ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂ, ಹೈಕೋರ್ಟ್ ಜಡ್ಜ್ ಗಳಿಗೆ ಶೇ 200 ರಷ್ಟು ಸಂಬಳ ಏರಿಕೆ!

ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಜಡ್ಜ್ ಗಳಿಗೆ ಶೇ 200 ರಷ್ಟು ಸಂಬಳ ಏರಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 26: ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಜಡ್ಜ್ ಗಳಿಗೆ ಶೇ 200 ರಷ್ಟು ಸಂಬಳ ಏರಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ.10 ವರ್ಷಗಳಿಗೊಮ್ಮೆ ನ್ಯಾಯಾಧೀಶರ ಸಂಬಳ ಏರಿಕೆಯಾಗಲಿದೆ.ಕೇಂದ್ರ ಸರ್ಕಾರಿ ನೌಕರರಿಗೆ ಇತ್ತೀಚೆಗೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಇದನ್ನು ಸರ್ವೋನ್ನತ ಮತ್ತು ಉಚ್ಛ ನ್ಯಾಯಾಲಯಗಳ ನ್ಯಾಯಮೂರ್ತಿಗಳಿಗೂ ಅನ್ವಯಿಸಲು ಸರ್ಕಾರ ಸಮ್ಮತಿಸಿದೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ಅತಿ ಹೆಚ್ಚು ವೇತನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರಿಗೆ ಸಿಗಲಿದೆ. ಇತರ ಭತ್ಯೆಗಳನ್ನು ಹೊರತುಪಡಿಸಿ ಅವರಿಗೆ ಪ್ರಸ್ತುತ 1 ಲಕ್ಷ ರೂ. ಮಾಸಿಕ ವೇತನ ಲಭಿಸುತ್ತಿದೆ. ಅವರ ಸಂಬಳವು 2.8 ಲಕ್ಷ ರೂ.ಗಳಿಗೆ ಏರಿಕೆಯಾಗಲಿದ್ದು, ಇದರೊಂದಿಗೆ ಅಧಿಕೃತ ನಿವಾಸ, ಕಾರುಗಳು, ಸಿಬ್ಬಂದಿ ಮತ್ತು ಅನ್ವಯವಾಗುವ ಇತರ ಭತ್ಯೆಗಳನ್ನು ನೀಡಲಾಗುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

SC, HC Judges to get 200% Hike In Salary

ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ವೇತನವನ್ನು ಮಾಸಿಕ 2.5 ಲಕ್ಷ ರೂ.ಗಳಿಗೆ ಏರಿಕೆಯಾಗಲಿದೆ. ಅಲ್ಲದೇ ಸಂಪುಟ ಕಾರ್ಯದರ್ಶಿ, ಸಿಎಜಿ (ಮಹಾ ಲೇಖಪಾಲರು) ಮತ್ತು ಸಿಇಸಿ (ಮುಖ್ಯ ಚುನಾವಣಾ ಆಯುಕ್ತ) ಶ್ರೇಣಿಯಂಥ ಇತರ ಸೇವೆಗಳ ಮುಖ್ಯಸ್ಥರು ಮತ್ತು ಸಂವಿಧಾನಿಕ ಉನ್ನತಾಧಿಕಾರಿಗಳಿಗೆ ನೀಡುವ ಇತರ ಭತ್ಯೆ

English summary
SC, HC judges may soon get near 200 per cent hike in salaries he salaries of judges of the high courts and the Supreme Court are revised every 10 years,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X