ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಿಂದ ಭಾರತಕ್ಕೆ ನುಸುಳಲಿವೆ ನಕಲಿ 1,000 ಕೋಟಿಯ ನೋಟುಗಳು!!

ಪಾಕಿಸ್ತಾನದ ರಾವಲ್ಪಿಂಡಿಯ ನಕಲಿ ನೋಟು ಜಾಲ ಈಗಾಗಲೇ 1,000 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ಮುದ್ರಿಸಿದ್ದು ಭಾರತಕ್ಕೆ ಬರಲು ಸಿದ್ಧವಾಗಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಫೆಬ್ರವರಿ 20: ಪಾಕಿಸ್ತಾನದ ರಾವಲ್ಪಿಂಡಿಯ ನಕಲಿ ನೋಟು ಜಾಲ ಈಗಾಗಲೇ 1,000 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ಮುದ್ರಿಸಿದ್ದು ಭಾರತಕ್ಕೆ ಬರಲು ಸಿದ್ಧವಾಗಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.

ಕಳೆದ ಒಂದು ತಿಂಗಳ ಅಂತರದಲ್ಲಿ ಈ ಪ್ರಮಾಣದ ನೋಟುಗಳನ್ನು ಮುದ್ರಿಸಿರಬಹುದು ಎಂದು ಗುಪ್ತಚರ ಇಲಾಖೆ ಅಂದಾಜಿಸಿದೆ. ಇವೆಲ್ಲಾ 2,000 ಮುಖಬೆಲೆಯ ನೋಟುಗಳು ಎನ್ನಲಾಗಿದೆ. [ಉಳಿತಾಯ ಖಾತೆಯಿಂದ ವಿತ್ ಡ್ರಾ: ರಿಸರ್ವ್ ಬ್ಯಾಂಕ್ ಹೊಸ ನಿಯಮ]

Rs 1,000 crore worth fake currency waiting to land in India

ಅಮಾನುಲ್ಲಾಹ್ ಮತ್ತು ಖಾಲಿಕ್ ಈ ಜಾಲದ ಹಿಂದಿರುವ ಮಾಸ್ಟರ್ ಮೈಂಡ್ ಗಳೆಂದು ನಂಬಲಾಗಿದೆ. ಪಾಕಿಸ್ತಾನದ ಪಾಸ್ಪೋರ್ಟ್ ಇರುವ ಈ ಖದೀಮರು ರಾವಲ್ಪಿಂಡಿಯಲ್ಲಿ ನೋಟು ಮುದ್ರಣ ಮಾಡಿ ಅಲ್ಲಿಂದ ವಿಮಾನ ಸಂಖ್ಯೆ 334ರಲ್ಲಿ ದುಬೈಗೆ ಸಾಗಿಸುತ್ತಾರೆ. ನಂತರ ದುಬೈನಿಂದ ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ವಿಮಾನ ಸಂಖ್ಯೆ 583ರ ಮೂಲಕ ಈ ನೋಟುಗಳು ತರುತ್ತಾರೆ. ನಂತರ ಢಾಕಾದಿಂದ ಈ ನೋಟುಗಳು ಕಳ್ಳ ಸಾಗಣೆದಾರರ ಮೂಲಕ ನೇರ ಪಶ್ಚಿಮ ಬಂಗಾಳದ ಮಾಲ್ಡಾಕ್ಕೆ ಬಂದು ತಲುಪುತ್ತವೆ.

ನೇಪಾಳ, ಶ್ರೀಲಂಕಾ, ಥಾಯ್ಲಾಂಡ್ ಮತ್ತು ಮಲೇಷ್ಯಾ ಮಾರ್ಗವಾಗಿಯೂ ನಕಲಿ ನೋಟುಗಳನ್ನು ಭಾರತದೊಳಕ್ಕೆ ತರಲಾಗುತ್ತದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಪಶ್ಚಿಮ ಬಂಗಾಳದ ಸ್ಥಳೀಯ ಪೊಲೀಸರು ಈ ರೀತಿಯ ಚಟುವಟಿಕೆಗಳಿಗೆ ನಿಧಾನವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಇದು ನಕಲಿ ನೋಟು ಜಾಲ ಹಬ್ಬಿಕೊಳ್ಳಲು ಪ್ರಮುಖ ಕಾರಣ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ದೂರುತ್ತಾರೆ.

ಈ ಜಾಲದ ಬಗ್ಗೆ ಮಾಹಿತಿಗಳನ್ನು ಮತ್ತು ಈ ಜಾಲ ಕಾರ್ಯ ನಿರ್ವಹಿಸುವ ವಿಧಾನದ ಬಗ್ಗೆ ನಾವು ಸ್ಥಳೀಯ ಪೊಲೀಸರಿಗೆ ಮಾಹಿತಿಗಳನ್ನು ನೀಡಿದ್ದೇವೆ. ಹೀಗಿದ್ದೂ ಪೊಲೀಸರು ಕಾರ್ಯಾಚರಣೆ ನಿಧಾನವಾಗಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಮಾಲ್ಡಾವನ್ನೇ ಕೇಂದ್ರವಾಗಿಟ್ಟುಕೊಂಡು ಈ ನಕಲಿ ನೋಟು ಜಾಲ ಕಾರ್ಯಾಚರಣೆ ಮಾಡುತ್ತಿದ್ದು, ಇದು ಕಳೆದ 6 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡುತ್ತಾರೆ. [ನೋಟು ನಿಷೇಧ ಧಾರಾವಾಹಿಗೆ ಶತದಿನೋತ್ಸವ, ಎಎಪಿಯಿಂದ ಎಷ್ಟೊಂದು ಪ್ರಶ್ನೆ]

ವಿಶೇಷ ಅಂದರೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಪ್ರಯೋಕತ್ವದಲ್ಲಿ ನಡೆಯುವ ಈ ನೋಟು ಕಳ್ಳ ಸಾಗಣಿಕೆಯ ಖದೀಮರು 2,000 ಮುಖಬೆಲೆಯ ನೋಟಿನಲ್ಲಿರುವ ಹೆಚ್ಚಿನ ಎಲ್ಲಾ ಭದ್ರತಾ ವೈಶಿಷ್ಠ್ಯಗಳನ್ನೂ ಕದ್ದಿದ್ದಾರೆ. ಡಿಸೆಂಬರಿನಲ್ಲಿ ವಶಪಡಿಸಿಕೊಂಡ ನಕಲಿ ನೋಟುಗಳಲ್ಲಿ 17 ಭದ್ರತಾ ವಿಶೇಷತೆಗಳ ಪೈಕಿ 6ನ್ನು ಕಾಪಿ ಮಾಡಲಾಗಿತ್ತು. ಆದರೆ ಈ ಸಂಖ್ಯೆ ಬೆಳೆಯುತ್ತಾ ಹೋಗಿ ಈಗ 12ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದು ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ.

English summary
The Rawalpindi module may have printed at least Rs 1,000 crore worth of fake currency in the past month, Intelligence Bureau officials suspect. The pattern in which the notes are being printed and sent indicate that there is a huge consignment of the new Rs 2,000 fake notes awaiting to be off loaded in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X