ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಿರುದ್ಧ ಬಳಸಲು ಭಾರತ ಹೊಸ ಯುದ್ಧ ವಿಮಾನ ಖರೀದಿ?

ರಷ್ಯಾದ ಮಿಗ್ ಸಂಸ್ಥೆಯು ನೂತನವಾಗಿ ತಯಾರಿಸಿರುವ ಮಿಗ್ 35 ಯುದ್ಧ ವಿಮಾನಗಳನ್ನು ಕೊಳ್ಳಲು ಭಾರತ ಆಸಕ್ತಿ. ಈ ಬಗ್ಗೆ ವಿವರಣೆ ನೀಡಿದ ಮಿಗ್ ಸಂಸ್ಥೆಯ ನಿರ್ದೇಶಕ ಲಿಯಾ.

|
Google Oneindia Kannada News

ನವದೆಹಲಿ, ಜುಲೈ 24: ರಷ್ಯಾದ ಎರಡು ಯುದ್ಧ ವಿಮಾನ ತಯಾರಿಕಾ ಕಂಪನಿಗಳು ಹೊಸದಾಗಿ ಸೇರಿ ನಿರ್ಮಿಸಿರುವ ಮಿಗ್- 35 ಎಂಬ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯುದ್ಧ ವಿಮಾನಗಳನ್ನು ಕೊಳ್ಳಲು ಭಾರತ, ಮಾತುಕತೆ ನಡೆಸಲಾರಂಭಿಸಿದೆ ಎಂದು ಆ ಕಂಪನಿಯ ಮುಖ್ಯಸ್ಥ ಮಹಾ ನಿರ್ದೇಶಕ ಲಿಯಾ ಟರಾನ್ಸೆಂಕೊ ತಿಳಿಸಿದ್ದಾರೆ.

ಈ ಹೊಸ ವಿಮಾನವು ಬಹುಬಳಕೆಯ ಮಾದರಿಯಾಗಿದ್ದು ವಿಶ್ವದ ನಾನಾ ದೇಶಗಳಲ್ಲಿ ಉಪಯೋಗವಾಗುತ್ತಿರುವ ಯಾವುದೇ ಯುದ್ಧ ವಿಮಾನಗಳಿಗಿಂತ ಅನೇಕ ಹೆಚ್ಚುವರಿ ಸೌಲಭ್ಯಗಳನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ.

ಉದ್ವಿಗ್ನ ಪರಿಸ್ಥಿತಿಯ ನಡುವೆ ಟಿಬೆಟ್ ನಲ್ಲಿ ಚೀನಾ ಭಾರೀ ಶಸ್ತ್ರಾಭ್ಯಾಸ!ಉದ್ವಿಗ್ನ ಪರಿಸ್ಥಿತಿಯ ನಡುವೆ ಟಿಬೆಟ್ ನಲ್ಲಿ ಚೀನಾ ಭಾರೀ ಶಸ್ತ್ರಾಭ್ಯಾಸ!

ನವದೆಹಲಿಯಲ್ಲಿ, ಯುದ್ಧ ವಿಮಾನಗಳ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮ್ಯಾಕ್ಸ್ 2017 ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿರುವ ಅವರು, ಸೋಮವಾರ, ಸುದ್ದಿಗಾರರೊಂದಿಗೆ ಮಾತನಾಡಿದರು.

ತಮ್ಮ ಸಂಸ್ಥೆಯು ತಯಾರಿಸಿರುವ ಈ ಹೊಸ ವಿಮಾನವು, ಭಾರತಕ್ಕೆ ಪ್ರಸ್ತುತ ಸನ್ನಿವೇಶದಲ್ಲಿ ಹಾಗೂ ಭವಿಷ್ಯದಲ್ಲಿ ಉತ್ತಮ ರೀತಿಯಲ್ಲಿ ನೆರವಾಗಲಿದೆ ಎಂದು ಅವರು ತಿಳಿಸಿದರು.

ರಷ್ಯಾ ಭೂಕಂಪದಿಂದ ಸುನಾಮಿ ಭೀತಿಯಿಲ್ಲ: ಎಚ್ಚರಿಕೆ ಹಿಂಪಡೆತರಷ್ಯಾ ಭೂಕಂಪದಿಂದ ಸುನಾಮಿ ಭೀತಿಯಿಲ್ಲ: ಎಚ್ಚರಿಕೆ ಹಿಂಪಡೆತ

ಹಾಗಾದರೆ, ಈ ವಿಮಾನದ ವೈಶಿಷ್ಟ್ಯಗಳೇನು, ರಷ್ಯಾ ಏಕೆ ಈಗ ಈ ಯುದ್ಧ ವಿಮಾನದ ಮಾರಾಟಕ್ಕೆ ಮುಂದಾಗಿದೆ, ಭಾರತ ಕೈಗೊಳ್ಳಬಹುದಾದ ಎಚ್ಚರಿಕೆಯೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸುವ ಪ್ರಯತ್ನ ಇಲ್ಲಿದೆ.

ಉತ್ತಮ ವೈಶಿಷ್ಟ್ಯತೆಗಳು

ಉತ್ತಮ ವೈಶಿಷ್ಟ್ಯತೆಗಳು

- ಯುದ್ಧ ವಿಮಾನಗಳು ಅತಿ ಹೆಚ್ಚು ಎತ್ತರಕ್ಕೆ ಹಾರಾಡಬಲ್ಲವು.
- ಬಹು ಎತ್ತರದಲ್ಲಿ ಹಾರಾಡುವ ಸಾಮರ್ಥ್ಯವಿರುವುದರಿಂದ ಇವುಗಳನ್ನು ಪತ್ತೆ ಹಚ್ಚುವುದು ಶತ್ರು ರಾಷ್ಟ್ರಗಳಿಗೆ ಅಷ್ಟು ಸುಲಭದ ಕೆಲಸವಲ್ಲ.
- ಅಲ್ಲದೆ, ಇವು ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಇರುವಂಥವು.

ಯುದ್ಧ

ಯುದ್ಧ

ಚೀನಾದೊಂದಿಗೆ ಯಾವುದೇ ಕ್ಷಣದಲ್ಲಾದರೂ ಯುದ್ಧ ಆರಂಭಗೊಳ್ಳಬಹುದಾದ ಪ್ರಮೇಯ ಎದುರಿಸುತ್ತಿರುವ ಭಾರತಕ್ಕೆ ಈ ವಿಮಾನಗಳು ಉಪಯುಕ್ತವಾಗಿವೆ ಎನ್ನಲಾಗಿದೆ. ಸಾಮಾನ್ಯವಾಗಿ ಎರಡು ದೇಶಗಳ ನಡುವೆ ಯುದ್ಧ ಆರಂಭವಾಗುವ ಸಾಧ್ಯತೆಗಳಿವೆ ಎಂದರೆ ಸಾಕು, ಶಸ್ತ್ರಾಸ್ತ್ರ ತಯಾರಿಕಾ ದೇಶಗಳು ಎದ್ದು ವ್ಯಾಪಾರಕ್ಕೆ ಸಿದ್ಧವಾಗುತ್ತವೆ. ಯುದ್ಧ ನಿಲ್ಲಲಿ ಎಂದು ಇಡೀ ವಿಶ್ವವೇ ಮೊರೆಯಿಡುತ್ತಿದ್ದರೆ, ಈ ಶಸ್ತ್ರಾಸ್ತ್ರ ತಯಾರಿಕಾ ರಾಷ್ಟ್ರಗಳು ಎರಡು ದೇಶಗಳ ದಳ್ಳುರಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಿದ್ಧವಾಗುತ್ತವೆ. ರಷ್ಯಾವೂ ಅದರಿಂದ ಹೊರತಾಗೇನಿಲ್ಲ.

ಭಾರತಕ್ಕೆ ಬೇಕಿದೆ ಶಸ್ತ್ರಾಸ್ತ್ರಗಳು!

ಭಾರತಕ್ಕೆ ಬೇಕಿದೆ ಶಸ್ತ್ರಾಸ್ತ್ರಗಳು!

ಚೀನಾದೊಂದಿಗೆ ಯುದ್ಧ ಶುರುವಾಗಿಬಿಟ್ಟರೆ, ಭಾರತವು ಅದಕ್ಕೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಸಿದ್ಧವಾಗಿಲ್ಲ ಎಂದು ಹೇಳಲಾಗುತ್ತಿದೆ. ಶಸ್ತ್ರಾಸ್ತ್ರ ಸಂಗ್ರಹ ಅಷ್ಟಾಗಿಲ್ಲ. ಯದ್ಧ ಸಾಮಗ್ರಿಗಳೂ ಅತ್ಯಾಧುನಿಕವಾಗಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ ರಕ್ಷಣಾ ಇಲಾಖೆಯು ರಷ್ಯಾದ ಮಿಗ್ ಸಂಸ್ಥೆಯ ಈ ಹೊಸ ಯದ್ಧ ವಿಮಾನಗಳನ್ನು ಕೊಳ್ಳಲು ಇಚ್ಛೆ ವ್ಯಕ್ತಪಡಿಸಿದೆ ಎನ್ನಲಾಗಿದೆ.

ನಮ್ಮ ಮುತುವರ್ಜಿ

ನಮ್ಮ ಮುತುವರ್ಜಿ

ಆದರಿಲ್ಲಿ, ಮಿಗ್ ಸಂಸ್ಥೆಯ ವಿಮಾನಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕೆಂದು ಹೇಳಲಾಗುತ್ತಿದೆ. ಈ ಹಿಂದೆಯೂ ಮಿಗ್ ವಿಮಾನಗಳನ್ನು ಭಾರತ ಖರೀದಿಸಿತ್ತು. ಆದರೆ, ಆನಂತರ, ಅವುಗಳಲ್ಲಿ ಹಲವಾರು ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದರಿಂದ ಹಾರುವ ವೇಳೆಯಲ್ಲೇ ಪತನವಾಗಿ ಅನೇಕ ಸೈನಿಕರು, ತಂತ್ರಜ್ಞರು ಸಾಲು ಸಾಲಾಗಿ ಸಾವನ್ನಪ್ಪಿದ ಉದಾಹರಣೆಗಳಿವೆ. ಮಿಗ್ ವಿಮಾನ ಪತನ ಎಂಬ ಹೆಡ್ ಲೈನ್ ಕೆಲವು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಸಾಮಾನ್ಯ ಎನ್ನುವಂತಾಗಿದ್ದು ಸುಳ್ಳಲ್ಲ. ಹಾಗಾಗಿಯೇ, ಅವನ್ನು ಹಾರುವ ಶವಪೆಟ್ಟಿಗೆ ಎಂದು ಕರೆಯಲಾಗುತ್ತಿದೆ. ಇದೀಗ, ಅದೇ ಮಿಗ್ ಸಂಸ್ಥೆ ನೀಡಲು ಮುಂದೆ ಬಂದಿರುವ ಹೊಸ ಮಾದರಿಯ ಫೈಟರ್ ಜೆಟ್ ಗಳು ಯಾವುದೇ ದೋಷ ರಹಿತವಾಗಿದ್ದರೆ ಅಷ್ಟೇ ಸಾಕು.

English summary
Russia is keen on selling its new fighter jet MiG-35 to India with the MiG corporation's chief saying the country has evinced interest in the aircraft and talks were on to understand its requirements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X