ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.1 ರಿಂದ ಯಾವುದು ತುಟ್ಟಿ? ಯಾವುದು ಅಗ್ಗ?

By Mahesh
|
Google Oneindia Kannada News

ಬೆಂಗಳೂರು, ಜೂ.01: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಹೊಸ ಆರ್ಥಿಕ ನೀತಿಯ ಹೊಸ ಬಿಸಿ ಜೂ.1ರಿಂದ ಜನತೆಗೆ ತಟ್ಟಲಿದೆ. ಸೇವಾ ತೆರಿಗೆ ಹೆಚ್ಚಳದಿಂದಾಗಿ ಹೋಟೆಲ್, ಮೊಬೈಲ್, ರೈಲು, ವಿಮಾನಯಾನ, ಬ್ಯಾಂಕಿಂಗ್, ವಿಮೆ, ಕ್ರೆಡಿಟ್ ಕಾರ್ಡ್, ಕಟ್ಟಡ ನಿರ್ಮಾಣ ದುಬಾರಿಯಾಗಲಿದೆ. ದೇಶಿ ಮೊಬೈಲ್ ಫೋನ್, ಸೌರಶಕ್ತಿ ಉತ್ಪನ್ನ, ಅಗರಬತ್ತಿ, ಓವನ್ ಮುಂತಾದವು ಅಗ್ಗವಾಗಲಿದೆ.

ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಘೋಷಿಸಿದಂತೆ ಸೇವಾ ತೆರಿಗೆ ಶೇ. 12.36ರಿಂದ ಶೇ. 14ಕ್ಕೆ ಹೆಚ್ಚಳವಾಗಲಿದೆ. ಇದರಿಂದ ನೇರವಾಗಿ ಹಾಗೂ ಕೆಲ ಪದಾರ್ಥಗಳು ಪರೋಕ್ಷವಾಗಿ ದುಬಾರಿಯಾಗಲಿದೆ. [ಸೇವಾ ತೆರಿಗೆ ಏರಿಕೆ, ಏನೇನು ದುಬಾರಿ?]

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಯನ್ನು 2016ರ ಏಪ್ರಿಲ್​ನಿಂದ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಸೇವಾ ತೆರಿಗೆ ಏರಿಕೆಯಿಂದ ಸರಕು ಸಾಗಣೆ ಮೂಲಕ ಸಿಗುವ ಪದಾರ್ಥಗಳು ತುಟ್ಟಿಯಾಗಲಿದೆ. [ವಿದೇಶದಲ್ಲಿ ಓದೋ ಆಸೆ ಇದ್ರೆ ಈಗ ಕಷ್ಟ ಕಷ್ಟ!]

ಶಿಕ್ಷಣ ದುಬಾರಿಶೇ.12.36ರಷ್ಟಿದ್ದ ಶಿಕ್ಷಣ ಸುಂಕವನ್ನು ಶೇ. 12.50ಗೆ ಏರಿಸಿ ಅಬಕಾರಿ ಸುಂಕದಲ್ಲಿ ಮಿಳಿತಗೊಳಿಸಲಾಗಿತ್ತು. ಈ ಹೆಚ್ಚಳವೂ ಜೂನ್ 1ರಿಂದಲೇ ಜಾರಿಗೆ ಬರಲಿದೆ. ಜೊತೆಗೆ ಡಾಲರ್ vs ರುಪಾಯಿ ಸಮರದಲ್ಲಿ ರುಪಾಯಿ ಮೇಲುಗೈ ಸಾಧಿಸುತ್ತಿರುವುದರಿಂದ ವಿದೇಶದಲ್ಲಿ ಓದು ಕೂಡಾ ಕೈ ಕಚ್ಚಲಿದೆ. [ಜೇಟ್ಲಿ 2015 : ಪೂರ್ಣ ಪ್ರಮಾಣದ ಬಜೆಟ್ ಮುಖ್ಯಾಂಶಗಳು]

Mobile, hotel, other services to be costlier from June 1

ಯಾವ ವಸ್ತು ತುಟ್ಟಿ? ಯಾವ ವಸ್ತು ಅಗ್ಗ? ಪಟ್ಟಿ ಇಲ್ಲಿದೆ

ಬೆಲೆ ಇಳಿಕೆ:
* ಹಣ್ಣು ತರಕಾರಿಗಳಿಗೆ ಸೇವಾ ತೆರಿಗೆ ಇಲ್ಲ.
* ಪಾದರಕ್ಷೆಗಳ ಮೇಲಿನ ಅಬಕಾರಿ ಸುಂಕ ಶೇ 12 ರಿಂದ ಶೇ 6ಕ್ಕೆ ಇಳಿಕೆ, 1000 ರೂ.ಮೇಲ್ಪಟ್ಟ ಚರ್ಮದ ಪಾದರಕ್ಷೆ.
* ಎಲ್ ಇಡಿ ಪ್ಯಾನೆಲ್ ಮೇಲಿನ ಕಸ್ಟಮ್ ಸುಂಕ ಇಲ್ಲ (19 ಇಂಚಿನ ತನಕ), ಎಲ್ಇಡಿ, ಎಲ್ ಸಿಡಿ ಬೆಲೆ ಇಳಿಕೆ
* ಕ್ರೀಡಾ ಉತ್ಪನ್ನಗಳ ಮೇಲಿನ ಸುಂಕ ಇಳಿಕೆ
* ವಜ್ರ ಮತ್ತು ಅತ್ಯಮೂಲ್ಯ ಹರಳುಗಳ ದರ ಇಳಿಕೆ
* ರೆಡಿಮೇಡ್ ಹಾಗೂ ಬ್ರಾಂಡೆಡ್ ಬಟ್ಟೆಗಳ ದರ ಇಳಿಕೆ
* ಸೌರಶಕ್ತಿ ಉತ್ಪನ್ನಗಳ ಯೂನಿಟ್ ದರ ಇಳಿಕೆ.
* ಮುದ್ರಣ ಮಾಧ್ಯಮಕ್ಕೆ ಯಾವುದೇ ಸೇವಾ ತೆರಿಗೆ ಇಲ್ಲ.
* ಎಲ್ ಸಿಡಿ ಟಿವಿ ಸುಂಕ ವಿನಾಯಿತಿ.
* ಅಗರಬತ್ತಿ, ಓವನ್‌, ಕಂಪ್ಯೂಟರ್‌ ಟಾಬ್ಲೆಟ್‌,
* ವರಿಷ್ಠ ಪಿಂಚಣಿ ಯೋಜನೆ
* ಪೇಸ್‌ಮೇಕರ್, ಆಂಬ್ಯುಲೆನ್ಸ್

ಯಾವುದು ದುಬಾರಿ?
* ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಆಹಾರ ದರ ಏರಿಕೆ
* ಕಂಪ್ಯೂಟರ್ ಉಪಕರಣಗಳ ಆಮದು ಸುಂಕ ಏರಿಕೆ.
* ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಫೋನ್ ದರ ಏರಿಕೆ
* ಸಿಗರೇಟು, ಪಾನ್ ಮಸಾಲ ದರ ಏರಿಕೆ.
* ಮದ್ಯ, ಚಿಟ್ ಫಂಡ್, ಲಾಟರಿ, ಮ್ಯೂಚುವಲ್‌ ಫಂಡ್
* ಕ್ಲಬ್ ಗಳಲ್ಲಿ ಊಟ, ನೋಟ, ಆಟ ಎಲ್ಲವೂ ಕೈ ಕಚ್ಚಲಿದೆ.
* ಕ್ಲಬ್, ಜಿಮ್ ಗಳಲ್ಲಿ ಸದಸ್ಯತ್ವ ದರ ಏರಿಕೆ.
* ಏರ್ ಟಿಕೆಟ್ ಬುಕ್ಕಿಂಗ್, ಆನ್ ಲೈನ್ ಸೇವೆಗಳು.
* ವಿಡಿಯೋ ಕೆಮರಾ ಹಾಗೂ ಬಿಡಿ ಭಾಗಗಳು
* ರೇಡಿಯೋ ಟ್ಯಾಕ್ಸಿ ಮೇಲೆ ಸೇವಾ ತೆರಿಗೆ ಏರಿಕೆ

* ಸಿಮೆಂಟ್‌, ಏರೇಟೆಡ್‌ ಪಾನೀಯ
* ಪ್ಲಾಸ್ಟಿಕ್‌ ಬ್ಯಾಗ್‌, ಸಾಕ್ಸ್‌
* ಬ್ಯುಸಿನೆಸ್‌, ಎಕ್ಸಿಕ್ಯೂಟಿವ್‌ ದರ್ಜೆಯ ವಿಮಾನಯಾನ
* ಅಮ್ಯೂಸ್‌ಮೆಂಟ್‌, ಥೀಮ್‌ ಪಾರ್ಕ್‌ ಟಿಕೆಟ್
* ಸಂಗೀತ ಕಚೇರಿ ಟಿಕೆಟ್
(ಒನ್ ಇಂಡಿಯಾ ಸುದ್ದಿ)

English summary
People will have to shell out more from tomorrow while using mobiles, eating out and travelling as the service tax rate goes up to 14 per cent.Some of the key services that will attract higher tax and hence become costlier are: railways, airlines, banking, insurance, advertising, architecture, construction, credit cards, event management and tour operators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X