ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ಪುಣೆಯಲ್ಲಿ ಆರ್‌ಎಸ್‌ಎಸ್ ಬೃಹತ್ ಸಮಾವೇಶ

|
Google Oneindia Kannada News

ಬೆಂಗಳೂರು, ಜನವರಿ 01 : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾನುವಾರ ಪುಣೆಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಒಂದೂವರೆ ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದು, ದಶಕದಲ್ಲೇ ಇದು ಬೃಹತ್ ಸಮಾವೇಶ ಎನಿಸಿಕೊಳ್ಳಲಿದೆ.

ಪುಣೆ ಹೊರವಲಯದ ಹಿಂಜೆವಾಡಿ ಐಟಿ ಪಾರ್ಕ್‌ನ ಸುಮಾರು 450 ಎಕರೆ ಪ್ರದೇಶದಲ್ಲಿ ಸಮಾವೇಶಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರ್ನಾಟಕ, ಮಹಾರಾಷ್ಟ್ರದ ಪುಣೆ, ನಾಸಿಕ್, ಅಹ್ಮದ್ ನಗರ, ಸಾಂಗ್ಲಿ, ಸೋಲ್ಲಾಪುರ, ಕೊಲ್ಹಾಪುರ ಮುಂತಾದ ಕಡೆಗಳ ಲಕ್ಷಾಂತರ ಸ್ವಯಂ ಸೇವಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ['ಅಖಂಡ ಭಾರತ' ನಂತರ ರಾಮ್ ಮಾಧವ್ ಹೊಸ ಕನಸೇನು?]

rss

ದಶಕದಲ್ಲೇ ಆರ್‌ಎಸ್‌ಎಸ್ ಆಯೋಜಿಸಿರುವ ಬೃಹತ್ ಸಮಾವೇಶವಿದಾಗಲಿದ್ದು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದ ಸಾಮಾಜಿಕ ಕಾರ್ಯಕರ್ತರು ಮತ್ತು ಸಮಾಜ ಸೇವೆ ನಡೆಸುವ ಸರ್ಕಾರೇತರ ಸಂಘ-ಸಂಸ್ಥೆಗಳನ್ನು ತಲುಪುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ. [ಚೆನ್ನೈ ಸಂಕಷ್ಟದಲ್ಲಿ RSS ತೋರಿದ ಮಾನವೀಯತೆ ಸುದ್ದಿಯಾಗಲೇ ಇಲ್ಲ!]

ಪರಿಸರ ಸ್ನೇಹಿ ಸಮಾವೇಶ : 'ಆರ್‌ಎಸ್‌ಎಸ್ ಬಗ್ಗೆ ಸಮಾಜದಲ್ಲಿ ಧನಾತ್ಮಕ ಭಾವನೆಗಳನ್ನು ಮೂಡಿಸುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ' ಎಂದು ಸಮಾವೇಶದ ಆಯೋಜಕರಾದ ಸಾರಂಗ್ ವಾಳ್ಬೇ ಹೇಳಿದ್ದಾರೆ. 'ಒಂದೂವರೆ ಲಕ್ಷಕ್ಕೂ ಅಧಿಕ ಸ್ವಯಂ ಸೇವಕರು ಸಮಾವೇಶದಲ್ಲಿ ಪಾಲ್ಗೊಂಡರೂ ಇದು ಪರಿಸರ ಸ್ನೇಹಿ ಸಮಾವೇಶವಾಗಲಿದೆ' ಎಂದು ವಾಳ್ವೇ ತಿಳಿಸಿದ್ದಾರೆ.

ಭಾರೀ ಶಬ್ದ ಮಾಡುವ ಧ್ವನಿವರ್ಧಕಗಳನ್ನು ಸಮಾವೇಶದಲ್ಲಿ ಬಳಸುತ್ತಿಲ್ಲ. ಮೈದಾನದ ಕಟ್ಟಕಡೆಯಲ್ಲಿ ಕುಳಿತ ಸ್ವಯಂ ಸೇವಕನಿಗೂ ನಾಯಕರ ಮಾತು ತಲುಪುವಂತೆ ಮಾಡಲು ಮೆಗಾ ಫೋನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಪರಿಸರ ಸ್ನೇಹಿ ತಟ್ಟೆಗಳಲ್ಲಿ ಆಹಾರವನ್ನು ಸರಬರಾಜು ಮಾಡಲಾಗುತ್ತಿದೆ.

English summary
Rashtriya Swayamsevak Sangh (RSS) is all set to hold a huge conclave on Sunday, Jan 3 near Pune. About 1.50 lakh RSS workers are expected to attend the gathering which would be held across 450 acres near Hinjewadi IT Park on the outskirts of Pune. gathering to be addressed by RSS chief Mohan Bhagwat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X