗ್ರಾಮ ಹರಿತ್ರಸ್ ಗೆ ಹೋಗಿದ್ದಾರೆ. ವಿಡಿಯೋ ಆಧಾರದ ಮೇಲೆ ಆಕೆಯ ತಂದೆ, ತಾಯಿ ಹಾಗೂ ನಾಲ್ವರು ಸೋದರರು ಸೇರಿ ಕುಟುಂಬದ ಆರು ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಈಗ ಎಲ್ಲರೂ ತಲೆ ಮರೆಸಿಕೊಂಡಿದ್ದಾರೆ.[ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ]

ಈ ಕುಟುಂಬ ಮುಂಬೈನಲ್ಲಿ ವಾಸವಿದ್ದು, ಸೋನಿಯನ್ನು ಉತ್ತರಪ್ರದೇಶದ ಹಳ್ಳಿಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಸೋನಿ ದೇಹದ ಮೇಲೆ ಯಾವುದೇ ಗುರುತು ಪತ್ತೆಯಾಗಿಲ್ಲ. ಆಕೆ ಹೇಗೆ ಸಾವನ್ನಪ್ಪಿದ್ದಾಳೆ ಎಂದು ಶವ ಪರೀಕ್ಷೆಯಿಂದ ಗೊತ್ತಾಗಿಲ್ಲ. ಸ್ಯಾಂಪಲ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.[ರಸಗೊಬ್ಬರ ಸಬ್ಸಿಡಿ ನೇರವಾಗಿ ರೈತರ ಖಾತೆಗೆ]

ಕೆಲ ದಿನಗಳ ಹಿಂದೆ ಕುಟುಂಬದವರ ಜತೆಗೆ ಸೋನಿ ಹಳ್ಳಿಗೆ ಬಂದಳು. ಕಳೆದ ಶುಕ್ರವಾರ, ಕುಟುಂಬದವರು ಸೋನಿ ತೀರಿಹೋದಳು ಅಂದರು, ಆದರೆ ಕಾರಣ ಹೇಳಲಿಲ್ಲ ಎಂದು ಹಳ್ಳಿಗರು ಹೇಳುತ್ತಾರೆ.

'ನಮಗೆ ಆ ಹುಡುಗಿ ತೀರಿಹೋದಳು ಅಂದರು. ಆಗ ಬೆಳಗ್ಗೆ 5 ಗಂಟೆ. ನಾವು ಆ ಮನೆಗೆ ಹೋದ್ವಿ. ಶುಕ್ರವಾರ ಅವಳು ಸತ್ತುಹೋದಳು, ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ನಡೆಯಿತು ಎಂದು ಹೇಳಿದರು' ಎಂದು ನೆರೆಮನೆಯ ಮೊಹಮ್ಮದ್ ಶಾಹಿದ್ ಹೇಳುತ್ತಾರೆ.[ಈ ಮುಸ್ಲಿಂ ಕುಟುಂಬದಲ್ಲಿ 30ನೇ ಕೃಷ್ಣ ಜನ್ಮಾಷ್ಟಮಿ ಸಂಭ್ರಮ]

ಆ ವಿಡಿಯೋ ಸರಿಯಾಗಿ ಆಗಿಲ್ಲ. ಪೊಲೀಸರ ತಂಡವೊಂದನ್ನು ಮುಂಬೈಗೆ ಕಳಿಸಲಾಗಿದೆ. ಆ ವಿಡಿಯೋದಲ್ಲಿ ಹೇಳಿರುವ ಇಮ್ರಾನ್ ನನ್ನು ಕಾಂಟ್ಯಾಕ್ಟ್ ಮಾಡುವುದಕ್ಕೆ ಅವರು ಪ್ರಯತ್ನಿಸುತ್ತಿದ್ದಾರೆ. ಆ ವಿಡಿಯೋ ಸಹಾಯದಿಂದಲೇ ಎಲ್ಲ ಮಾಹಿತಿ ಸಿಕ್ಕಿತು. ಅದನ್ನೇ ಎಫ್ ಐಆರ್ ಅಂತ ಆರು ಜನರ ವಿರುದ್ಧ ಕೇಸ್ ಮಾಡಿದ್ದೀವಿ ಎನ್ನುತ್ತಾರೆ ಹರಿತ್ರಸ್ ನ ಹಿರಿಯ ಪೊಲೀಸ್ ಅಧಿಕಾರಿ ರಾಮ್ ಮೂರತ್ ಯಾದವ್.

ಆ ವಿಡಿಯೋ ಬಗ್ಗೆ ಪೊಲೀಸರಿಗೂ ಯಾವುದೇ ಮಾಹಿತಿ ಇಲ್ಲ. ನೋಡುವಾಗ ರೈಲಿನ ಟಾಯ್ಲೆಟ್ ನಲ್ಲಿ ರೆಕಾರ್ಡ್ ಆಗಿರಬಹುದು ಎನಿಸುತ್ತದೆ. ಜತೆಗೆ ಇದನ್ನು ಬೇರೆ ಯಾರಾದರೂ ರೆಕಾರ್ಡ್ ಮಾಡಿರಬಹುದು, ಆದರೆ ಯಾರು ಅಂತ ಗೊತ್ತಾಗಬೇಕು ಎನ್ನುತ್ತಾರೆ ಪೊಲೀಸರು.

English summary
'My father, my brother want to kill me, that's why they are taking me back to my village. My life is in danger.' In a mobile video taken inside what appears to be a toilet on a moving train.The video went viral on Tuesday. By then, Soni, 26, was dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X