ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.9ರಿಂದ ಡಿ.19ರವರೆಗೆ ಸಿಕ್ಕಿದ್ದು 3,300 ಕೋಟಿ ಕಪ್ಪು ಹಣ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಡಿಸೆಂಬರ್ 22: ಅಪನಗದೀಕರಣದ ಘೋಷಣೆಯಾದ ಮೇಲೆ ನವೆಂಬರ್ 9ರಿಂದ ಈಚೆಗೆ ವಶಪಡಿಸಿಕೊಂಡಿದ್ದು ಮತ್ತು ದಾಳಿ ವೇಳೆ ಸಿಕ್ಕ ಕಪ್ಪು ಹಣದ ಒಟ್ಟು ಮೊತ್ತ 3,300 ಕೋಟಿ ರುಪಾಯಿ. ಇನ್ನು ದೇಶದಾದ್ಯಂತ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಸಿಕ್ಕ ಹೊಸ ನೋಟುಗಳ ಮೊತ್ತ 92 ಕೋಟಿ ರುಪಾಯಿ.

ಅಧಿಕಾರಿಗಳು ಪಿಟಿಐ ನ್ಯೂಸ್ ಏಜೆನ್ಸಿಗೆ ನೀಡಿದ ಮಾಹಿತಿ ಪ್ರಕಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 734 ಪರಿಶೀಲನೆ ನಡೆಸಿದ್ದಾರೆ. ಹವಾಲಾ ದಂಧೆಯಲ್ಲಿ ತೊಡಗಿದ್ದವರು, ತೆರಿಗೆ ಕದ್ದವರಿಗೂ ಸೇರಿ ಡಿಸೆಂಬರ್ 21ರವರೆಗೆ ಒಟ್ಟು 3,200 ನೋಟಿಸ್ ನೀಡಲಾಗಿದೆ. ಇನ್ನು ಇಲಾಖೆಯಿಂದ ವಶಪಡಿಸಿಕೊಂಡ ನಗದು ಹಾಗೂ ಆಭರಣದ ಒಟ್ಟು ಮೊತ್ತ 500 ಕೋಟಿ ರುಪಾಯಿ.[ಐಟಿ ದಾಳಿ : ಟೀ ಮಾರೋನ ಬಳಿ ಸಿಕ್ಕಿದ್ದು ಬರೊಬ್ಬರಿ 400 ಕೋಟಿ!]

Rs 3,300 crore black income detected since November 9

ಅದರಲ್ಲೂ ಹೊಸ 2 ಸಾವಿರ ರುಪಾಯಿ ನೋಟುಗಳಲ್ಲಿ 92 ಕೋಟಿ ರುಪಾಯಿ ವಶಪಡಿಸಿಕೊಳ್ಳಲಾಗಿದೆ. ಒಟ್ಟು ವಶಪಡಿಸಿಕೊಂಡ 500 ಕೋಟಿ ಆಸ್ತಿಯಲ್ಲಿ 421 ಕೋಟಿ ನಗದು ಸಿಕ್ಕಿದೆ. "ಡಿಸೆಂಬರ್ 20ರವರೆಗೆ ವಶಪಡಿಸಿಕೊಂಡ ಲೆಕ್ಕಕ್ಕೆ ನೀಡದ ಮೊತ್ತ ಅಥವಾ ಈ ಕಾರ್ಯಾಚರಣೆಯಲ್ಲಿ ಸಿಕ್ಕ ಒಟ್ಟು ಹಣ 3,300 ಕೋಟಿ ರುಪಾಯಿ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಆದಾಯ ತೆರಿಗೆ ಇಲಾಖೆಯಿಂದ ಸಿಬಿಐಗೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ವಹಿಸಿದ ಒಟ್ಟು ಪ್ರಕರಣಗಳ ಸಂಖ್ಯೆ 220. ಆರ್ಥಿಕ ಆಪರಾಧ, ಕಾನೂನುಬಾಹಿರ ಹಣ ಬದಲಾವಣೆ, ಅಕ್ರಮ ಆಸ್ತಿ ಹಾಗೂ ಭ್ರಷ್ಟಾಚಾರದ ಪ್ರಕರಣಗಳು ಇವುಗಳಲ್ಲಿ ಸೇರಿಕೊಂಡಿವೆ.

English summary
Seizures and raids conducted since November 9 have led to the detection of Rs 3,300 crore. Further Rs 92 crore worth new notes were also seized by the Income Tax department during the nation wide raids conducted post the decision on demonetisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X