ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಕಿರುಕುಳ ಆರೋಪ: TERI ಅಧ್ಯಕ್ಷ ಪಚೌರಿ ರಾಜೀನಾಮೆ

By Mahesh
|
Google Oneindia Kannada News

ನವದೆಹಲಿ, ಫೆ.24: ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಐಪಿಸಿಸಿ ಅಧ್ಯಕ್ಷ ರಾಜೇಂದ್ರ ಕೆ ಪಚೌರಿ ಅವರು ರಾಜೀನಾಮೆ ನೀಡಿದ್ದಾರೆ.

Intergovernmental Panel on Climate Change (IPCC) ಮುಖ್ಯಸ್ಥರಾಗಿರುವ ರಾಜೇಂದ್ರ ಪಚೌರಿ ಅವರು ತಮ್ಮ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದಾರೆ. ಇಂಧನ ಮತ್ತು ಸಂಪನ್ಮೂಲ ಸಂಸ್ಥೆ TERIಗೆ ಫೆ.24ರಂದು ರಾಜೀನಾಮೆ ನೀಡಿದ್ದಾರೆ.

ನಾನು ಯಾರಿಗೂ ಲೈಂಗಿಕ ಕಿರುಕುಳ ನೀಡಿಲ್ಲ. ಯಾವುದೇ ತನಿಖೆಗೂ ಸಿದ್ಧ. ಆರೋಪ ಹೊತ್ತು ಮುಖ್ಯಸ್ಥನ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯವಾಗದ ಕಾರಣ ರಾಜೀನಾಮೆ ನೀಡಿದ್ದೇನೆ ಎಂದು ಪಚೌರಿ ಅವರು ಹೇಳಿದ್ದಾರೆ.

Sexual Harassment: Why RK Pachauri resigns as IPCC Chairman

ಆದರೆ, ಪಚೌರಿ ಅವರು ಬಂಧನ ಭೀತಿ ಯಿಂದ ಬಚಾವ್ ಆಗಿದ್ದು, ಫೆ.26ರ ತನಕ ಅವರನ್ನು ಬಂಧಿಸದಂತೆ ದೆಹಲಿ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ. ನೈರೋಬಿಯಲ್ಲಿ ನಡೆಯುವ ಐಪಿಸಿಸಿ ಸೆಮಿನಾರ್ ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗಿದೆ. ಪೊಲೀಸ್ ತನಿಖೆಗೆ ಸಹಕಾರ ನೀಡುವುದಾಗಿ ಪಚೌರಿ ಹೇಳಿದ್ದಾರೆ.

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಹವಾಮಾನ ಬದಲಾವಣೆ ಕುರಿತ ಅಂತರ್‌ ಸರಕಾರಿ ಮಂಡಳಿ (ಐಪಿಸಿಸಿ)ಯ ಅಧ್ಯಕ್ಷರಾಗಿರುವ ಪಚೌರಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಉಪಾಧ್ಯಕ್ಷರಾದ ಇಸ್ಮಾಯಿಲ್ ಎಲ್ ಗುಜೌಲಿ ಅವರು ಹಂಗಾಮಿ ಐಪಿಸಿಸಿ ಚೇರ್ಮನ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಐಪಿಸಿಸಿ ಪ್ರಕಟಿಸಿದೆ.

ತನಿಖೆ ಜಾರಿಯಲ್ಲಿದೆ: 29 ವರ್ಷ ವಯಸ್ಸಿನ ಸಂಶೋಧನಾ ಸಹಾಯಕಿಯಾಗಿ ಮೇಲೆ 2013ರ ಅಕ್ಟೋಬರ್‌ನಿಂದ 2015ರ ಜನವರಿ ತನಕದ ಅವಧಿಯಲ್ಲಿ ಪಚೌರಿ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಇಬ್ಬರ ನಡುವೆ ಇ-ಮೇಲ್‌ಗ‌ಳು, ವಾಟ್ಸಪ್‌ ಸಂದೇಶಗಳು ರವಾನೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಏಪ್ರಿಲ್ 2002 ರಿಂದ ಐಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದ ಪಚೌರಿ ಅವರು ನೊಬೆಲ್ 2007 ರಲ್ಲಿ ಶಾಂತಿ ಪಾರಿತೋಷಕ ಪ್ರಶಸ್ತಿ ಲಭಿಸಿದೆ.

English summary
Rajendra K Pachauri on Tuesday, Feb 24 resigned as the Chairman of the Intergovernmental Panel on Climate Change (IPCC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X