ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಇಂಟರ್ನೆಟ್ ಕೂಡಾ ಕಾರ್ಪೋರೆಟ್ ಕೈಗಿತ್ತ ಮೋದಿ"

By Mahesh
|
Google Oneindia Kannada News

ನವದೆಹಲಿ, ಏ.22: ರೈತರ ಭೂಮಿಯನ್ನು ಕಿತ್ತುಕೊಂಡು ಕಾರ್ಪೋರೇಟ್ ಗಳ ಕೈಗಿಡಲು ಯತ್ನಿಸುತ್ತಿರುವ ಮೋದಿ ಸರ್ಕಾರ ಈಗ ಅಂತರ್ಜಾಲದ ಸ್ವಾಮ್ಯತೆಯನ್ನು ಉದ್ಯಮಿಗಳ ಕೈಗಿಡುತ್ತಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ರದ್ದು ಪಡಿಸಿ ನೆಟ್ ನ್ಯೂಟ್ರಾಲಿಟಿ ಬಗ್ಗೆ ಚರ್ಚೆಗೆ ರಾಹುಲ್ ಆಗ್ರಹಿಸಿದರು.

ಟೆಲಿಕಾಮ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಹೊರಡಿಸಿರುವ ಸಮಾಲೋಚನೆ ಕಡತವನ್ನು ವಜಾ ಮಾಡಬೇಕು, ನೆಟ್ ನ್ಯೂಟ್ರಾಲಿಟಿ ಬಗ್ಗೆ ತಕ್ಷಣವೇ ಚರ್ಚೆಗೆ ಅವಕಾಶ ನೀಡಬೇಕು ಎಂದು ರಾಹುಲ್ ಪಟ್ಟು ಹಿಡಿದರು.[ನೆಟ್ ನ್ಯೂಟ್ರಾಲಿಟಿ ಎಂದರೇನು? ನಾವೇನು ಮಾಡ್ಬೇಕು?]

ಸರ್ಕಾರ ಹಾಗೂ ಖಾಸಗಿ ಬಳಕೆದಾರರ ನಡುವೆ ತಾರತಮ್ಯ ಸೃಷ್ಟಿಸಿರುವ ಟ್ರಾಯ್‌ನ ಈ ಪ್ರಸ್ತಾವನೆಯನ್ನು ರದ್ದುಪಡಿಸಿ ಬಳಕೆದಾರರೆಲ್ಲರಿಗೂ ಏಕ ಪ್ರಕಾರದ ಶುಲ್ಕ ಪಾವತಿ ಮತ್ತು ತ್ವರಿತಗತಿಯ ಸೇವೆ ಒದಗಿಸಬೇಕು. ಆದರೆ, ಸರ್ಕಾರದ ಬಳಕೆದಾರರು ಹಾಗೂ ವೈಯಕ್ತಿಕ ಬಳಕೆದಾರರ ನಡುವೆ ಅಂತರ ಹೆಚ್ಚಾಗುವಂತೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಮಾಡುತ್ತಿದೆ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. [ಇಂಟರ್ನೆಟ್ ನಲ್ಲಿ ಸ್ವಾತಂತ್ರ್ಯಕ್ಕೆ ಸುಪ್ರೀಂಕೋರ್ಟ್ ಅಸ್ತು]

ಕಳೆದ ವಾರ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಪ್ರಸ್ತಾಪಿಸಿದ ನೆಟ್ ನ್ಯೂಟ್ರಾಲಿಟಿ ಬಗ್ಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ಲಕ್ಷಾಂತರ ಇಂಟರ್‌ನೆಟ್ ಬಳಕೆದಾರರು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಪ್ರಸ್ತಾವನೆಯ ವಿರುದ್ಧ ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಿಷ್ಟು

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಿಷ್ಟು

* ಪ್ರತಿಯೊಬ್ಬರಿಗೂ ನೆಟ್ ಬಳಕಗೆ ಸ್ವಾತಂತ್ರ್ಯವಿರಬೇಕು.ಇಂಟರ್‌ನೆಟ್ ಬಳಕೆಗೆ ಮುಕ್ತ ಅವಕಾಶ ನೀಡಬೇಕು
* ಕೆಲವು ಉದ್ಯಮಿಗಳ ಒತ್ತಡಕ್ಕೆ ಮಣಿದು ನೆಟ್ ನ್ಯೂಟ್ರಾಲಿಟಿಗೆ ಸಂಬಂಧಿಸಿದಂತೆ ಸರ್ಕಾರ ತಟಸ್ಥ ಧೋರಣೆ ತಳೆದಿದೆ.
* ನೆಟ್ ನ್ಯೂಟ್ರಾಲಿಟಿ ಕುರಿತಂತೆ ಕಾನೂನಿನಲ್ಲಿ ಬದಲಾವಣೆ ಮಾಡಿ, ಹೊಸ ಕಾಯ್ದೆ ತನ್ನಿ
* ಟ್ರಾಯ್ ಪ್ರಸ್ತಾವನೆಯಿಂದ ಇಂಟರ್ನೆಟ್ ಬಳಕೆಗೆ ಕಡಿವಾಣ ಬೀಳುತ್ತದೆ.

 ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್

ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್

ನೆಟ್ ನ್ಯೂಟ್ರಾಲಿಟಿ ಬಗ್ಗೆ ಸಮಿತಿಯ ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರದ ಮೇಲೆ ಯಾವುದೇ ಕಾಪೋರೇಟ್ ಸಂಸ್ಥೆಗಳ ಒತ್ತಡ ಇಲ್ಲ.ಪ್ರಧಾನಿ ನರೇಂದ್ರ ಮೋದಿ ಅವರು ಇಂಟರ್ನೆಟ್ ಬಳಸುವ ಯುವ ಜನಾಂಗದ ಪರ ಇದ್ದು, ನೆಟ್ ನ್ಯೂಟ್ರಾಲಿಟಿ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ.

rn

ರವಿಶಂಕರ್ ಪ್ರಸಾದ್ ಪ್ರತಿಕ್ರಿಯೆ ವಿಡಿಯೋ

ಎಲ್ಲರಿಗೂ ಇಂಟರ್ನೆಟ್ ಒದಗಿಸುವುದು ನಮ್ಮ ಸರ್ಕಾರದ ಉದ್ದೇಶ, ನಾವು ಇ ಆಡಳಿತ ಅಲ್ಲದೆ ಮೊಬೈಲ್ ಆಡಳಿತಕ್ಕೂ ಮುಂದಾಗಿದೆ. ಡಿಜಿಟಲ್ ಇಂಡಿಯಾ ಮೋದಿ ಕನಸು.

ಸೋಷಿಯಲ್ ಮೀಡಿಯಾ ಅಂದರೆ ಗೊತ್ತಾ ರಾಹುಲ್ ಜೀ

ಸೋಷಿಯಲ್ ಮೀಡಿಯಾಕ್ಕೆ ಕಾಲಿಡದ ರಾಹುಲ್ ಗಾಂಧಿ ನೆಟ್ ನ್ಯೂಟ್ರಾಲಿಟಿ ಬಗ್ಗೆ ಭಾಷಣ ಬಿಗಿಯುತ್ತಾರಲ್ಲ!

ಅರ್ಥ್ ಡೇ ದಿನ ರಾಹುಲ್ ಗಾಂಧಿ ವಿಕ್ರಮ

ಅರ್ಥ್ ಡೇ ದಿನ ರಾಹುಲ್ ಗಾಂಧಿ ವಿಕ್ರಮ.. ನೆಟ್ ಗಾಗಿ ರಾಹುಲ್ ಹೋರಾಟ

English summary
Congress vice president Rahul Gandhi on Wednesday pushed for net neutrality in India and said 'the government must stop consultations with TRAI.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X