ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಮಹಾರಾಜ ಅಂಬಾನಿಯ 9 ವರ್ಷದ ಸಂಬಳ ಬಹಿರಂಗ!

ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಕಳೆದ ಕೆಲವು ವರ್ಷಗಳಿಂದ ವೇತನ ಹೆಚ್ಚಳ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಮುಕೇಶ್ ವಾರ್ಷಿಕ ಹದಿನೈದು ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ.

|
Google Oneindia Kannada News

ಮುಂಬೈ, ಜೂ 28: ದೇಶದ ಆಗರ್ಭ ಶ್ರೀಮಂತರಲ್ಲೊಬ್ಬರಾದ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಕಳೆದ ಕೆಲವು ವರ್ಷಗಳಿಂದ ವೇತನ ಹೆಚ್ಚಳ ಪಡೆಯದೇ ಕೆಲಸ ಮಾಡುತ್ತಿದ್ದಾರೆ.

ಇಕಾನಮಿಕ್ ಟೈಮ್ಸ್ ವರದಿಯ ಪ್ರಕಾರ 2008-09ರಲ್ಲಿ ಮುಕೇಶ್ ಅಂಬಾನಿಯ ವಾರ್ಷಿಕ ಸಂಬಳ ಎಷ್ಟಿತ್ತೋ, ಅದೇ ಸಂಬಳವನ್ನು 2017-18ರ ಮೊದಲ ತ್ರೈಮಾಸಿಕದವರೆಗೂ ಮುಂದುವರಿಸಿಕೊಂಡು ಹೋಗಿದ್ದಾರೆ.

ಸಹೋದರನ ಮೊಬೈಲ್ ಸಾಮ್ರಾಜ್ಯವನ್ನು ಅಲುಗಾಡಿಸಿದ ಮುಕೇಶ್ಸಹೋದರನ ಮೊಬೈಲ್ ಸಾಮ್ರಾಜ್ಯವನ್ನು ಅಲುಗಾಡಿಸಿದ ಮುಕೇಶ್

RIL's Mukesh Ambani keeps annual salary unchanged at Rs 15 crore

ರಿಲಯನ್ಸ್ ಸಂಸ್ಥೆಯ ಇತರ ಆಡಳಿತ ಮಂಡಳಿಯ ಸದಸ್ಯರಿಗಿರುವ ಷೇರು ಸೌಲಭ್ಯ (stock option) ಕೂಡಾ ಪಡೆಯದೇ ಮುಕೇಶ್, ವಾರ್ಷಿಕ ಹದಿನೈದು ಕೋಟಿ ರೂಪಾಯಿ ಸಂಬಳಕ್ಕೆ ತನ್ನದೇ ಕಂಪೆನಿಗೆ ದುಡಿಯುತ್ತಿದ್ದಾರೆ.

ಕಳೆದ ಒಂಬತ್ತು ವರ್ಷಗಳಿಂದ ಅಂಬಾನಿ ಸಂಬಳದಲ್ಲಿ ಬದಲಾವಣೆಯಾಗಿಲ್ಲ. ಆಡಳಿತ ಮಂಡಳಿ ಸಭೆಯಲ್ಲಿ ಮುಕೇಶ್ ಅಂಬಾನಿ ಸಂಬಳ ಮತ್ತು ಇತರ ಭತ್ಯೆಗಳು ವಾರ್ಷಿಕ 38.75 ಕೋಟಿಗೆ ಅನುಮೋದನೆ ಪಡೆಯಲಾಗಿದ್ದರೂ ಮುಕೇಶ್ ಪಡೆಯುತ್ತಿರುವುದು ಹದಿನೈದು ಕೋಟಿ ಮಾತ್ರ...

ದೇಶದ ಪ್ರಮುಖ ಕಂಪೆನಿಗಳ ಸಿಇಓ ಮತ್ತು ಎಂಡಿಗಳು ಪಡೆಯುವ ಭಾರೀ ಸಂಬಳದ ಬಗ್ಗೆ 2009ರಲ್ಲಿ ಚರ್ಚೆ ನಡೆಯುತ್ತಿದ್ದಾಗ, ಹದಿನೈದು ಕೋಟಿಗಿಂತ ಹೆಚ್ಚು ಸಂಬಳ ತೆಗೆದುಕೊಳ್ಳುವುದಿಲ್ಲ ಎನ್ನುವ ನಿರ್ಧಾರಕ್ಕೆ ಮುಕೇಶ್ ಅಂಬಾನಿ ಬಂದಿದ್ದರಂತೆ.

ರಿಲಯನ್ಸ್ ಜಿಯೋ ಮೂಲಕ ಭಾರತದ ಮೊಬೈಲ್ ಮಾರುಕಟ್ಟೆ ಪ್ರವೇಶಿಸಿರುವ ಮುಕೇಶ್ ಅಂಬಾನಿ ಸಂಸ್ಥೆ, ಅತ್ಯಂತ ಕಡಿಮೆ ಅವಧಿಯಲ್ಲಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

English summary
Reliance Industries Chairman and Managing Director Mukesh Ambani kept his annual salary capped at Rs 15 crore for the ninth year and did not even take stock options.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X