ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್‌ನಲ್ಲಿ ಅಸಹಿಷ್ಣುತೆ ಪ್ರತಿಧ್ವನಿ: ರಾಜನಾಥ್ VS ಸಲೀಂ

|
Google Oneindia Kannada News

ನವದೆಹಲಿ, ನವೆಂಬರ್, 30: ಅಸಹಿಷ್ಣುತೆ ವಿವಾದ ಮತ್ತು ಗೊಂದಲದ ಪರಿಣಾಮ ಸೋಮವಾರ ಲೋಕಸಭೆಯಲ್ಲೂ ಕಂಡುಬಂದಿತು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಸಿಪಿಐಎಂನ ಮೊಹಮದ್ ಸಲೀಂ ನಡುವಿನ ವಾಕ್ ಸಮರಕ್ಕೂ ಅಸಹಿಷ್ಣುತೆ ಸಾಕ್ಷಿಯಾಯಿತು.

ಸಂಸತ್ ಹೊರಗಡೆ ಜಂತರ್ ಮಂತರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ನಡೆಸುತ್ತಿದ್ದವರನ್ನು ದೆಹಲಿ ಪೊಲೀಸರು ಬಂಧಿಸಿದರು.['ಅಸಹಿಷ್ಣುತೆ'ಗೆ ಭಾರತೀಯ ಮುಸ್ಲಿಂ ಮಹಿಳೆ ಹಿಡಿದ ಕನ್ನಡಿ]

singh

ಅಸಹಿಷ್ಣುತೆ ಲೋಕಸಭೆಯಲ್ಲಿ ಹೇಗೆ ಪ್ರತಿಧ್ವನಿಸಿತು?
* ಎಡರಂಗದ ಮೊಹಮದ್ ಸಲೀಂ ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು ಅವರು ಕ್ಷಮೆ ಕೇಳಬೇಕು ಎಂದು ರಾಜ್ ನಾಥ್ ಸಿಂಗ್ ಆಗ್ರಹಿಸಿದರು.
* ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದಾಗ 800 ವರ್ಷಗಳ ನಂತರ ದೇಶದ ಅಧಿಕಾರ ಹಿಂದು ಒಬ್ಬನ ಕೈಗೆ ಬಂತು ಎಂದು ನಾನು ಹೇಳಿರಲಿಲ್ಲ ಎಂದು ಸಿಂಗ್ ಸ್ಪಷ್ಟಪಡಿಸಿದರು.[ಅಸಹಿಷ್ಣುತೆ ಬಗ್ಗೆ ಸೊಲ್ಲೆತ್ತಿದ್ದ ಅಮೀರ್ ಗೆ ಬಹಿರಂಗ ಪತ್ರ]
* ಇದಕ್ಕೆ ಉತ್ತರ ನೀಡಿದ ಸಲೀಂ ನ್ಯೂಸ್ ಪೇಪರ್ ವೊಂದರ್ ಪ್ರಕಟಣೆ ತೋರಿಸಿದ್ದಲ್ಲದೇ ಮಾಧ್ಯಮಗಳು ಸುಳ್ಳು ಬರೆಯುತ್ತೆವೆಯೇ ಎಂದು ಪ್ರಶ್ನೆ ಮಾಡಿದರು.
* ಇದಾದ ಮೇಲೆ ಟ್ವಿಟ್ಟರ್ ನಲ್ಲಿಯೂ ಈ ಪ್ರಕರಣ ಟ್ರೆಂಡ್ ಆಯಿತು. ಹಿಂದೂ ಕೈ ಗೆ ಅಧಿಕಾರ ಹೇಳಿಕೆ ನೀಡಿದ್ದು ಅಶೋಕ್ ಸಿಂಘಾಲ್ ಎಂಬ ಅಭಿಪ್ರಾಯಗಳು ವ್ಯಕ್ತವಾದವು.
* ದೇಶದಲ್ಲಿ ಅಸಹಿಷ್ಣುತೆ ಇದೆ. ಇದೇ ಕಾರಣಕ್ಕೆ ಅನೇಕ ಸಾಹಿತಿಗಳು ಚಿಂತಕರು ತಮಗೆ ದೊರೆತಿದ್ದ ಪ್ರಶಸ್ತಿ ಪುರಸ್ಕಾರಗಳನ್ನು ಹಿಂದಕ್ಕೆ ನೀಡಿದ್ದಾರೆ ಎಂದು ವಿರೋಧ ಪಕ್ಷದ ಮುಖಂಡರು ಆಗ್ರಹಿಸಿದರು.
* ವಾತಾವರಣ ಬದಲಾವಣೆ, ಸರಕು ಮತ್ತು ಸೇವೆಗಳ ಬಿಲ್(ಜಿಎಸ್ ಟಿ) ಕುರಿತಾದ ಚರ್ಚೆಗಳ ಆರಂಭಕ್ಕೂ ಮೊದಲ ಹಂತದ ಒಪ್ಪಿಗೆ ಸಿಕ್ಕಿತು.
* ಜಿಎಸ್ ಟಿ ಕುರಿತಾಗಿ ಮಾತುಕತೆ ನಡೆಸಲು ಪ್ರಧಾನಿ ಮೋದಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರನ್ನು ಚಾಯ್ ಪೇ ಚರ್ಚಾಗೆ ಆಹ್ವಾನಿಸಿದ್ದರು.

English summary
The debate on intolerance took an ugly turn today in Lok Sabha after accused Home Minister Rajnath Singh of making Hindu ruler remark. CPI-M Mohammad Salim started the discussion on intolerance in Lok Sabha, saying that it is a serious issue concerning the country. Reacting to this Rajnath Singh says he is very hurt because of the allegations put on him. He said "I would want to ask him where I have made such remarks on Hindu leader comments or else apologise."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X