ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣ್ಣಿನ ಮನೆಯಲ್ಲಿದ್ದವನಿಗೆ ಮೊದಲ ಲಾಟರಿಯಲ್ಲೇ ಕೋಟಿ ರುಪಾಯಿ

|
Google Oneindia Kannada News

ಪಂಜಾಬ್, ಫೆಬ್ರವರಿ 22: ಲಾಟರಿ ಹೊಡೆಯೋದು ಅನ್ನೋದರ ನಿಜವಾದ ಅರ್ಥ ಇದೇನಾ? ಈ ವರದಿಯನ್ನು ಪೂರ್ತಿ ಓದಿದ ಮೇಲೆ ನೀವೇ ಹೇಳಿ. ಆತನ ಹೆಸರು ಆಜಾದ್ ಸಿಂಗ್. ವಯಸ್ಸು 24. ಆತ ಮೊದಲನೇ ಸಲ ಲಾಟರಿ ಟಿಕೆಟ್ ತೆಗೆದುಕೊಂಡಿದ್ದ. ಅದೇ ಅವನ ಪಾಲಿಗೆ ಅದೃಷ್ಟ ಖುಲಾಯಿಸಿದೆ. 1.5ಕೋಟಿ ರುಪಾಯಿ ಬಹುಮಾನ ಬಂದಿದೆ.

ಪಂಜಾಬ್ ನ ಫತೇಬಾದ್ ಜಿಲ್ಲೆಯ ದಯ್ಯಾರ್ ಎಂಬ ಹಳ್ಳಿಯವನು ಈ ಆಜಾದ್ ಸಿಂಗ್. ಒಂದು ಮಣ್ಣಿನ ಮನೆಯಲ್ಲಿದ್ದ ಈತ, ಹಳ್ಳಿಯ ಬಸ್ ಸ್ಟಾಪ್ ಹತ್ತಿರ ಸಣ್ಣದೊಂದು ಅಂಗಡಿ ಇದೆ. ಕಳೆದ ಡಿಸೆಂಬರ್ ನಲ್ಲಿ ಹೊಸ ವರ್ಷದ ಬಂಪರ್ ಲಾಟರಿ ಟಿಕೆಟ್ ನ ಖರೀದಿ ಮಾಡಿದ್ದ. ಅದು ಪಂಜಾಬ್ ಸರಕಾರದ ಲಾಟರಿ ಟಿಕೆಟ್.[ಅಮೆರಿಕಾ ಪ್ರಶಸ್ತಿ ಪಡೆದ ಬೆಂಗಳೂರು ಮೂಲದ ಶಿಕ್ಷಕಿ]

School Dropout In Punjab Buys Lottery Ticket For The First Time And Wins 1.5 Crore

"ನನಗೆ 400 ರುಪಾಯಿ ಬಹುಮಾನ ಬರಬಹುದು ಅಂದುಕೊಂಡು ಲಾಟರಿ ತಗೊಂಡಿದ್ದೆ. ಆದರೆ ಕೋಟ್ಯಧಿಪತಿ ಆಗ್ತೀನಿ ಅಂತಾಗಲಿ, ನನ್ನ ಹಳ್ಳೀಲಿ ತುಂಬ ಹೆಸರುವಾಸಿಯಾಗ್ತೀನಿ ಅಂತ ಖಂಡಿತಾ ಗೊತ್ತಿರಲಿಲ್ಲ" ಎನ್ನುತ್ತಾನೆ ಆಜಾದ್ ಸಿಂಗ್. "ನಾನು ಲಾಟರಿ ಟಿಕೆಟ್ ಗೆದ್ದ ಸಂಖ್ಯೆ ನೋಡುತ್ತಿದ್ದೆ. ಮೊದಲ ಬಹುಮಾನ ನನಗೇ ಬಂದುಬಿಟ್ಟಿದೆ

"ನನ್ನ ಕಣ್ಣುಗಳನ್ನ ನಾನೇ ನಂಬೋಕೆ ಆಗಲಿಲ್ಲ. ಹತ್ತು ಸಲ ಖಾತ್ರಿ ಮಾಡಿಕೊಂಡೆ" ಎನ್ನುತ್ತಾನೆ ಸಿಂಗ್. ತನಗೆ ಬಂದ ಲಾಟರಿ ಬಗ್ಗೆ ಸಂಬಂಧಿಕರು, ಸ್ನೇಹಿತರು ಬಳಿ ಖುಷಿ ಹಂಚಿಕೊಂಡಿದ್ದಾನೆ. ರಾಜ್ಯ ಲಾಟರಿ ಇಲಾಖೆಯಿಂದ ಹಳ್ಳಿಗೆ ಬಂದ ಅಧಿಕಾರಿಗಳು ಬಹುಮಾನ ಬಮ್ದಿರುವುದನು ಖಚಿತಪಡಿಸಿದ್ದಾರೆ.['ಸುಡೊಕು'ದಲ್ಲಿ ಬೆಳ್ಳಿಪದಕ ಗೆದ್ದು, ಮಿಂಚಿದ ಬೆಂಗಳೂರು ಬಾಲಕಿ]

ಅರ್ಧಕ್ಕೆ ಶಾಲೆ ಬಿಟ್ಟ ಆಜಾದ್ ಬಂದ ಹಣದಲ್ಲಿ ತನಗೊಂದು ಮನೆ ಕಟ್ಟಿಕೊಳ್ಳಬೇಕು ಮತ್ತು ಹೊಸದೊಂದು ವ್ಯಾಪಾರ ಆರಂಭಿಸಬೇಕು ಎಂಬ ಲೆಕ್ಕಾಚಾರದಲ್ಲಿದ್ದಾನೆ.

English summary
For 24-year-old Azad Singh, buying a lottery ticket for the first time proved to be quite lucky. He hit the jackpot with the ticket, winning the ₹1.5-crore cash prize. A resident of Dayyar village of Fatehabad district, Azad lives in a mud house and runs a small confectionery shop at the village bus stand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X