ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಣರಾಯಿ ತಲೆಗೆ ಆರ್.ಎಸ್.ಎಸ್ ನಾಯಕನಿಂದ 1 ಕೋಟಿ ಬಹುಮಾನ ಘೋಷಣೆ!

ಬೆಂಗಳೂರು, ಮಾರ್ಚ್ 2: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರೊಬ್ಬರು ಪಿಣರಾಯಿ ತಲೆಗೆ 1 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 2: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರೊಬ್ಬರು ಪಿಣರಾಯಿ ತಲೆಗೆ 1 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಮಧ್ಯ ಪ್ರದೇಶದ ಉಜ್ಜೈನ್ ನ ಆರ್.ಎಸ್.ಎಸ್ ಮಹಾನಗರ ಪ್ರಚಾರ ಪ್ರಮುಖ್ ಡಾ. ಕುಂದನ್ ಚಂದ್ರಾವತ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.[ಸೌಹಾರ್ದ ರ್ಯಾಲಿ, ಸಿದ್ದರಾಮಯ್ಯಗೆ ಕೇರಳ ಸಿಎಂ ಅಭಿನಂದನೆ]

ಕೇರಳದಲ್ಲಿ ನಡೆದಿರುವ ಆರ್.ಎಸ್.ಎಸ್ ನ ಎಲ್ಲರ ಕೊಲೆಗೂ ಪಿಣರಾಯಿ ವಿಜಯನ್ ಅವರೇ ಕಾರಣ. ಅವರ ತಲೆಗೆ ನನ್ನ ಆಸ್ತಿ ಮಾರಿಯಾದರೂ ಒಂದು ಕೋಟಿ ಬಹುಮಾನ ನೀಡುವುದಾಗಿ ಚಂದ್ರಾವತ್ ಹೇಳಿದ್ದಾರೆ. ಸಂಸತ್ ಸದಸ್ಯ ಚಿಂತಾಮಣಿ ಮಾಲ್ವಿಯಾ ಮತ್ತು ಶಾಸಕ ಮೋಹನ್ ಯಾದವ್ ಸಮ್ಮುಖದಲ್ಲೇ ಇಂತಹದ್ದೊಂದು ವಿವಾದಾತ್ಮಕ ಹೇಳಿಕೆಯನ್ನು ಉಜ್ಜೈನ್ ನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.[ಸೌಹಾರ್ದ ರ್ಯಾಲಿ, ಮಂಗ್ಳೂರು ಬಂದ್ ಎಫೆಕ್ಟ್ ರೌಂಡಪ್]

ನನ್ನ ಹೇಳಿಕೆಗೆ ಬದ್ಧ

ಚಂದ್ರಾವತ್ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಹೀಗಿದ್ದೂ ನನ್ನ ಹೇಳಿಕೆಗೆ ನಾನು ಬದ್ಧ ಎಂದು ಚಂದ್ರಾವತ್ ಹೇಳಿದ್ದಾರೆ. 'ಇದು ನನ್ನ ವೈಯುಕ್ತಿಕ ಅಭಿಪ್ರಾಯ. ಭಗತ್ ಸಿಂಗ್ ಬ್ರಿಟೀಷರ ಮೇಲೆ ಬಾಂಬ್ ಹಾಕಿದಂತೆ ನಾನು ಈ ಸ್ಪೋಟಕ ಹೇಳಿಕೆ ನೀಡಿದ್ದೇನೆ ಹಿಂದೂಗಳು ನಿದ್ದೆ ಮಾಡುತ್ತಿಲ್ಲ ಎಂಬುದು ಅವರಿಗೆಲ್ಲಾ ಗೊತ್ತಾಗಬೇಕು," ಎಂದು ಅವರು ಹೇಳಿದ್ದಾರೆ.

ಕಿಡಿಕಾರಿದ ಸಿಪಿಐಎಂ

ಆರ್.ಎಸ್.ಎಸ್ ಬೆದರಿಕೆ ಖಂಡಿಸುತ್ತಿರುವುದಾಗಿ ಹೇಳಿರುವ ಸಿಪಿಐಎಂ "ಆರ್.ಎಸ್.ಎಸ್ ಹತಾಷೆ ಕೊನೆಗೂ ಹೊರಬಿದ್ದಿದೆ. "ಸಿಪಿಐಎಂ ಈ ಹೇಳಿಕೆಯನ್ನು ಖಂಡಿಸುತ್ತದೆ ಮಾತ್ರವಲ್ಲ ತುರ್ತು ಕ್ರಮಕ್ಕಾಗಿ ಆಗ್ರಹಿಸುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿರುವ ರಾಜ್ಯ ಬಿಜೆಪಿ ಸರಕಾರ ಅವರ ವಿರುದ್ಧ ಕ್ರಮ ಜರುಗಿಸುತ್ತದೋ? ಅವರು (ಬಿಜೆಪಿ) ಹೊರ ಬಂದು ಇದನ್ನು ಖಂಡಿಸುತ್ತಾರೋ? ಖಂಡಿಸದಿದ್ದಲ್ಲಿ ಅವರು ಯಾವ ರೀತಿಯ ಸಿದ್ಧಾಂತವನ್ನು ಹರಡುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ," ಎಂದು ಹೇಳಿದೆ.

ಸಂಘರ್ಷದ ನಾಡು ಕೇರಳ

ಸಂಘರ್ಷದ ನಾಡು ಕೇರಳ

ಕೇರಳದಲ್ಲಿ ಸಿಪಿಎಂ ಮತ್ತು ಆರ್.ಎಸ್.ಎಸ್ ನಡುವೆ ಸಂಘರ್ಷ ಹಿಂದಿನಿಂದಲೂ ಜಾರಿಯಲ್ಲಿದ್ದು ಕಳೆದ ವಾರವಷ್ಟೇ ಬಿಜೆಪಿ ನಾಯಕ ಸಂತೋಷ್ ರನ್ನು ಹತ್ಯೆ ಮಾಡಲಾಗಿತ್ತು. ಪಿಣರಾಯಿ ವಿಜಯನ್ ಮೇ 2016ರಲ್ಲಿ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ 8ನೇ ಕೊಲೆ ಇದಾಗಿದೆ.

ಹಿಟ್ಲರ್ ಮನಸ್ಥಿತಿ

ಹಿಟ್ಲರ್ ಮನಸ್ಥಿತಿ

ಕಳೆದ ವಾರವಷ್ಟೆ ಪಿಣರಾಯಿ ವಿಜಯ್ ಹೇಳಿಕೆ ನೀಡಿ, "ಆರ್.ಎಸ್.ಎಸ್ ಮುಸ್ಸೊಲಿನಿ ರೀತಿಯ ಕಾರ್ಯತಂತ್ರ ಹಾಗೂ ಹಿಟ್ಲರ್ ರೀತಿಯ ಮನಸ್ಥಿತಿಯನ್ನು ಅಳವಡಿಸಿಕೊಂಡಿದೆ," ಎಂದು ಹರಿಹಾಯ್ದಿದ್ದರು.

 ಈಗ ತಾನೆ ಏನು ಮಾಡಬಲ್ಲಿರಿ?

ಈಗ ತಾನೆ ಏನು ಮಾಡಬಲ್ಲಿರಿ?

ಮಂಗಳೂರು ಸೌಹಾರ್ದ ರ್ಯಾಲಿಗೆ ಬಂದಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ, "ಪಿಣರಾಯಿ ವಿಜಯನ್ ಎನ್ನುವ ಈ ಮನುಷ್ಯ ಆಕಾಶದಿಂದ ಉದುರಿ ಮುಖ್ಯಮಂತ್ರಿ ಗಾದಿಯ ಮೇಲೆ ಬಿದ್ದವನಲ್ಲ. ತಲಶ್ಶೇರಿ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲೇ ನಾನು ಕಾರ್ಯಕರ್ತನಾಗಿ ಆರ್.ಎಸ್.ಎಸ್ ನವರ ಕತ್ತಿ ಚೂರಿಗಳ ನಡುವಿನಲ್ಲೇ ಓಡಾಡಿದವನು. ಆಗಲೇ ನನಗೆ ಏನನ್ನೂ ಮಾಡಲಾಗದವರು ಈಗ ತಾನೆ ಏನು ಮಾಡಬಲ್ಲಿರಿ?" ಎಂದು ಪ್ರಶ್ನಿಸಿದ್ದರು.

English summary
RSS Mahanagar Prachar Pramukh of Ujjain Kundan Chandrawat says, he'll reward the person who brings him Kerala Chief Minister Pinarayi Vijayan's head.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X