ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಲಿತ್ ಮೋದಿ ವಿರುದ್ಧ ಮಾನಹಾನಿ ದೂರು

|
Google Oneindia Kannada News

ನವದೆಹಲಿ, ಜು. 05: ಐಪಿಎಲ್ ಫಿಕ್ಸಿಂಗ್ ಹಗರಣ, ವೀಸಾ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಲಲಿತ್ ಮೋದಿ ಮೇಲೆ ಮತ್ತೊಂದು ದೂರು ದಾಖಲಾಗಿದೆ. ರಾಷ್ಟ್ರಪತಿ ಭವನದ ಅಧಿಕಾರಿಗಳು ಲಮೋ ವಿರುದ್ಧ ದೆಹಲಿ ಪೊಲೀಸರಿಗೆ ಮಾನಹಾನಿ ದೂರು ದಾಖಲಿಸಿದ್ದಾರೆ.

ಪ್ರಣಬ್ ಮುಖರ್ಜಿ ಅವರ ಕಾರ್ಯದರ್ಶಿ ಒಮಿತ್ ಪೌಲ್ ಹಣಕಾಸು ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಮಾನಹಾನಿಕರವಾಗಿ ಟ್ವೀಟ್ ಮಾಡಿದ್ದ ಹಿನ್ನೆಲೆಯಲ್ಲಿ ಲಲಿತ್ ವಿರುದ್ಧ ರಾಷ್ಟ್ರಪತಿ ಭವನ ದೆಹಲಿ ಪೊಲೀಸರಿಗೆ ದೂರು ನೀಡಿದೆ. [ಐಪಿಎಲ್ ಫಿಕ್ಸಿಂಗ್ ಭೂತ ಎಬ್ಬಿಸಿದ ಲಲಿತ್ ಮೋದಿ]

lalit modi

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೆಕ್ರೆಟರಿ ಒಮಿತಾ ಪೌಲ್‌ಗೆ ಹವಾಲಾ ಮಧ್ಯವರ್ತಿ ನಾಗ್‌ಪಾಲ್ ಜತೆ ಸಂಪರ್ಕವಿಗೆ ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದರು.ಇದನ್ನು ಖಂಡಿಸಿ ರಾಷ್ಟ್ರಪತಿ ಭವನ ದೂರು ಸಲ್ಲಿಸಿದೆ. ಜೂನ್ 23ರಂದು ಒಮಿತಾ ಪೌಲ್ ವಿರುದ್ಧ ಲಲಿತ್ ಮೋದಿ ಟ್ವೀಟ್ ಮಾಡಿದ್ದ ಪ್ರತಿಯನ್ನು ದೂರಿನೊಂದಿಗೆ ಸಲ್ಲಿಕೆ ಮಾಡಲಾಗಿದೆ.[ಲಲಿತ್ ಮೋದಿ-ಸುಷ್ಮಾ ವಿವಾದದ ಸಂಪೂರ್ಣ ಚಿತ್ರಣ]

ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ತಪ್ಪಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಇದು ದೆಹಲಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು ಯಾವ ಆಧಾರದಲ್ಲಿ ಆರೋಪದಲ್ಲಿ ದೂರು ದಾಖಲಿಸಿಕೊಳ್ಳಬೇಕು ಎಂಬುದನ್ನು ಚಿಂತಿಸುತ್ತಿದ್ದಾರೆ.

English summary
Rashtrapati Bhavan has filed a complaint with Delhi Police in connection with alleged derogatory tweets by Lalit Modi, being probed by the Enforcement Directorate for alleged money laundering, against President Pranab Mukherjee's Secretary Omita Paul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X