ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ವೇಟ್ ಲಿಸ್ಟ್ ಪ್ರಯಾಣಿಕರಿಗೆ ಶುಭ ಸುದ್ದಿ!

'ವೇಟ್ ಲಿಸ್ಟ್‌’ನಲ್ಲಿರುವ ಪ್ರಯಾಣಿಕರು, ಅದೇ ಮಾರ್ಗದಲ್ಲಿನ ರಾಜಧಾನಿ ಮತ್ತು ಶತಾಬ್ದಿಯಂತಹ ಉನ್ನತ ದರ್ಜೆಯ ರೈಲುಗಳಲ್ಲೂ ಪ್ರಯಾಣಿಸುವ ಅವಕಾಶವನ್ನು 'ವಿಕಲ್ಪ್' ಹೆಸರಿನ ಹೊಸ ಯೋಜನೆ ನೀಡಲಿದೆ.

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 23: 'ವೇಟ್ ಲಿಸ್ಟ್‌'ನಲ್ಲಿರುವ ಪ್ರಯಾಣಿಕರು, ಸರಿಯಾದ ಸಮಯಕ್ಕೆ ತಾವು ಬುಕ್ ಮಾಡಿದ ರೈಲು ಸಿಗದೆ ಪರದಾಡುತ್ತಿದ್ದ ದಿನಗಳು ಇನ್ಮುಂದೆ ಕಡೆಮೆಯಾಗಲಿದೆ. ಏಪ್ರಿಲ್ 01 ದಿಂದ ವಿಕಲ್ಪ್ ಹೆಸರಿನ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ.

ಈ ಯೋಜನೆಯಂತೆ ವೇಟಿಂಗ್ ಪಟ್ಟಿಯಲ್ಲಿರುವ ಪ್ರಯಾಣಿಕರು ಅದೇ ಮಾರ್ಗದಲ್ಲಿನ ರಾಜಧಾನಿ ಮತ್ತು ಶತಾಬ್ದಿಯಂತಹ ಉನ್ನತ ದರ್ಜೆಯ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸುವ ಅವಕಾಶವನ್ನು 'ವಿಕಲ್ಪ್' ಹೆಸರಿನ ಹೊಸ ಯೋಜನೆ ನೀಡಲಿದೆ.

ಬುಕ್ಕಿಂಗ್ ಮಾಡುವ ವೇಳೆಗೆ ವಿಕಲ್ಪ್ ಆಯ್ಕೆ ಮಾಡಿಕೊಳ್ಳುವ ಅವಕಾಶ ಸಿಗುತ್ತದೆ. ನಿಗದಿತ ರೈಲಿನಲ್ಲಿ ಸೀಟು ಸಿಗದಿದ್ದಾಗ, ಅದೇ ಮಾರ್ಗದಲ್ಲಿ ಸಂಚರಿಸಲಿರುವ ಮುಂದಿನ ಮೊದಲ ರೈಲಿನಲ್ಲಿ ಪ್ರಯಾಣಿಸಬಹುದು. ಉನ್ನತ ದರ್ಜೆಯ ರೈಲಿನಲ್ಲಿ ಪ್ರಯಾಣಿಸಿದರೂ ಹೆಚ್ಚುವರಿ ದರ ಭರಿಸಬೇಕಿಲ್ಲ. ಮುಂದಿನ ರೈಲಿನ ಟಿಕೆಟ್ ದರ ಕಡಿಮೆ ಇದ್ದರೂ, ಉಳಿಕೆ ಹಣ ಪ್ರಯಾಣಿಕರಿಗೆ ಮರುಪಾವತಿ ಆಗುವುದಿಲ್ಲ

ವಿಕಲ್ಪ್ ಯಾರಿಗೆ ಲಭ್ಯ

ವಿಕಲ್ಪ್ ಯಾರಿಗೆ ಲಭ್ಯ

'ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದವರಿಗೆ ಮಾತ್ರ ಸದ್ಯಕ್ಕೆ ವಿಕಲ್ಪ್ ಸೌಲಭ್ಯ ಸಿಗಲಿದೆ. ಮುಂದಿನ ದಿನಗಳಲ್ಲಿ ಕೌಂಟರ್‌ ಗಳಲ್ಲಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೂ ಈ ಅವಕಾಶ ವಿಸ್ತರಿಸಲಾಗುವುದು. ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸುವ ವೇಳೆ 'ವಿಕಲ್ಪ'ವನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ಈ ಸೌಲಭ್ಯ ದೊರೆಯಲಿದೆ'

ಪ್ರೀಮಿಯಂ ರೈಲುಗಳು

ಪ್ರೀಮಿಯಂ ರೈಲುಗಳು

'ಬೇಡಿಕೆ ಇಲ್ಲದ ದಿನಗಳಲ್ಲಿ ಶತಾಬ್ದಿ, ರಾಜಧಾನಿ, ತುರಂತೊ ರೈಲುಗಳಲ್ಲಿ ಪ್ರತಿದಿನ ಸುಮಾರು 1.5 ಲಕ್ಷ ಸೀಟುಗಳು ಖಾಲಿ ಇರುತ್ತವೆ. ಇದರಿಂದ ಪ್ರತಿ ವರ್ಷ ಪ್ರಯಾಣಿಕರಿಗೆ ಮರುಪಾವತಿ ರೂಪದಲ್ಲಿ ಸುಮಾರು 3,500 ಕೋಟಿ ರು ಇಲಾಖೆ ನೀಡುತ್ತಿದೆ. ನಿಗದಿತ ರೈಲಿನಲ್ಲಿ ಸೀಟು ಸಿಗದ ಪ್ರಯಾಣಿಕರಿಗೆ, ಬೇರೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಇಲಾಖೆ ಮುಂದಾಗಿದೆ.

ವಿಕಲ್ಪ್ ಯೋಜನೆ ಎಲ್ಲೆಲ್ಲಿ?

ವಿಕಲ್ಪ್ ಯೋಜನೆ ಎಲ್ಲೆಲ್ಲಿ?

ಪ್ರಾಯೋಗಿಕವಾಗಿ ವಿಕಲ್ಪ್ ಯೋಜನೆಯನ್ನು ಕಳೆದ ನವೆಂಬರ್ 1ರಿಂದ ಆರು ಮಾರ್ಗಗಳಲ್ಲಿ ಜಾರಿಗೊಳಿಸಲಾಗಿದೆ. ದೆಹಲಿ ಲಕ್ನೋ, ದೆಹಲಿ ಜಮ್ಮು, ದೆಹಲಿ ಮುಂಬೈ ಸೆಕ್ಟರ್ ಗಳಲ್ಲಿ ಉತ್ತಮ ಪ್ರತಿಕಿಯೆ ಸಿಕ್ಕಿದೆ. ಯೋಜನೆ ಜಾರಿಗೊಂಡ ಬಳಿಕ ಎಲ್ಲೆಡೆ ವಿಸ್ತರಿಸಲಾಗುತ್ತದೆ.

ಯೋಜನೆ ಬಗ್ಗೆ ಮಾಹಿತಿ

ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಟ್ವೀಟ್ ಮಾಡಿ, ವಿಕಲ್ಪ್ ಯೋಜನೆಯ ಮುಖ್ಯಾಂಶಗಳನ್ನು ತಿಳಿಸಿದ್ದಾರೆ.

ಎಲ್ಲೆಲಿ ಲಭ್ಯ

ವಿಕಲ್ಪ್ ಯೋಜನೆ ಯಾವಾಗ ಜಾರಿಗೊಳ್ಳಲಿದೆ? ಯಾವ ಯಾವ ಪ್ರೀಮಿಯಂ ರೈಲು ಬಳಸಬಹುದು ಎಂಬ ವಿವರ ನೀಡಿದ್ದಾರೆ.

English summary
The Indian Railways new Vikalp scheme which will be rolled out from on April 1 will help wait-listed passengers. Passengers can get an option to travel in premium trains like Shatabdi and Rajdhani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X