ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲು ಮುರಿದು ಕೊಂದವರಿಗೆ 'ಶಕ್ತಿಮಾನ್' ಪತ್ರ

By ಮಪ
|
Google Oneindia Kannada News

ರಿಗೆ,
ಸರ್ವ ಪ್ರತಿಭಟನಾಕಾರರು
(ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕಾರ್ಮಿಕ ಸಂಘಟನೆ, ಎಲ್ಲರೂ)

"45 ದಿನ ಯಮಯಾತನೆ ಅನುಭವಿಸಿ ನಾನಿಂದು ಪ್ರಾಣ ಬಿಟ್ಟಿದ್ದೇನೆ. ನನ್ನ ಸಾವಿನ ನಂತರವೂ ನಿಮ್ಮ ಆರೋಪ- ಪ್ರತ್ಯಾರೋಪಗಳು ಮುಂದುವರಿದಿವೆ. ನೀವು ಬದಲಾಗುವರಲ್ಲ ಎನ್ನುವುದು ನನಗೆ ಗೊತ್ತಿದೆ.

ಪೊಲೀಸರ ಜತೆ ದೇಶ ಸೇವೆ ಮಾಡುತ್ತಿದ್ದ ನನ್ನ ಕಾಲನ್ನು ಮುರಿದು ಹಾಕಿದಿರಿ. ಚಿಕಿತ್ಸೆಯನ್ನು ನೆಪ ಮಾತ್ರಕ್ಕೆ ನೀಡಿದಿರಿ. ಇದೀಗ ನನ್ನ ಸಾವು ನಿಮಗೆಲ್ಲಾ ಆನಂದ ತಂದಿದೆ ಅಂದುಕೊಂಡಿದ್ದೇನೆ.[ಯಮಯಾತನೆ ಅನುಭವಿಸಿ ನಮ್ಮನ್ನಗಲಿದ 'ಶಕ್ತಿಮಾನ್']

Shaktimaan

ಕಾಲು ಮುರಿಯುವ ತಪ್ಪು ನಾನೇನು ಮಾಡಿದ್ದೆ.? ನಿಮ್ಮ ಪ್ರತಿಭಟನೆ ಯಾರ ವಿರುದ್ಧ ಇತ್ತೋ ಅವರೊಂದಿಗೆ ಸೆಣೆಸಬೇಕಾಗಿತ್ತು. ಅದನ್ನು ಬಿಟ್ಟುಭದ್ರತೆಯ ಜವಾಬ್ದಾರಿ ಹೊತ್ತಿದ್ದ ನನ್ನ ಮೇಲೇಕೆ ದರ್ಪ ತೋರಿಸಿದಿರಿ?

ನನಗೆ ನೀವೇ ಕೊಟ್ಟ ಹೆಸರು ಶಕ್ತಿಮಾನ್. ನನ್ನ ಜಾಗದಲ್ಲಿ ನಿಮ್ಮ ಸಮಾಜದ ಯಾರಾದರೂ ಇದ್ದಿದ್ದರೆ ಸುಮ್ಮನೆ ಕುಳಿತು ಕೊಳ್ಳುತ್ತಿದ್ದೀರಾ? ಮತ್ತೆ ಬೀದಿಗೆ ಇಳಿದು ಸಾರ್ವಜನಿಕ ಆಸ್ತಿ ಹಾನಿ ಮಾಡುತ್ತಿದ್ದೀರಿ.. ಜಲ್ಲಿ ಕಟ್ಟು ನಿಷೇಧಿಸಿ ಎಂದು ಕೂಗಾಡುತ್ತಿದ್ದವರೂ ನನ್ನ ಬೆಂಬಲಕ್ಕೆ ಬರಲಿಲ್ಲ. ಪ್ರಾಣಿ ದಯಾ ಸಂಘದವರ ವಿಳಾಸ ಪತ್ತೆ ಇಲ್ಲ. ನೋವಿನ ಯಾತನೆ ನಾನೊಬ್ಬನೇ ಅನುಭವಿಸಿದೆ.[ಬಾಪೂ ಇನ್ನೂ ಸತ್ತಿಲ್ಲ, ಇಲ್ಲೊಂದು ಪತ್ರ ಬರೆದಿದ್ದಾರೆ ಓದಿ!]

ಕಾಲು ಮುರಿದು ಅಂಗವಿಕಲರನ್ನಾಗಿ ಮಾಡಿದಿರಿ. ಬ್ಯಾಂಡೆಜ್ ಸುತ್ತಿ ಮಲುಗಿಸಿದ್ದೆ ನೀವು ಮಾಡಿದ ದೊಡ್ಡ ಉಪಕಾರ. ನನ್ನ ನೋವಿನ ಚೀರಾಟ ನಿಮಗೆ ಕೇಳಲಿಲ್ಲ. ನೀವು ಪಕ್ಷಗಳ ರಾಜಕಾರಣದಲ್ಲಿ ಮುಳುಗಿದ್ದೀರಿ.

ಭೂಮಿಯ ವಾಸವನ್ನು ನಾನು ಮುಗಿಸಿದ್ದೇನೆ. ಹೊಸ ಲೋಕಕ್ಕೆ ಬಂದಿದ್ದೇನೆ. ಇಲ್ಲಿ ಯಾವ ಪ್ರತಿಭಟನೆಗಳಿಲ್ಲ. ಮೂಕ ಪ್ರಾಣಿಯ ಕಾಲು ಮುರಿಯುವ ವಿಕೃತ ಮನಸ್ಸಿನವರಿಲ್ಲ. ಇದು ನಮ್ಮದೇ ಲೋಕ..ಇಲ್ಲಿಗೂ ನಿಮ್ಮ ಆರೋಪಗಳ ಗದ್ದಲ ಕೇಳುತ್ತಿದೆ.

Shaktimaan

ಕಾಲು ಮುರಿದ ನಿಮಗೆ ಕಾಲವೇ ಉತ್ತರ ಹೇಳುತ್ತದೆ..ನನ್ನದೊಂದು ವಿನಂತಿ, ಮುಂದೆ ಈ ರೀತಿ ಯಾವ ಮೂಕ ಪ್ರಾಣಿಯ ಮೇಲೂ ಹಲ್ಲೆ ಮಾಡಬೇಡಿ.. ಯಾಕೆಂದರೆ ನಂತರ ಹೋರಾಟ ಮಾಡಲು ನಮಗೆ ಪಕ್ಷಗಳಿಲ್ಲ, ಸಂಘಟನೆ ಇಲ್ಲ, ಜಾತಿ ಇಲ್ಲ,,ಎಡ-ಬಲದ ಪಂಥಗಳಿಲ್ಲ, ಪ್ರಶಸ್ತಿ ಹಿಂದಕ್ಕೆ ಕೊಡುವರಿಲ್ಲ..

ನಾನು ಸತ್ತಾಗ ದೇಶದ ಅದೆಷ್ಟೋ ಜನರ ಅಂತರಾಳ ಮರುಗಿತು. ನಾಲ್ಕು ಹನಿ ಕಣ್ಣೀರು ಹಾಕಿದರವರು ಇದ್ದಾರೆ. ನೀವು ಸತ್ತಾಗ ಮಾತ್ರ ಉಳಿಯುವುದು ಶೂನ್ಯವೊಂದೆ... ನಾನು ಸತ್ತಿದ್ದನ್ನು ಯಾವ ಮಾಧ್ಯಮಗಳು ಮುಖಪುಟದಲ್ಲಿ ಹಾಕಲ್ಲ. ಹಾಕಿದರೆ ಅದು ಅದ್ಭುತಗಳ ಸಾಲಿಗೆ ಸೇರುತ್ತದೆ.[ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಗಂಡನ ಕಳೆದುಕೊಂಡ ಪಲ್ಲವಿಯ ಕಣ್ಣೀರಿನ ಪತ್ರ]

ನಾನಿಲ್ಲಿ ಬಂದು ತಲುಪಿದ್ದೇನೆ, ಎಲ್ಲವೂ ಕ್ಷೇಮವಾಗಿದೆ. ನೀವು ಕ್ಷೇಮ ಎಂದು ತಿಳಿದುಕೊಂಡಿದ್ದೇನೆ. ಆದರೂ ಕೊನೆಗೊಂದು ಪ್ರಶ್ನೆ ಹಾಗೆ ಉಳಿದಿದೆ.. ನನ್ನ ಬಡಿದ ನಿಮಗೆ ಸಿಕ್ಕಿದಾದರೂ ಏನು? ಉತ್ತರ ನೀವು ಕೊಟ್ಟರೂ ನನಗದು ಕೇಳಿಸಲ್ಲ.ಉತ್ತರ ನೀಡಲು ನಿಮ್ಮ ಬಳಿ ಆಗುವುದಿಲ್ಲ ಎಂಬುದು ನನಗೆ ಗೊತ್ತು.

ನೀವು ಏನೇ ಮಾಡಿ... ಮತ್ತೊಮ್ಮೆ ದೇಶ ಕಾಯುವ ಸೈನಿಕನಾಗಿ ಹುಟ್ಟಿಬರುತ್ತೇನೆ"...

ಶಕ್ತಿಮಾನ್

English summary
Shaktimaan, the horse who was badly injured in Uttarakhand last month, succumbed to injuries on Wednesday, April 20.'Shaktiman', a police horse was allegedly beaten by BJP's Mussoorie MLA Ganesh Joshi during a protest march held in Dehradun on March 14. This is an open letter to all protesters by 'Shaktiman'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X