ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂ ಕೋರ್ಟ್ ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಶಶಿಕಲಾ

ಫೆಬ್ರವರಿ 14ರಂದು ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ರನ್ನು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿಗಳನ್ನಾಗಿ ಸುಪ್ರೀಂ ಕೋರ್ಟ್ ಘೋಷಿಸಿತ್ತು.ಇದೀಗ ಅಪರಾಧಿಗಳು ತಮಗೆ ನೀಡಿರುವ ಶಿಕ್ಷೆಯನ್ನು ಮರು ಪರಿಶೀಲನೆ ನಡೆಸುವಂತೆ ಕೋರಿದ್ದಾರೆ.

By ಅನುಷಾ ರವಿ
|
Google Oneindia Kannada News

ನವದೆಹಲಿ, ಮೇ 4: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಶಶಿಕಲಾ ನಟರಾಜನ್ ತಮ್ಮ ಶಿಕ್ಷೆಯನ್ನು ಮರು ಪರಿಶೀಲನೆಗೆ ಕೋರಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ತಮಗೆ ಶಿಕ್ಷೆ ನೀಡಿದ ಎರಡು ತಿಂಗಳ ನಂತರ ಈ ಮರು ಪರಿಶೀಲನಾ ಅರ್ಜಿಯನ್ನು ಅವರು ಸಲ್ಲಿಸಿದ್ದಾರೆ.

ಫೆಬ್ರವರಿ 14ರಂದು ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ರನ್ನು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿಗಳನ್ನಾಗಿ ಸುಪ್ರೀಂ ಕೋರ್ಟ್ ಘೋಷಿಸಿತ್ತು. ಇದಾಗಿ ಎರಡು ದಿನಗಳಲ್ಲಿ ಶಶಿಕಲಾ ಬೆಂಗಳೂರು ಜೈಲಿಗೆ ಬಂದಿದ್ದರು. [ಜನ ಬರ್ತಿಲ್ಲ, ಆಕೆ ಮಾತಾಡಲ್ಲ, ಜೈಲಲ್ಲಿ ಶಶಿಕಲಾನ ಕೇಳೋರು ದಿಕ್ಕಿಲ್ಲ!]

Sasikala Natarajan moves SC, seeks review of DA case verdict

ತಮ್ಮ ಮರು ಪರಿಶೀಲನಾ ಅರ್ಜಿಯಲ್ಲಿ ಜಯಲಲಿತಾ ಸಾವಿನ ನಂತರ ನೀಡಿದ ಪ್ರಕರಣದ ತೀರ್ಪನ್ನು ಮರು ವಿಮರ್ಶೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಜಯಲಲಿತಾ ಸಾವಿನ ನಂತರ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಿಂದ ಜಯಲಲಿತಾರನ್ನು ಹೊರಗಿಟ್ಟಿತ್ತು.

ಇದೀಗ ಮೂವರು ಅಪರಾಧಿಗಳು ತಮಗೆ ನೀಡಿರುವ ಶಿಕ್ಷೆಯನ್ನು ಮರು ಪರಿಶೀಲನೆ ನಡೆಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.

English summary
Convicted in a disproportionate assets case Sasikala Natarajan has moved the Supreme Court seeking a review. Two and a half months after the supreme court convicted her, Sasikala has sought a review of the verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X