ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲೆ ಮೀರಿದ ಸಂಘರ್ಷ: ಉದ್ಘಾಟನೆಯ ಮರುದಿನವೇ RSS ಕಚೇರಿ ಧ್ವಂಸ

ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಕಚೇರಿ ಉದ್ಘಾಟನೆಗೊಂಡ ಮರುದಿನವೇ ಧ್ವಂಸಗೊಂಡಿದೆ. ಕೇರಳ ಕಣ್ಣೂರಿನ ಪೆರುಂತಟ್ಟಿಲ್ ಎನ್ನುವಲ್ಲಿ ಹೊಸ ಕಚೇರಿ ಉದ್ಘಾಟನೆಗೊಂಡಿತ್ತು.

|
Google Oneindia Kannada News

ಕಣ್ಣೂರು, ಮೇ 1: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಕಚೇರಿ ಉದ್ಘಾಟನೆಗೊಂಡ ಮರುದಿನವೇ ಧ್ವಂಸಗೊಂಡಿದೆ.

ಕೇರಳ ಕಣ್ಣೂರಿನ ಪೆರುಂತಟ್ಟಿಲ್ ಎನ್ನುವಲ್ಲಿ RSSನ ನೂತನ ಕಚೇರಿ ಏಪ್ರಿಲ್ 30ರಂದು ಉದ್ಘಾಟನೆಗೊಂಡಿತ್ತು. 'ಸೇವಾಲಯಂ' ಹೆಸರಿನ ಈ RSS ಕಚೇರಿಯನ್ನು ಸಂಘಟನೆಯ ಹಿರಿಯ ಮುಖಂಡ ನಂದಕುಮಾರ್ ಉದ್ಘಾಟಿಸಿದ್ದರು. (ಕೇರಳದಲ್ಲಿ ಸಂಘ ಪರಿವಾರದ ತಲೆಗಳಿಗೆ ಬೆಲೆಯಿಲ್ಲ)

RSS office in Kerala inaugurated on April 30th and has been vandalized on May 1st

ಉದ್ಘಾಟನೆಯ ಮರುದಿನವೇ (ಮೇ 1) ಕಚೇರಿಯನ್ನು ಕೆಲವು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಕಚೇರಿಯ ಟೇಬಲ್, ಕುರ್ಚಿ, ಹೂಕುಂಡ ಸೇರಿದಂತೆ ಕಚೇರಿಯಲ್ಲಿನ ವಸ್ತುಗಳನ್ನು ಧ್ವಂಸಗೊಳಿಸಿ ಚೆಲ್ಲಾಪಿಲ್ಲಿಗೊಳಿಸಿದ್ದಾರೆ.

ನಿನ್ನೆ ಕಚೇರಿ ಉದ್ಘಾಟನೆಗೊಂಡಿತ್ತು, ಇಂದು ಎಡಪಕ್ಷದ ಗೂಂಡಾಗಳು ಕಚೇರಿಯನ್ನು ಧ್ವಂಸಗೊಳಿಸಿದ್ದಾರೆಂದು RSS ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಕೇರಳದ ಕಣ್ಣೂರು, ತ್ರಿಶೂರು, ಕೊಲ್ಲಂ, ಕೋಝಿಕ್ಕೋಡ್ ಮುಂತಾದ ಕಡೆ ಎಡಪಕ್ಷಗಳು ಮತ್ತು ಹಿಂದೂಪರ ಸಂಘಟನೆಗಳ ನಡುವೆ ಸಂಘರ್ಷ ಇಂದು ನಿನ್ನೆಯದಲ್ಲ.

ಅದರಲ್ಲೂ, ಪಿಣರಾಯಿ ವಿಜಯನ್ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಭಾಗದಲ್ಲಿ ಸಂಘರ್ಷಗಳು ಎಲ್ಲೆ ಮೀರಿವೆ.

English summary
RSS office in Kannur, Kerala inaugurated on April 30th and has been vandalized on May 1st. RSS claims, left party activist behind this attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X