ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ತಾನ: 5 ಸಾವಿರ ಕೋಟಿ ಮೌಲ್ಯದ ಮಾದಕ ದ್ರವ್ಯ ವಶ

By Prithviraj
|
Google Oneindia Kannada News

ಉದಯಪುರ, ನವೆಂಬರ್, 2: ರಾಜಸ್ತಾನದ ಉದಯಪುರದಲ್ಲಿ 5ಸಾವಿರ ಕೋಟಿ ರೂ. ಮೌಲ್ಯದ 23.5 ಮೆಟ್ರಿಕ್ ಟನ್ ಗಳಷ್ಟು ಮಂದ್ರಾಕ್ಸ್ ಮಾತ್ರೆಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾಹಿತಿ ತಿಳಿಸಿದ ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆಯ ಅಧ್ಯಕ್ಷ ನಸೀಬ್ ಶಾ ಅವರು " ವಶಪಡಿಸಿಕೊಂಡಿರುವ ಮಾದಕ ದ್ರವ್ಯಗಳು ಮೊಸಂಬಿಕ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಮರಾಟ ಮಾಡಲಾಗುತ್ತಿತ್ತು, ಎಂದು ಅವರು ಹೇಳಿದ್ದಾರೆ.

Revenue officials seize Rs 5,000 cr worth banned drug in Udaipur

ಈ ವಸ್ತುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 5 ಸಾವಿರ ಕೋಟಿ ರೂ. ಮೌಲದ್ಯ ಮಾದಕ ದ್ರವ್ಯಗಳಾಗಿದ್ದು, ಅಪಾಯಕಾರಿ ಸೈಕೊಟ್ರೋಫಿಕ್ ಅಂಶವುಳ್ಳದ್ದಾಗಿವೆ ಎಂದು ಅವರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಿವುಡ್ ನಿರ್ಮಾಪಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಉದಯ್ ಪುರದ ಔಷಧೀಯ ಕಾರ್ಖಾನೆ ಮತ್ತು ಎರಡು ಗೋದಾಮುಗಳ ಮೇಳೆ ದಾಳಿ ನಡೆಸಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಕೊಲೋ ಮೆಂಡ್ರಾಕ್ಸ್ ಸುಮಾರು 20ಲಕ್ಷ ರೂ.ಬೆಲೆಬಾಳುತ್ತದೆ ಎಂದು ತಿಳಿಸಿದ್ದಾರೆ.

ರಾಜಸ್ತಾನ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಅಕ್ರಮವಾಗಿ ಔಷಧಗಳನ್ನು ತಯಾರಿಸುವ ಕಾರ್ಖೆನೆಗಳಿದ್ದು, ಇಲ್ಲಿಂದ ಅಮೆರಿಕ, ಯುರೋಪ್, ಮತ್ತು ದಕ್ಷಿಣ ಆಫ್ರಿಕಾಗಳಿಗೆ ಮಾದಕದ್ರವ್ಯಗಳು ಮಾರಾಟ ಮಾಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಒಂದು ಮೆಂಡ್ರಾಕ್ಸ್ ಮಾತ್ರೆ ತಯಾರಿಸಲು ಕೆಲವೇ ರೂಪಾಯಿಗಳನ್ನು ಖರ್ಚು ಮಾಡಿದರೆ ಸಾಕು. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ತಯಾರಿಕೆಗೆ ಸುಮಾರು 150ರೂ ವೆಚ್ಚ ಮಾಡಲಾಗುತ್ತದೆ.

English summary
The directorate of revenue intelligence (DRI) seized Rs 5,000 crore worth of Mendrax, a banned addictive drug, when it raided a factory and two warehouses in Rajasthan’s Udaipur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X