ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ರೈಲು ಯಾತ್ರೆಗೆ ಟ್ವೀಟ್ ಪ್ರತಿಕ್ರಿಯೆಗಳು

By Mahesh
|
Google Oneindia Kannada News

ಬೆಂಗಳೂರು, ಏ.28: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಭಾರತಕ್ಕೆ ಬಂದ ಮೇಲೆ ಫುಲ್ ಫಾರ್ಮ್ ಗೆ ಬಂದಿದ್ದಾರೆ. ಭೂ ಸ್ವಾದೀನ ಕಾಯ್ದೆ ವಿರುದ್ಧ ತಿರುಗಿ ಬಿದ್ದಿರುವ ರಾಹುಲ್ ಅವರು ಮೋದಿ ಸರ್ಕಾರಕ್ಕೆ ಸವಾಲಾಗಿ ನಿಂತಿದ್ದಾರೆ. ರೈತರ ಬಳಿಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಗ್ನರಾಗಿರುವ ರಾಹುಲ್ ಪಾದಯಾತ್ರೆ ರೈಲು ಪ್ರಯಾಣ ಈಗ ಬಹುಚರ್ಚಿತ ವಿಷಯವಾಗಿದೆ.

ಗೌರಿಕುಂಡದಿಂದ ಕೇದಾರನಾಥದವರೆಗೆ 16 ಕಿ.ಮೀ ದೂರ ಕಾಲ್ನಡಿಗೆ ಮೂಲಕ ಸಾಗಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಸಂಸದ ಸಾಕ್ಷಿ ಆಡಿದ ಮಾತುಗಳನ್ನು ಪಕ್ಕಕ್ಕಿಡೋಣ. ರೈತರ ಸಂಕಷ್ಟ ಅರಿಯಲು ರಾಹುಲ್ ಪಂಜಾಬಿಗೆ ರೈಲು ಮೂಲಕ ಪ್ರಯಾಣಿಸಿದ್ದಾರೆ.

ಏ.30ರಲ್ಲಿ ಇಡೀ ದಿನ ಅಮರಾವತಿಯಲ್ಲಿ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ರೈತರಿಗೆ ಕಷ್ಟಕೊಟ್ಟು ಸುಖ ಪಡುವ ಎನ್ ಡಿಎ ಸರ್ಕಾರಕ್ಕೆ ಎಲ್ಲೆಡೆ ಧಿಕ್ಕಾರ ಕೂಗುತ್ತಿದ್ದಾರೆ. ಪಂಜಾಬ್ ನ ಖನ್ನಾ ಮತ್ತು ಗೋವಿಂದ್ ಗಢ್ ಪ್ರದೇಶಕ್ಕೆ ಭೇಟಿ ನೀಡಿದ ರಾಹುಲ್ ರೈತರು, ಜನ ಸಾಮಾನ್ಯರ ಜೊತೆ ಕಲೆತು ಬೆರೆತು ಜನಮನ್ನಣೆ ಗಳಿಸಿದ್ದಾರೆ. [ಕೇದಾರನಾಥ ಸನ್ನಿಧಿಯಲ್ಲಿ 'ಚೈತನ್ಯ' ಪಡೆದ ರಾಹುಲ್]

ಆದರೆ, ಎಂದಿನಂತೆ ರಾಹುಲ್ ಗೇಲಿ ಮಾಡುವ ಹಾಸ್ಯ ಧಾಟಿಯ ಟ್ವೀಟ್ ಗಳು ಕಾಂಗ್ರೆಸ್ ಪಕ್ಷವನ್ನು ಕಂಗೆಡಿಸಿವೆ. ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಬಂದಿರುವ ಟ್ವೀಟ್ ಗಳ ಸಂಗ್ರಹ ಇಲ್ಲಿದೆ...

ಪಾದಯಾತ್ರೆ ದೇಶದ ಎಲ್ಲಾ ಕಡೆ ಸಾಗಲಿದೆ

ಪಾದಯಾತ್ರೆ ದೇಶದ ಎಲ್ಲಾ ಕಡೆ ಸಾಗಲಿದೆ

ವಿದರ್ಭದಿಂದ ನಾಗಪುರ ಹೀಗೆ ಸಾಗುವ ರಾಹುಲ್ ಪಾದಯಾತ್ರೆ ದೇಶದ ರೈತರ ಹೊಲಗಳಲ್ಲಿ ಸಾಗಲಿದೆಯಂತೆ. ಇಂದು ದಿನವಿಡಿ #RahulTatkalPolitics #RGPunjabVisit ಹೀಗೆ ಟ್ವಿಟ್ಟರ್ ನಲ್ಲಿ ರಾಹುಲ್ ಚರ್ಚೆ ನಡೆದಿತ್ತು.

ಪಾದಯಾತ್ರೆ ಮಾತ್ರವಲ್ಲ ಮತ್ತೊಂದು

ಪಾದಯಾತ್ರೆ ಮಾತ್ರವಲ್ಲ ಮತ್ತೊಂದು ಯಾತ್ರೆಯನ್ನು ರಾಹುಲ್ ಕೈಗೊಂಡಿದ್ದಾರೆ.

ಕಾಂಗ್ರೆಸ್ ನಿಂದ ಪಾದಯಾತ್ರೆ ಬಗ್ಗೆ ವಿವರ

ಟೀ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ದ ರಾಹುಲ್ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಸ್ತಾಪಿತ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಆರಂಭವಾಗಿದೆ ಎಂದರು

ರಮೇಶ್ ಅವರಿಂದ ಹಾಸ್ಯದ ಟ್ವೀಟ್

ಸಾಕ್ಷಿ ಮಹಾರಾಜ್ ಹೇಳಿಕೆ ಜೊತೆಗೆ ಕಾಂಗ್ರೆಸ್ ಗೆ ಸರಿಯಾಗಿ ತಿವಿದ ರಮೇಶ್ ಟ್ವೀಟ್

ಕಾಗದ ಉಳಿಸಿದ ರಾಹುಲ್ ಗ್ರೇಟ್

ಮಹಿಳಾ ಅಭಿಮಾನಿ ಕೈ ಮೇಲೆ ಹಸ್ತಾಕ್ಷರ ಕೆತ್ತಿದ ರಾಹುಲ್ ಕಾಗದ ಉಳಿಸಿದ್ದಾರೆ.

ರಾಹುಲ್ ಹುಡುಗಿ ಕೈ ಮೇಲೆ ಬರೆದಿದ್ದೇನು?

ರಾಹುಲ್ ಗಾಂಧಿ ಅವರು ಹುಡುಗಿ ಕೈ ಮೇಲೆ ಬರೆದಿದ್ದೇನು? ಎಂಬ ಕುತೂಹಲದ ಪ್ರಶ್ನೆ ಹರಿದಾಡಿದೆ.

ಸಚ್ ಖಾಂಡ್ ಎಕ್ಸ್ ಪ್ರೆಸ್ ಏರಿದ ರಾಹುಲ್

ಸಚ್ ಖಾಂಡ್ ಎಕ್ಸ್ ಪ್ರೆಸ್ ಏರಿದ ರಾಹುಲ್ ಅವರು ಅಂಬಾಲಕ್ಕೆ ತೆರಳಿದರು

ರಾಹುಲ್ ರಿಟರ್ನ್ಸ್ : ಇಂಡಿಯಾ ಟುಡೇ

ರಾಹುಲ್ ರಿಟರ್ನ್ಸ್ ಇಂಡಿಯಾ ಟುಡೇ ಕಾರ್ಟೂನ್ ವಿಡಿಯೋ

English summary
Taking the fight against the Land Acquisition Bill further, Congress vice president Rahul Gandhi on Tuesday boarded a train to Punjab to asses the situation over there. Here are the tw
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X