ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ವರಿತವಾಗಿ ಕಾವೇರಿ ನಿರ್ವಹಣಾ ಮಂಡಳಿ ರಚನೆ, ಕರ್ನಾಟಕಕ್ಕೆ ಆಘಾತ!

By Mahesh
|
Google Oneindia Kannada News

ಬೆಂಗಳೂರು, ಸೆ. 30: ನಾಲ್ಕು ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿ ಎಂದಿದ್ದ ಸುಪ್ರೀಂಕೋರ್ಟ್ ತನ್ನ ಆದೇಶ ಬದಲಿಸಿ ತ್ವರಿತವಾಗಿ ಮಂಡಳಿ ರಚನೆಗೆ ಆದೇಶಿಸಿದೆ. ಸುಪ್ರೀಂ ಆದೇಶಕ್ಕೆ ಕೇಂದ್ರ ಸರ್ಕಾರ ಕೂಡಾ ತಲೆ ಬಾಗಿದೆ. ಈ ಮೂಲಕ ಕರ್ನಾಟಕಕ್ಕೆ ಶುಕ್ರವಾರ ಮಧ್ಯಾಹ್ನ ಭಾರಿ ಆಘಾತವಾಗಿದೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠ ನೀಡಿರುವ ಸೂಚನೆ ದ್ವಂದ್ವಮಯವಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದರು. [ಸುಪ್ರೀಂಕೋರ್ಟ್ ಆದೇಶಕ್ಕೆ ಕರ್ನಾಟಕ ಬಗ್ಗಲೇಬೇಕು ಏಕೆ?]

ವಿಸ್ತೃತ ನ್ಯಾಯಪೀಠದ ತೀರ್ಪು ಬಾಕಿ ಇರುವಾಗ ದ್ವಿಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸುವ ಅವಕಾಶವಿತ್ತು. ಆದರೆ, ಕರ್ನಾಟಕದ ವಕೀಲರು ಈ ಬಗ್ಗೆ ಅರ್ಜಿಯನ್ನು ಸಲ್ಲಿಸಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ಅರ್ಜಿ ಸಲ್ಲಿಸದಿರುವುದು ಈಗ ಮುಳುವಾಗಲಿದೆ.[ಸುಪ್ರೀಂ ಆದೇಶ ವಿರುದ್ಧ ನಿಂತರೆ, ಕರ್ನಾಟಕದ ಗತಿ ಏನು?]

ಕಾವೇರಿ ನಿರ್ವಹಣಾ ಮಂಡಳಿ(ಸಿಎಂಬಿ) ರಚನೆ: ಈ ಮಂಡಳಿಯಲ್ಲಿ ನಾಲ್ಕು ರಾಜ್ಯಗಳ ಸದಸ್ಯರು, ಕೃಷಿ ಮತ್ತು ನೀರಾವರಿ ತಜ್ಞರು, ಜಲ ಆಯೋಗದ ಅಧಿಕಾರಿಗಳು ಇರಲಿದ್ದಾರೆ. ಎಲ್ಲರನ್ನು ಕೇಂದ್ರ ಸರ್ಕಾರ ನೇಮಿಸಲಿದೆ. [ಕಾವೇರಿ ನೀರು ಬಿಡಿ, ಇಲ್ಲ ಪರಿಣಾಮ ಎದುರಿಸಿ : ಸುಪ್ರೀಂ]

ಮಂಡಳಿ ರಚನೆ ಮಾಡಲು ಅಟಾರ್ನಿ ಜನರಲ್ ಅವರ ಸಲಹೆ ಕೇಳುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ನಾಲ್ಕು ವಾರಗಳಲ್ಲಿ ಮಂಡಳಿ ರಚನೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. [ಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]

ಶುಕ್ರವಾರ ನಡೆದ ವಿಚಾರಣೆ ವೇಳೆ

ಶುಕ್ರವಾರ ನಡೆದ ವಿಚಾರಣೆ ವೇಳೆ

ಶುಕ್ರವಾರ ನಡೆದ ವಿಚಾರಣೆ ವೇಳೆ ಅಕ್ಟೋಬರ್ 04ರೊಳಗೆ ನಿರ್ವಹಣಾ ಮಂಡಳಿ ರಚಿಸಲು ಸಾಧ್ಯವೇ ಎಂದು ಕೇಂದ್ರ ಸರ್ಕಾರಕ್ಕೆ ದ್ವಿಸದಸ್ಯ ಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ಮಂಡಳಿ ರಚಿಸುವುದಾಗಿ ಹೇಳಿದರು.

ಜತೆಗೆ ಅಕ್ಟೋಬರ್ 01ರಿಂದ ಅಕ್ಟೋಬರ್ 06ರ ತನಕ ಪ್ರತಿ ದಿನ 6,000 ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆಸೂಚಿಸಿದೆ. ಅಂದರೆ ಸುಮಾರು 3.13 ಟಿಎಂಸಿ ನೀರು ಬಿಡಬೇಕಾಗುತ್ತದೆ.

ಕರ್ನಾಟಕ ವಾದದಲ್ಲಿ ಸೋತಿದ್ದು ಹೇಗೆ?

ಕರ್ನಾಟಕ ವಾದದಲ್ಲಿ ಸೋತಿದ್ದು ಹೇಗೆ?

ಈ ಹಿಂದಿನ ಆದೇಶ ಪಾಲಿಸದ ಬಗ್ಗೆ ನ್ಯಾಯಾಂಗ ನಿಂದನೆಯಾಗಲಿ, ನಿರ್ವಹಣಾ ಮಂಡಳಿಗೆ ವಿರೋಧದ ಬಗ್ಗೆಯಾಗಲಿ ಚರ್ಚೆಯಾಗಿಲ್ಲ. ನೀರು ಬಿಟ್ಟು ನಂತರ ವಿಚಾರಣೆಗೆ ಬನ್ನಿ ಎಂದು ಸುಪ್ರೀಂ ಸೂಚಿಸಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿದ ಅರ್ಜಿಯನ್ನು ಹಾಕಿಲ್ಲ. ಸುಪ್ರೀಂ ಆದೇಶ ಪಾಲಿಸದಿದ್ದರೆ ಸಂವಿಧಾನ ಬಿಕ್ಕಟ್ಟು ಉದ್ಭವಿಸುವ ಸಾಧ್ಯತೆ ಬಗ್ಗೆ ಚರ್ಚೆಯಾಗಿಲ್ಲ.

ನಿರ್ವಹಣಾ ಮಂಡಳಿಯಾದರೆ ಏನು ಪರಿಣಾಮ

ನಿರ್ವಹಣಾ ಮಂಡಳಿಯಾದರೆ ಏನು ಪರಿಣಾಮ

ಒಮ್ಮೆ ಈ ಮಂಡಳಿ ರಚನೆಯಾದರೆ ಕಾವೇರಿ ಮೇಲುಸ್ತುವಾರಿ ಸಮಿತಿ ಬೆಲೆ ಕಳೆದುಕೊಳ್ಳಲಿದೆ. ಕಾವೇರಿ ನೀರು ಇರುವ ಕೆಆರ್ ಎಸ್, ಹೇಮಾವತಿ, ಕಬಿನಿ, ಹಾರಂಗಿ ಅಣೆಕಟ್ಟಿನ ಮೇಲೆ ಕರ್ನಾಟಕ ಸರ್ಕಾರ ನಿಯಂತ್ರಣ ಕಳೆದುಕೊಳ್ಳಲಿದೆ. ತಮಿಳುನಾಡಿಗೆ ಯಾವಾಗ ನೀರು ಬಿಡಬೇಕು? ಎಷ್ಟು ನೀರು ಬಿಡಬೇಕು ಎಂಬುದನ್ನು ಮಂಡಳಿ ನಿರ್ಧರಿಸಲಿದೆ.

ಐತೀರ್ಪಿನ ಅಂತಿಮ ಆದೇಶ ಮುಖ್ಯ

ಐತೀರ್ಪಿನ ಅಂತಿಮ ಆದೇಶ ಮುಖ್ಯ

ತಮಿಳುನಾಡು ಪ್ರತಿ ದಿನ 20,000 ಕ್ಯೂಸೆಕ್ಸ್ ನೀರು ಬೇಕೆಂದು ಮನವಿ ಮಾಡಿತ್ತು. ಆದರೆ, ಪ್ರತಿನಿತ್ಯ 12,000 ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಕಾವೇರಿ ಮೇಲುಸ್ತುವಾರಿ ಸಮಿತಿಯಿಂದ ಪ್ರತಿ ದಿನ(10 ದಿನದ ಮಟ್ಟಿಗೆ) 3,000ಕ್ಯೂಸೆಕ್ಸ್ ನಂತರ 6,000ಕ್ಯೂಸೆಕ್ಸ್,ಈಗ ಸೆ.30ರಂದು 3.13 ಟಿಎಂಸಿ ನೀರು ಬಿಡಲು ಸೂಚಿಸಲಾಗಿದೆ ಆದರೆ, ಕರ್ನಾಟಕದ ಪಾಲಿಗೆ ಐತೀರ್ಪಿನ ಅಂತಿಮ ಆದೇಶ (ಬಹುಶಃ ಅಕ್ಟೋಬರ್ 18ರಂದು) ಮುಖ್ಯವಾಗಲಿದೆ

ಕರ್ನಾಟಕದ ಅಗತ್ಯ ಎಷ್ಟಿದೆ?

ಕರ್ನಾಟಕದ ಅಗತ್ಯ ಎಷ್ಟಿದೆ?

ಮೇ 2017ರ ತನಕ 30ಟಿಎಂಸಿಅಡಿ ನೀರಿನ ಅಗತ್ಯವಿದೆ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ 48 ನಗರ ಪ್ರದೇಶ, 635 ಗ್ರಾಮೀಣ ಭಾಗಗಳು ಕಾವೇರಿ ಜಲಾನಯನ ಪ್ರದೇಶದ ಮೇಲೆ ಅವಲಂಬಿತವಾಗಿವೆ. ಮೇ 2017ರ ತನಕ 30ಟಿಎಂಸಿಅಡಿ ನೀರಿನ ಅಗತ್ಯವಿದೆ.

English summary
Supreme Court today asked Centre to set up Cauvery Water Management Board by October 4 (PTI). SC pulls up Karnataka for its defiant stand, directs it to release 6,000 cusecs of water between Oct 1 and Oct 6. It is a big setback to Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X