ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ 7 ಕಾರಣಕ್ಕಾಗಿ ನೀವು 'ಮಲೇಷ್ಯಾಗೆ' ಭೇಟಿ ನೀಡಲೇಬೇಕು!

ಪ್ರವಾಸದ ವಿಷಯಕ್ಕೆ ಬಂದಾಗ ನಮ್ಮ ಏಷ್ಯಾ ಖಂಡದಲ್ಲೇ ಹಲವಾರು ರಾಷ್ಟ್ರಗಳು ಇವೆ. ಅದರಲ್ಲೂ ಪ್ರಮುಖವಾಗಿ ಮಲೇಶಿಯಾ. ಇಲ್ಲಿನ ಸೌಂದರ್ಯವನ್ನು ನೋಡುವುದೇ ಕಣ್ಣಿಗೊಂದು ಆನಂದ. ಇದು ಪ್ರವಾಸಿಗರ ಸ್ವರ್ಗವೆನ್ನಬಹುದು.

Google Oneindia Kannada News

"ಮಲೇಷ್ಯಾ, ನಿಜವಾದ ಏಷ್ಯಾ"

ದೇಶ ಸುತ್ತು ಕೋಶ ಓದು ಎನ್ನುವ ಮಾತಿದೆ. ಯಾಕೆಂದರೆ ಎರಡರಿಂದಲೂ ನಮ್ಮ ಜ್ಞಾನ ವೃದ್ಧಿಯಾಗಿವುದರಲ್ಲಿ ಯಾವುದೇ ಸಂಶಯವಿಲ್ಲ. ಭಾರತೀಯರಿಗೆ ಸಂಪೂರ್ಣವಾಗಿ ಭಾರತವನ್ನು ನೋಡುವುದೇ ದೊಡ್ಡ ಸಾಧನೆ. ಎಲ್ಲರಿಗೂ ಇದು ಸಾಧ್ಯವಿಲ್ಲ. ಪ್ರಯಾಣ ಮಾಡುವಂತಹ ಮನಸ್ಸು ಹಾಗೂ ಹೊಸ ಪ್ರದೇಶಗಳನ್ನು ನೋಡುವಂತಹ ಉತ್ಸಾಹ ಬೇಕು.

ದೇಶ ಬಿಟ್ಟು ಹೊರಗಡೆ ಹೋದರೆ ಹಲವಾರು ದೇಶಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಲ್ಲಿನ ಪ್ರಕೃತಿ ಸೌಂದರ್ಯ, ಪುರಾತನ ಸ್ಮಾರಕಗಳು, ದೇವಾಲಯಗಳು, ಚರ್ಚ್‌ಗಳು ಹಾಗೂ ಮಸೀದಿಗಳು ನಮ್ಮನ್ನು ಸೆಳೆಯುವುದರಲ್ಲಿ ಸಂಶಯವೇ ಇಲ್ಲ. ಪ್ರವಾಸಿಗರಿಗೆ ಹೇಳುವುದಾದರೆ ನಮ್ಮ ಏಷ್ಯಾ ಖಂಡದಲ್ಲೇ ಹಲವಾರು ರಾಷ್ಟ್ರಗಳು ಇವೆ.

ಅದರಲ್ಲೂ ಪ್ರಮುಖವಾಗಿ ಮಲೇಶಿಯಾ. ಇಲ್ಲಿನ ಸೌಂದರ್ಯವನ್ನು ನೋಡುವುದೇ ಕಣ್ಣಿಗೊಂದು ಆನಂದ. ಇದು ಪ್ರವಾಸಿಗರ ಸ್ವರ್ಗವೆನ್ನಬಹುದು. ಇಂಡೋನೇಶಿಯಾ ಮತ್ತು ಥಾಯ್ ಲೆಂಡ್‌ನ ಮಧ್ಯದಲ್ಲಿರುವ ಮಲೇಶಿಯಾವು ತನ್ನ ಸಂಸ್ಕೃತಿ, ಸೌಂದರ್ಯ ಮತ್ತು ವಿಶೇಷ ಆಹಾರದಿಂದ ಗಮನ ಸೆಳೆದಿದೆ.

ವಿದೇಶಿಗಳಿಗೆ ಪ್ರವಾಸದ ಯೋಜನೆಯನ್ನು ಹಾಕಿಕೊಂಡಿರುವವರು ತಮ್ಮ ಕುಟುಂಬದೊಂದಿಗೆ ಮಲೇಶಿಯಾಗೆ ಖಂಡಿತವಾಗಿಯೂ ಪ್ರಯಾಣ ಮಾಡಬಹುದು. ಅಲ್ಲಿರುವ ಸಮುದ್ರ ತೀರದ ರೆಸಾರ್ಟ್ ಗಳು, ಬೀಚ್‌ಗಳು ಇತ್ಯಾದಿ ನಿಮ್ಮನ್ನು ಖುಷಿಪಡಿಸುವುದು ಮಾತ್ರವಲ್ಲದೆ ಪ್ರವಾಸದ ನೆನಪು ಅಚ್ಚಳಿಯದೆ ಉಳಿಯುವಂತೆ ಮಾಡುವುದು.

ಮಲೇಶಿಯಾದಲ್ಲಿ ಹೆಚ್ಚು ಉಷ್ಣತೆ ಅಥವಾ ಅತಿಯಾದ ಚಳಿ ಎನ್ನುವ ಕಾಲವಿಲ್ಲ. ಇಲ್ಲಿ ಸಾಮಾನ್ಯವಾಗಿ ತಾಪಮಾನವು 21 ಡಿಗ್ರಿಯಿಂದ 35 ಡಿಗ್ರಿ ಸೆಲ್ಸಿಯಸ್ ಮಧ್ಯೆ ಇರುತ್ತದೆ. ವರ್ಷದ ಯಾವುದೇ ಸಮಯದಲ್ಲಿ ಬೇಕಾದರೂ ಮಲೇಶಿಯಾಗೆ ಭೇಟಿ ನೀಡಬಹುದಾಗಿದೆ. ಮಲೇಶಿಯಾಗೆ ಭೇಟಿ ನೀಡಲು ಇನ್ನೂ ನಿಮಗೆ ಮನಸ್ಸು ಬರುತ್ತಿಲ್ಲವೆಂದಾದರೆ ನಾವು ಈ ಲೇಖನದಲ್ಲಿ ಪಟ್ಟಿ ಮಾಡಿರುವ 7 ಕಾರಣಗಳನ್ನು ಮೊದಲು ಓದಿಕೊಳ್ಳಿ. ಬಳಿಕ ನೀವು ಬ್ಯಾಗ್ ಪ್ಯಾಕ್ ಮಾಡುವುದು ಗ್ಯಾರಂಟಿ!

ಬಾಟು ಗುಹೆ
ಸೆಲಂಗೊರ್‌ನ ಗೋಮಕ್‌ನಲ್ಲಿರುವ ಬಾಟು ಗುಹೆಯು ಗುಹಾಲಯಗಳಿಗೆ ತವರಾಗಿದೆ. ಈ ಪ್ರಸಿದ್ಧ ಬೆಟ್ಟದ ಬದಿಯಲ್ಲೇ ಹರಿಯುತ್ತಿರುವ ಸುಂಗೈ ಬಾಟು ಎನ್ನುವ ನದಿಯಿಂದಾಗಿ ಈ ಹೆಸರು ಬಂದಿದೆ. ಈ ಗುಹೆಯಲ್ಲಿ ಮುರುಗನ್ ದೇವರ ದೇವಾಲಯವಿದೆ. ಈ ದೇವಾಲಯವು ಹಿಂದೂಗಳಿಗೆ ತುಂಬಾ ಪವಿತ್ರವೆನಿಸಿದೆ. ವಾಸ್ತುಶಿಲ್ಪದ ಮನೆಯಾಗಿದೆ.

why visit Kaula Lumpur in 2017

ಫ್ರೆಸರ್ ಶಿಖರ
ಮಲೇಶಿಯಾದ ರಾಜಧಾನಿ ಕೌಲಲಾಂಪುರದಿಂದ ಸುಮಾರು 2 ಕಿ.ಮೀ. ಪ್ರಯಾಣಿಸಿದಾಗ ಸಿಗುವಂತಹ ಪಹಾಂಗ್ ನ ಶಿಖರಗಳಲ್ಲಿ ಈ ಪ್ರಕೃತಿ ಸೌಂದರ್ಯದ ತಾಣ ಫ್ರೆಸರ್ ಶಿಖರವಿದೆ. ಮಲೇಶಿಯಾದಲ್ಲಿ ಬುಕಿತ್ ಫ್ರೆಸರ್ ಎಂದು ಕರೆಯಲ್ಪಡುವ ಈ ಶಿಖರವು ಮಲೇಶಿಯಾ ಹಾಗೂ ವಿದೇಶಿ ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. 1800ದಲ್ಲಿ ಈ ಫ್ರೆಸರ್ ಶಿಖರದಲ್ಲಿ ತಾಮ್ರ ಮತ್ತು ಅದಿರಿನ ವ್ಯಾಪಾರ ನಡೆಯುತ್ತಾ ಇತ್ತು. ಆದರೂ ಈ ಪ್ರದೇಶವು ಪ್ರಕೃತಿ ಪ್ರಿಯರ ಇಷ್ಟದ ಪ್ರದೇಶವಾಗಿದೆ.

why visit Kaula Lumpur in 2017

ಥಿಯಾನ್ ಹೌವ್ ದೇವಾಲಯ
ದಕ್ಷಿಣ ಏಶ್ಯಾದಲ್ಲಿರುವ ಅತ್ಯಂತ ಪುರಾತನ ಮಂದಿರ ಇದಾಗಿದೆ. ಈ ಮಂದಿರುವ ಚೀನಾದ ಸಮುದ್ರ ದೇವತೆ ಮಝುಗೆ ಅರ್ಪಿಸಲಾಗಿದೆ. ಬೆಟ್ಟದ ಮೇಲಿರುವ ದೇವಾಲಯದಲ್ಲಿ ವಾಸ್ತುಶಿಲ್ಪದ ಅದ್ಭುತವನ್ನು ನೀವು ಕಾಣಬಹುದಾಗಿದೆ. ಇಲ್ಲಿಂದ ಕೌಲಲಾಂಪುರದ ಜಲಾನ್ ಸೈಯದ್ ಪುತ್ರಾವನ್ನು ಕಾಣಬಹುದಾಗಿದೆ.

why visit Kaula Lumpur in 2017

ಪೆನಾಂಗ್ ಬೀಚ್
ಶುಭ್ರಬಿಳಿ ಮರಳು ಮತ್ತು ನೀಲಿ ಬಣ್ಣದ ಸ್ವಚ್ಛ ನೀರನ್ನು ನೋಡಬೇಕೆಂದರೆ ನೀವು ಮಲೇಶಿಯಾದ ವಾಯುವ್ಯ ಕರಾವಳಿ ಭಾಗದಲ್ಲಿರುವ ಪೆನಾಂಗ್ ರಾಜ್ಯದಲ್ಲಿರುವ ಪೆನಾಂಗ್ ಬೀಚ್ ಗೆ ಭೇಟಿ ನೀಡಲೇಬೇಕು. ಪ್ರಕೃತಿಯ ಅದ್ಭುತ ದೃಶ್ಯಗಳು ಮತ್ತು ವಿವಿಧ ಬಗೆಯ ಆಹಾರವನ್ನು ಇಲ್ಲಿ ಸವಿಯಬಹುದಾಗಿದೆ.

why visit Kaula Lumpur in 2017

ಪೆಟ್ರಾನಾಸ್ ಗೋಪುರ
ಪೆಟ್ರಾನಾಸ್ ಗೋಪುರ ಅಥವಾ ಪೆಟ್ರಾನಾಸ್ ಅವಳಿ ಗೋಪುರವು ವಿಶ್ವದ ಅತೀ ಎತ್ತರದ ಕಟ್ಟಡಗಳ ಪಟ್ಟಿಯಲ್ಲಿದೆ. ಸೀಸರ್ ಪೆಲ್ಲಿ ಮತ್ತು ಸಂಸ್ಥೆ ನಿರ್ಮಿಸಿರುವಂತಹ ಈ ಕಟ್ಟಡದ ವಾಸ್ತುಶಿಲ್ಪವನ್ನು ನೋಡಿದರೆ ಒಮ್ಮೆ ಬೆರಗಾಗುವುದು ಖಚಿತ. 452 ಮೀಟರ್ ಎತ್ತರವಿರುವಂತಹ ಪೆಟ್ರಾನಾಸ್ ಅವಳಿ ಕಟ್ಟಡದಲ್ಲಿ ಜಾಗಿಂಗ್ ಟ್ರ್ಯಾಕ್, ನಡೆದಾಡಲು ಸುವ್ಯವಸ್ಥಿತವಾದ ಜಾಗ ಮತ್ತು ಈಜುಕೊಳವಿದೆ.

why visit Kaula Lumpur in 2017

ಗೊಂಡೊಲಾ ಲಿಫ್ಟ್
ಮಲೇಶಿಯಾದಲ್ಲಿರುವಂತಹ ಈ ಆಕಾಶಮಾರ್ಗವು ಏಷ್ಯಾದ ಅತ್ಯಂತ ವೇಗ ಹಾಗೂ ಉದ್ದದ ಆಕಾಶ ಮಾರ್ಗವಾಗಿದೆ. ಇದು ಮಲೇಶಿಯಾದ ಪಹಾಂಗ್ ನಲ್ಲಿರುವ ರೆಸಾರ್ಟ್ ಹೋಟೆಲ್ ಮತ್ತು ಗೊಹಾಟೊಂಗ್ ಜಯಾವನ್ನು ಸಂಪರ್ಕಿಸುತ್ತದೆ. ಈ ಲಿಫ್ಟ್‌ನಲ್ಲಿ ಸುಮಾರು 20 ಸಾವಿರ ಮಂದಿ ಒಂದು ಗಂಟೆಯಲ್ಲಿ ಪ್ರಯಾಣಿಸುತ್ತಾರೆ. ಎಂಜಿನಿಯರ್‌ಗಳ ಕರಾಮತ್ತನ್ನು ನೋಡಲು ಮಲೇಶಿಯಾದ ಈ ಲಿಫ್ಟ್ ಅನ್ನು ನೋಡಲೇಬೇಕು.

ಏರ್‌ ಏಷ್ಯಾದ ಅಮೋಘ ಪ್ಯಾಕೇಜ್‌ಗಳು
2017ರಲ್ಲಿ ಮಲೇಶಿಯಾ ಅಥವಾ ಕೌಲಲಾಂಪುರಕ್ಕೆ ಭೇಟಿ ನೀಡಲು ಮತ್ತೊಂದು ಕಾರಣವೆಂದರೆ ಏರ್‌ ಏಷ್ಯಾದವರು ನೀಡುತ್ತಿರುವ ರಿಯಾಯಿತಿ ವಿಮಾನ ಟಿಕೆಟ್ ದರಗಳು. ಕೇವಲ 999 ರೂ.ಯೊಂದಿಗೆ ನೀವು ಮಲೇಶಿಯಾಗೆ ಪ್ರಯಾಣಿಸಬಹುದಾಗಿದೆ. ಮುಂದೆ ಬರುವಂತಹ ಉದ್ದುದ್ದದ ವಾರಾಂತ್ಯದಲ್ಲಿ ನೀವು ಮಲೇಶಿಯಾಗೆ ಪ್ರಯಾಣಿಸಲು ಇದಕ್ಕಿಂತ ಒಳ್ಳೆಯ ಕಾರಣಗಳು ಇನ್ನು ಬೇಕೇ?.

ಇನ್ನು ತಡ ಮಾಡುವುದು ಯಾಕೆ? ತಕ್ಷಣ ಏರ್‌ ಏಷ್ಯಾದಲ್ಲಿ ಟಿಕೆಟ್ ಬುಕ್ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X