ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆಗಳಲ್ಲಿ ಹಿಂದಿ ಕಡ್ಡಾಯಗೊಳಿಸುವಂತೆ ಕೋರಿದ್ದ ಅರ್ಜಿ ವಜಾ!

ಒಂದನೇ ತರಗತಿಯಿಂದ ಎಂಟನೇ ತರಗತಿ ತನಕ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿದರೆ ದೇಶದ ಏಕತೆಗೆ ಪೂರಕವಾಗಲಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

By Mahesh
|
Google Oneindia Kannada News

ನವದೆಹಲಿ, ಮೇ 05: ಒಂದನೇ ತರಗತಿಯಿಂದ ಎಂಟನೇ ತರಗತಿ ತನಕ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿದರೆ ದೇಶದ ಏಕತೆಗೆ ಪೂರಕವಾಗಲಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಸುಪ್ರೀಂಕೋರ್ಟ್ ಆದೇಶಕ್ಕೆ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯದಲ್ಲಿ ಭಾರಿ ಸ್ವಾಗತ ಸಿಕ್ಕಿದೆ.

ದೇಶದಾದ್ಯಂತ ಎಲ್ಲಾ ಶಾಲೆಗಳಲ್ಲಿ 1ರಿಂದ 8ನೇ ತರಗತಿಯವರೆಗೆ ಹಿಂದಿ ಕಲಿಕೆ ಕಡ್ಡಾಯಗೊಳಿಸುವಂತೆ ಸರಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಕೂಡಾ ಸುಪ್ರೀಂಕೋರ್ಟ್ ನಿರಾಕರಿಸಿದೆ.

SC refuses plea to make Hindi compulsory in school

ಶಾಲೆಗಳಲ್ಲಿ ಹಿಂದಿ ಕಲಿಕೆ ಕಡ್ಡಾಯಗೊಳಿಸುವಂತೆ ಕೇಂದ್ರ ಸರಕಾರ, ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಬೇಕೆಂದು ಬಿಜೆಪಿಯ ದಿಲ್ಲಿ ಘಟಕದ ವಕ್ತಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದರು.

ಸಂವಿಧಾನದಲ್ಲಿ ನೀಡಲಾಗಿರುವ ಅವಕಾಶ ಮತ್ತು 1968ರ ರಾಷ್ಟ್ರೀಯ ನೀತಿ ಗೊತ್ತುವಳಿಯಲ್ಲಿ ತಿಳಿಸಲಾಗಿರುವ ತ್ರಿಭಾಷಾ ಸೂತ್ರವನ್ನು ತಮ್ಮ ಅರ್ಜಿಯಲ್ಲಿ ಉಪಾಧ್ಯಾಯ ಉಲ್ಲೇಖಿಸಿದ್ದರು

ಜೆ.ಎಸ್.ಖೇಹರ್ ನೇತೃತ್ವದ ಪೀಠವೊಂದು, ನೀವು ಆಡಳಿತ ಪಕ್ಷಕ್ಕೆ ಸೇರಿದವರು. ನೀವೇ ನಿಮ್ಮ ಪಕ್ಷವನ್ನು ಕೇಳಿಕೊಳ್ಳಬಹುದಲ್ಲವೇ ಎಂದು ಪ್ರಶ್ನಿಸಿತು.

ನಾಳೆ ಇತರ ಭಾಷೆಗಳನ್ನು ಮಾತನಾಡುವ ಜನರೂ ಅರ್ಜಿ ಸಲ್ಲಿಸಬಹುದು. ನ್ಯಾಯಾಲಯ ಇಂತಹ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಈಗ ನೀವು ಹಿಂದಿಯ ಬಗ್ಗೆ ಹೇಳುತ್ತಿದ್ದೀರಿ. ನಾಳೆ ಇನ್ನೊಬ್ಬರು ಮುಂದೆ ಬಂದು ಸಂಸ್ಕೃತ ಕಡ್ಡಾಯಗೊಳಿಸಿ ಎನ್ನಬಹುದು. ನಾನು ಮತ್ತು ನೀವು ಪಂಜಾಬಿ ಭಾಷೆಯ ಬಗ್ಗೆ ಅಹವಾಲು ಮಂಡಿಸಬಹುದು. ಆದ್ದರಿಂದ ನಾವೇನೂ ಹೇಳಲು ಸಾಧ್ಯವಿಲ್ಲ. ನಿಮ್ಮ ಅರ್ಜಿಯನ್ನು ವಾಪಾಸು ಪಡೆಯಿರಿ ಎಂದು ನ್ಯಾಯಪೀಠ ತಿಳಿಸಿತು.

English summary
The Supreme Court on Thursday dismissed a plea to make Hindi compulsory across country in primary schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X