ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗದು ವ್ಯವಹಾರಗಳಿಗೆ ಬ್ಯಾಂಕುಗಳಲ್ಲಿ ಶುಲ್ಕ ಎಷ್ಟು? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಇವತ್ತು ದೇಶಕ್ಕೆ ದೇಶವೇ ಬ್ಯಾಂಕುಗಳು ನಗದು ವ್ಯವಹಾರಗಳಿಗೆ ವಿಧಿಸುತ್ತಿರುವ ಶುಲ್ಕದ ಬಗ್ಗೆ ಮಾತನಾಡುತ್ತಿದೆ. ತಿಂಗಳಿಗೆ ನಾಲ್ಕು ಉಚಿತ ನಗದು ಸೇವೆಗಳು ಮುಗಿದ ನಂತರ ಮುಂದಿನ ವ್ಯವಹಾರಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಶುಲ್ಕ ಹೇಗೆ ಎಷ್ಟು?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 3: ಇವತ್ತು ದೇಶಕ್ಕೆ ದೇಶವೇ ಬ್ಯಾಂಕುಗಳು ನಗದು ವ್ಯವಹಾರಗಳಿಗೆ ವಿಧಿಸುತ್ತಿರುವ ಶುಲ್ಕದ ಬಗ್ಗೆ ಮಾತನಾಡುತ್ತಿದೆ. ತಿಂಗಳಿಗೆ ನಾಲ್ಕು ಉಚಿತ ನಗದು ಸೇವೆಗಳು ಮುಗಿದ ನಂತರ ಮುಂದಿನ ವ್ಯವಹಾರಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಶುಲ್ಕ ಹೇಗೆ ಎಷ್ಟು?

ಎಚ್.ಡಿ.ಎಫ್.ಸಿ, ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕುಗಳು 1,000 ರೂಪಾಯಿಗೆ 5 ರೂಪಾಯಿ ಅಥವಾ 150 ರೂಪಾಯಿ, ಇವುಗಳಲ್ಲಿ ಯಾವುದು ಹೆಚ್ಚೋ ಆ ಶುಲ್ಕವನ್ನು ವಸೂಲಿ ಮಾಡುತ್ತದೆ. [ಕೊಳಕು ನೋಟು ಸ್ವೀಕರಿಸದ ಬ್ಯಾಂಕುಗಳಿಗೆ ದಂಡ: ಆರ್ ಬಿಐ]

ಆದರೆ ಎಟಿಎಂಗಳಿಗೆ ಇದು ಅನ್ವಯವಾಗುವುದಿಲ್ಲ. ಎಟಿಎಂಗಳಲ್ಲಿ ತಿಂಗಳಿಗೆ 5 ಬಾರಿ ಹಣ ತೆಗೆಯುವುದು ಉಚಿತವಾಗಿರುತ್ತವೆ. ಆರನೇ ಬಾರಿ ಹಣ ಪಡೆಯಲು ಹೋದಾಗ ಮಾತ್ರ ಒಂದು ವ್ಯವಹಾರಕ್ಕೆ 20 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇನ್ನು ಬೇರೆ ಬ್ಯಾಂಕ್ ಎಟಿಎಂಗಳನ್ನು ತಿಂಗಳಿಗೆ ಮೂರು ಬಾರಿ ಮಾತ್ರ ಉಚಿತ ಬಳಕೆ ಮಾಡಲು ಅವಕಾಶವಿದೆ. [ಇನ್ನು ಬ್ಯಾಂಕಿಗೆ ಹಣ ಕಟ್ಟಿದರೂ ಶುಲ್ಕ, ಹಣ ತೆಗೆದರೂ ಶುಲ್ಕ!]

ಐಸಿಐಸಿಐನಲ್ಲಿ ಹೇಗೆ ಶುಲ್ಕ?

ಐಸಿಐಸಿಐನಲ್ಲಿ ಹೇಗೆ ಶುಲ್ಕ?

ಐಸಿಐಸಿಐ ಬ್ಯಾಂಕಿನಲ್ಲಿ ತಿಂಗಳಿಗೆ ನಾಲ್ಕು ಬಾರಿ ನಗದು ವ್ಯವಹಾರ ಉಚಿತವಾಗಿರುತ್ತದೆ. ಐದನೇ ನಗದು ವ್ಯವಹಾರಕ್ಕೆ 150 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಆದರೆ ಹೋಮ್ ಬ್ರಾಂಚ್ ನಲ್ಲಿ ಈ ರೀತಿ ನಗದು ವ್ಯವಹಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಹೋಮ್ ಬ್ರಾಂಚ್ ಅಂದರೆ ಅಕೌಂಟ್ ಓಪನ್ ಮಾಡಿದ ಶಾಖೆ.

ಯಾವೆಲ್ಲಾ ಖಾತೆಗಳಿಗೆ ಶುಲ್ಕ?

ಯಾವೆಲ್ಲಾ ಖಾತೆಗಳಿಗೆ ಶುಲ್ಕ?

ಬೇಸಿಕ್, ಸೇವಿಂಗ್ಸ್ ಮತ್ತು ಸ್ಯಾಲರಿ ಅಕೌಂಟುಗಳಿಗೆ ಈ ಶುಲ್ಕ ವಿಧಿಸಲಾಗುತ್ತದೆ. ಉಳಿದ ಕೌಂಟುಗಳಿಗೆ ಈ ಶುಲ್ಕಗಳು ಅನ್ವಯವಾಗುವುದಿಲ್ಲ. ಇನ್ನು ಬ್ಯಾಂಕಿನ ಉಳಿದ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಎಚ್.ಡಿ.ಎಫ್.ಸಿ

ಎಚ್.ಡಿ.ಎಫ್.ಸಿ

ಎಚ್.ಡಿ.ಎಫ್.ಸಿ ನಲ್ಲೂ ಇದೇ ರೀತಿ ನಿಯಮಗಳಿರುತ್ತವೆ. 4 ವ್ಯವಹಾರಗಳು ಉಚಿತವಾಗಿರುತ್ತವೆ, 5ನೇ ವ್ಯವಹಾರದಿಂದ 150 ರುಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಹೋಮ್ ಬ್ರಾಂಚುಗಳಲ್ಲಿ 2 ಲಕ್ಷವರೆಗೆ ಹಣ ಪಡೆಯಲು ಮತ್ತು ಜಮೆ ಮಾಡಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಹಣ ಜಮೆ ಅಥವಾ ತೆಗೆಯಬೇಕಾದರೆ ಹೆಚ್ಚಿನ ಶುಲ್ಕ ನೀಡಬೇಕಾಗುತ್ತದೆ.

ಯಾವೆಲ್ಲಾ ಖಾತೆಗಳಿಗೆ ಇದು ಅನ್ವಯ?

ಯಾವೆಲ್ಲಾ ಖಾತೆಗಳಿಗೆ ಇದು ಅನ್ವಯ?

ಬೇಸಿಕ್, ಸೇವಿಂಗ್ಸ್, ಸ್ಯಾಲರಿ, ಪ್ರೈಮ್, ಕ್ಲಾಸಿಕ್, ಇಂಪೇರಿಯಾ, ಪ್ರಿಫರ್ಡ್ ಖಾತೆಗಳಿಗೆ ಈ ಶುಲ್ಕ ಅನ್ವಯವಾಗುತ್ತದೆ. ಮ್ಯಾನೇಜ್ಡ್ ಪ್ರೋಗ್ರಾಮ್ ಗ್ರಾಹಕರಿಗೆ ಈ ಶುಲ್ಕಗಳು ಅನ್ವಯವಾಗುವುದಿಲ್ಲ. ಮಾರ್ಚ್ 1ರ ವರೆಗೆ 6ನೇ ವ್ಯವಹಾರಕ್ಕೆ 100 ರೂಪಾಯಿಗಳ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಈಗ ಇದನ್ನು ಮತ್ತಷ್ಟು ವಿಸ್ತರಿಸಲಾಗಿದೆ.

ಆಕ್ಸಿಸ್ ಬ್ಯಾಂಕ್

ಆಕ್ಸಿಸ್ ಬ್ಯಾಂಕ್

ಉಳಿದ ಬ್ಯಾಂಕುಗಳಂತೆ ಇಲ್ಲೂ 5ನೇ ವ್ಯವಹಾರಕ್ಕೆ ಸಾವಿರಕ್ಕೆ 5 ರೂಪಾಯಿ ಅಥವಾ 150 ರೂಪಾಯಿ ಶುಲ್ಕ ವಸೂಲಿ ಮಾಡಲಾಗುತ್ತದೆ. ಆದರೆ ಇಲ್ಲಿ ಹೋಮ್ ಬ್ರಾಂಚ್ ಮತ್ತು ಇತರ ಬ್ರಾಂಚುಗಳಲ್ಲಿ ವ್ಯತ್ಯಾಸ ಇರುವುದಿಲ್ಲ. ಹೋಮ್ ಬ್ರಾಂಚಿನಲ್ಲೂ ನೀವು ಹಣ ತೆರಲೇಬೇಕು. ಸ್ಯಾಲರಿ ಅಕೌಂಟುಗಳಿಗೆ ಈ ನಿಯಮ ಅ಻ನ್ವಯವಾಗಲಿದೆ. ಆದರೆ ಪ್ರಿವಿಲೇಜ್ಡ್ ಗ್ರಾಹಕರಿಗೆ ಈ ಶುಲ್ಕಗಳು ಇರುವುದಿಲ್ಲ.

English summary
The entire nation has been talking about the Rs 150 minimum charge to be levied by the banks for cash deposits and withdrawals. The three banks, HDFC, ICICI and Axis will calculate the fee at the rate of Rs 5 for every 1,000 transacted or 150, whichever is higher.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X