ರಾಜ್ಯಸಭಾ ಚುನಾವಣೆ: ದೇಶಾದ್ಯಂತ ಮೇಲುಗೈ ಸಾಧಿಸಿದ ಬಿಜೆಪಿ

Written by:
Subscribe to Oneindia Kannada

ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯಸಭಾ ಚುನಾವಣೆಯ ಫಲಿತಾಂಶ ಶನಿವಾರ (ಜೂ 11) ಪ್ರಕಟಗೊಂಡಿದ್ದು, ಒಟ್ಟಾರೆಯಾಗಿ ಬಿಜೆಪಿ ತನ್ನ ಬಲ ವೃದ್ದಿಸಿಕೊಂಡಿದೆ. ಆದರೂ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷದ ಸ್ಥಾನಮಾನವನ್ನು ಉಳಿಸಿಕೊಂಡಿದೆ.

ಒಟ್ಟು ತೆರವಾಗಿದ್ದ 57ಸ್ಥಾನಗಳಲ್ಲಿ 30 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. 27 ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹನ್ನೆರಡು ಸ್ಥಾನದಲ್ಲಿ ಗೆದ್ದರೆ, ಸಮಾಜವಾದಿ ಪಕ್ಷ ಏಳು ಸ್ಥಾನವನ್ನು ತನ್ನದಾಗಿಸಿಕೊಂಡಿದೆ. (ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಶೂನ್ಯ ಸಾಧನೆ)

ಹರ್ಯಾಣದಲ್ಲಿ 14 ಕಾಂಗ್ರೆಸ್ ಶಾಸಕರು ಉದ್ದೇಶಪೂರ್ವಕವಾಗಿ ತಪ್ಪು ಪೆನ್ನಿನಿಂದ ಮತ ಚಲಾಯಿಸಿದ್ದರಿಂದ, ಅವರೆಲ್ಲರ ಮತ ತಿರಸ್ಕೃತಗೊಂಡಿದೆ. ಹೀಗಾಗಿ, ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಸೋಲು ಅನುಭವಿಸಿದ್ದಾರೆ.

ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಕುಟುಂಬದ ಕುಡಿ ಸಂಭಾಜೆ ರಾಜೆ ಛತ್ರಪತಿಯನ್ನು ಕೇಂದ್ರ ಸರಕಾರ ನಾಮಾಂಕನಗೊಳಿಸಿದೆ. ಇನ್ನು ಜಾರ್ಖಂಡ್ ನಲ್ಲಿ ಪ್ರತಿಪಕ್ಷಗಳ ಜಗಳದ ಲಾಭ ಬಿಜೆಪಿಗಾಗಿದೆ.

ಶನಿವಾರ ಪ್ರಕಟಗೊಂಡ ಒಟ್ಟು 27 ಸ್ಥಾನಗಳ ಫಲಿತಾಂಶದಲ್ಲಿ ಬಿಜೆಪಿ 12, ಕಾಂಗ್ರೆಸ್ 6, ಎಸ್ಪಿ 7 ಮತ್ತು ಬಿಎಸ್ಪಿ 2 ಸ್ಥಾನದಲ್ಲಿ ಜಯಸಾಧಿಸಿದೆ. (ಟೈಮ್ಸ್ ನೌ ವರದಿಗಾರ್ತಿಯನ್ನು ಟೀಕಿಸಿದ ಖೇಣಿ)

ಶನಿವಾರದ ಫಲಿತಾಂಶದ ನಂತರ ರಾಜ್ಯಸಭೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಮತ್ತು ಗೆದ್ದ 27 ಅಭ್ಯರ್ಥಿಗಳ ಹೆಸರನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಪಕ್ಷಗಳ ಬಲಾಬಲ - 1 (ಒಟ್ಟು ಸ್ಥಾನ 245)

ಕಾಂಗ್ರೆಸ್ - 64
ಬಿಜೆಪಿ - 49
ಎಸ್ಪಿ - 14
ಜೆಡಿಯು - 13
ಎಐಎಡಿಎಂಕೆ - 12
ಟಿಎಂಸಿ - 12
ಬಿಎಸ್ಪಿ - 10
ನಾಮ ನಿರ್ದೇಶನ - 09

ಪಕ್ಷಗಳ ಬಲಾಬಲ - 2 (ಒಟ್ಟು ಸ್ಥಾನ 245)

ಸಿಪಿಐಎಂ - 08
ಬಿಜೆಡಿ - 07
ಟಿಡಿಪಿ - 06
ಎನ್ಸಿಪಿ - 06
ಡಿಎಂಕೆ - 04
ಶಿವಸೇನೆ - 03
ಅಕಾಲಿದಳ - 03
ಇತರರು ಮತ್ತು ಪಕ್ಷೇತರರು - 19
ಖಾಲಿಯಿರುವ ಸ್ಥಾನ - 06

ಗೆದ್ದವರ ಪಟ್ಟಿ - 1

ಬೀರೇಂದರ್ ಸಿಂಗ್ - ಬಿಜೆಪಿ (ಹರ್ಯಾಣ)
ಸುಭಾಶ್ ಚಂದ್ರ - ಬಿಜೆಪಿ (ಹರ್ಯಾಣ)
ಎಂ ಜೆ ಅಕ್ಬರ್ - ಬಿಜೆಪಿ (ಮ.ಪ್ರ)
ಅನಿಲ್ ಮಾಧವ್ ದಾವೆ - ಬಿಜೆಪಿ (ಮ.ಪ್ರ)
ವಿವೇಕ್ ಠಂಕಾ - ಕಾಂಗ್ರೆಸ್ (ಮ.ಪ್ರ)
(ಚಿತ್ರದಲ್ಲಿ ಎಂ ಜೆ ಅಕ್ಬರ್)

ಗೆದ್ದವರ ಪಟ್ಟಿ - 2

ವೆಂಕಯ್ಯ ನಾಯ್ಡು - ಬಿಜೆಪಿ (ರಾಜಸ್ಥಾನ)
ಓಂ ಪ್ರಕಾಶ್ ಮಾಥುರ್ - ಬಿಜೆಪಿ (ರಾಜಸ್ಥಾನ)
ಹರ್ಷವರ್ಧನ್ ಸಿಂಗ್ - ಬಿಜೆಪಿ (ರಾಜಸ್ಥಾನ)
ರಾಂಕುಮಾರ್ ವರ್ಮಾ - - ಬಿಜೆಪಿ (ರಾಜಸ್ಥಾನ)
ನಿರ್ಮಲಾ ಸೀತಾರಾಮನ್ - ಬಿಜೆಪಿ (ಕರ್ನಾಟಕ)
(ಚಿತ್ರದಲ್ಲಿ ವೆಂಕಯ್ಯ ನಾಯ್ಡು)

ಗೆದ್ದವರ ಪಟ್ಟಿ - 3

ಮುಖ್ತಾರ್ ಅಬ್ಬಾಸ್ ನಖ್ವಿ - ಬಿಜೆಪಿ (ಜಾರ್ಖಂಡ)
ಮಹೇಶ್ ಪೊದ್ದಾರ್ - ಬಿಜೆಪಿ (ಜಾರ್ಖಂಡ)
ಪ್ರದೀಪ್ ತಮ್ಟಾ - ಕಾಂಗ್ರೆಸ್ ( ಉತ್ತರಾಖಂಡ)
ಶಿವಪ್ರತಾಪ್ ಶುಕ್ಲಾ - ಬಿಜೆಪಿ (ಉ.ಪ್ರ)
ಅಶೋಕ್ ಸಿದ್ದಾರ್ಥ - ಬಿಎಸ್ಪಿ (ಉ.ಪ್ರ)
ಸತೀಶ್ ಮಿಶ್ರಾ - ಬಿಎಸ್ಪಿ (ಉ.ಪ್ರ)
(ಚಿತ್ರದಲ್ಲಿ ಮುಖ್ತಾರ್ ಅಬ್ಬಾಸ್ ನಖ್ವಿ)

ಗೆದ್ದವರ ಪಟ್ಟಿ - 4

ಅಮರ್ ಸಿಂಗ್ - ಎಸ್ಪಿ (ಉ.ಪ್ರ)
ಬೇನಿ ಪ್ರಸಾದ್ ವರ್ಮಾ - ಎಸ್ಪಿ (ಉ.ಪ್ರ)
ಸಂಜಯ್ ಸೇಠ್ - ಎಸ್ಪಿ (ಉ.ಪ್ರ)
ಆರ್ ರಮಣ್ ಸಿಂಗ್ - ಎಸ್ಪಿ (ಉ.ಪ್ರ)
ಸುಖರಾಂ ಯಾದವ್ - ಎಸ್ಪಿ (ಉ.ಪ್ರ)
ಸುರೇಂದರ್ ನಗರ್ - ಎಸ್ಪಿ (ಉ.ಪ್ರ)
ವಿಶಂಬರ್ ಪ್ರಸಾದ್ - ಎಸ್ಪಿ (ಉ.ಪ್ರ)
(ಚಿತ್ರದಲ್ಲಿ ಅಮರ್ ಸಿಂಗ್)

ಗೆದ್ದವರ ಪಟ್ಟಿ - 5

ಕಪಿಲ್ ಸಿಬಲ್ - ಕಾಂಗ್ರೆಸ್ (ಉ.ಪ್ರ)
ಆಸ್ಕರ್ ಫೆರ್ನಾಂಡಿಸ್ - ಕಾಂಗ್ರೆಸ್ (ಕರ್ನಾಟಕ)
ಕೆ ಸಿ ರಾಮಮೂರ್ತಿ - ಕಾಂಗ್ರೆಸ್ (ಕರ್ನಾಟಕ)
ಜೈರಾಂ ರಮೇಶ್ - ಕಾಂಗ್ರೆಸ್ (ಕರ್ನಾಟಕ)
(ಚಿತ್ರದಲ್ಲಿ ಕೆ ಸಿ ರಾಮಮೂರ್ತಿ)

English summary
Rajya Sabha poll 2016 results: List of winners and party position RS. Winners list includes prominent leaders like Venkaiah Naidu, M J Akbar, Amar Singh, Kapil Sibal, Jairam Ramesh.
Please Wait while comments are loading...