ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈವಾಹಿಕ ಜೀವನಕ್ಕೆ ಕಾಲಿಟ್ಟ ಇರೋಮ್ ಶರ್ಮಿಳಾ

By Sachhidananda Acharya
|
Google Oneindia Kannada News

ಕೊಡೈಕೆನಲ್/ತಮಿಳುನಾಡು, ಆಗಸ್ಟ್ 17: ಮಣಿಪುರದ ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಳಾ (44) ತಮ್ಮ ಬಹುಕಾಲದ ಸಂಗಾತಿ ಡೆಸ್ಮಂಡ್ ಕುಟಿನ್ಹೊರನ್ನು ವರಿಸಿದ್ದಾರೆ. ಇಂದು ಬೆಳಿಗ್ಗೆ ಇಲ್ಲಿನ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕೇವಲ 90 ವೋಟು ಪಡೆದ ಶರ್ಮಿಳಾ ರಾಜಕೀಯಕ್ಕೆ ಗುಡ್ ಬೈಕೇವಲ 90 ವೋಟು ಪಡೆದ ಶರ್ಮಿಳಾ ರಾಜಕೀಯಕ್ಕೆ ಗುಡ್ ಬೈ

ಕುಟಿನ್ಹೊ ಬ್ರಿಟಿಷ್ ನಾಗರೀಕರಾಗಿದ್ದು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಇರೋಮ್‌ ಶರ್ಮಿಳಾರನ್ನು ಮದುವೆಯಾದರು. ಉಪ ನೋಂದಣಾಧಿಕಾರಿ ರಾಧಾಕೃಷ್ಣನ್‌ ಅವರ ಸಮ್ಮುಖದಲ್ಲಿ ಕುಟಿನ್ಹೊ ಶರ್ಮಿಳಾ ಅವರಿಗೆ ಉಂಗುರ ತೊಡಿಸಿದರು.

Rights activist Irom Sharmila marries long-time partner

ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಇರೋಮ್ ಶರ್ಮಿಳಾ ಕುಟಿನ್ಹೊ ರೊಂದಿಗೆ ಕೊಡೈಕೆನಲ್‌ನಲ್ಲಿ ವಾಸವಾಗಿದ್ದಾರೆ. ಮದುವೆ ನಂತರ ಪ್ರತಿಕ್ರಿಯೆ ನೀಡಿದ ಅವರು, "ಕೊಡೈಕೆನಲ್‌ ಪ್ರಶಾಂತ ಸ್ಥಳ. ಮನಸ್ಸಿನ ಶಾಂತಿಗಾಗಿ ನಡೆಯುತ್ತಿದ್ದ ನನ್ನ ಹುಡುಕಾಟ ಕೊನೆಯಾಗಿದೆ," ಎಂದು ಪ್ರತಿಕ್ರಿಯಿಸಿದ್ದಾರೆ.

ಮಣಿಪುರದಲ್ಲಿ ಜಾರಿಯಲ್ಲಿರುವ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ - ಅಫ್ಸಾ) ವಿರುದ್ಧ ಸತತ 16 ವರ್ಷಗಳು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಕೊನೆಗೆ ಕಳೆದ ವರ್ಷ ಆಗಸ್ಟ್ 9ರಂದು ತಮ್ಮ ಉಪವಾಸ ಅಂತ್ಯಗೊಳಿಸಿ ಚುನಾವಣೆಗೆ ನಿಂತಿದ್ದರು. ಆದರೆ ಕೇವಲ 90 ಮತಗಳನ್ನು ಪಡೆದು ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರು.

ಜುಲೈನಲ್ಲಿ ಬಹುಕಾಲದ ಗೆಳೆಯನನ್ನು ಮದುವೆಯಾಗಲಿದ್ದಾರೆ ಶರ್ಮಿಳಾಜುಲೈನಲ್ಲಿ ಬಹುಕಾಲದ ಗೆಳೆಯನನ್ನು ಮದುವೆಯಾಗಲಿದ್ದಾರೆ ಶರ್ಮಿಳಾ

ಸದ್ಯ ಇರೋಮ್ ಶರ್ಮಿಳಾ ಮತ್ತು ಕಿಟಿನ್ಹೋ ದಂಪತಿ ಕೊಡೈಕೆನಲ್ ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿರುವುದು ಬುಡಕಟ್ಟು ಜನರಿಗೆ ಅಪಾಯಕಾರಿ. ಇಲ್ಲಿನ ಜನರಿಗೆ ಇದರಿಂದ ತೊಂದರೆ ಎದುರಾಗಬಹುದು ಎಂದು ಸ್ಥಳೀಯ ಹೋರಾಟಗಾರ ವಿ.ಮಹೇಂದ್ರನ್‌ ಆಕ್ಷೇಪಿಸಿದ್ದರು.

ಆದರೆ ಇದಕ್ಕೆ ಜಗ್ಗದ ಶರ್ಮಿಳಾ ತಾವು ಕೊಡೈಕೆನಲ್‌ನ ಬುಡಕಟ್ಟು ಜನರ ಪರ ಧ್ವನಿ ಎತ್ತುವುದಾಗಿ ಹೇಳಿದ್ದಾರೆ.

English summary
Manipur civil rights activist Irom Sharmila married her long-time partner Desmond Coutinho, a British national, under the Special Marriage Act at the Sub-Registrar's office here this morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X