ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಟು ಬೂಟಿನ ಮೋದಿ ಸರ್ಕಾರಕ್ಕೆ ಧಿಕ್ಕಾರ: ರಾಹುಲ್

By Mahesh
|
Google Oneindia Kannada News

ನವದೆಹಲಿ, ಏ.20: ಭಾನುವಾರ ರೈತರ ಸಮಾವೇಶದಲ್ಲಿ ಗುಡುಗಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಸುರ್ಮಾರು ಎರಡು ತಿಂಗಳುಗಳ ನಂತರ ಸಂಸತ್ ಪ್ರವೇಶಿಸಿದ ರಾಹುಲ್ ಅವರು ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಬಜೆಟ್‌ ಅಧಿವೇಶನದಲ್ಲಿ ಭೂಸ್ವಾಧೀನ ತಿದ್ದುಪಡಿಗೆ ಮೋದಿ ಅವರ ಎನ್ ಡಿಎ ಸರ್ಕಾರ ಲೋಕಸಭೆಯಲ್ಲಿ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಸೂಕ್ತ ಬೆಂಬಲ ಸಿಗದ ಕಾರಣ ಏ. 23 ರಿಂದ ಆರಂಭವಾಗುವ ರಾಜ್ಯಸಭೆಯಲ್ಲಿ ಅದಕ್ಕೆ ಅಂಗೀಕಾರ ಪಡೆಯುವ ನಿರೀಕ್ಷೆ ಹೊತ್ತಿದೆ. ["ಮೋದಿಗೆ ಸಿಕ್ತು ಮೌಕಾ ಮಾಡಿದ್ದೆಲ್ಲ ದೋಖಾ"]

ಅದರೆ, ಇದಕ್ಕೂ ಮೊದಲು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಭಾರಿ ವಿರೋಧ ವ್ಯಕ್ತಪಡಿಸಿದೆ. ಇದಕ್ಕೆ ಜನತಾ ಪರಿವಾರದ 6 ಪಕ್ಷಗಳು ಬೆಂಬಲ ಸೂಚಿಸಿವೆ.

16ನೇ ಲೋಕಸಭೆ ಕಲಾಪದಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಮೊಟ್ಟ ಮೊದಲ ಭಾಷಣದಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು. ಸೂಟು- ಬೂಟುಧಾರಿಗಳ ಶ್ರೀಮಂತರ ಪರ ಸರ್ಕಾರದಿಂದ ರೈತರ ಏಳಿಗೆ ಎಂದಿಗೂ ಸಾಧ್ಯವಿಲ್ಲ ಎಂದರು.

ಸಂಸತ್ತಿನಲ್ಲಿ ರಾಹುಲ್ ಮಾತಾಡಿದ್ದೇ ಕಡಿಮೆ

ಸಂಸತ್ತಿನಲ್ಲಿ ರಾಹುಲ್ ಮಾತಾಡಿದ್ದೇ ಕಡಿಮೆ

ಸೋಮವಾರ(ಏ.20) ಭೂಸ್ವಾಧೀನ ತಿದ್ದುಪಡಿ ಮಸೂದೆಗೆ ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತದ ಚರ್ಚೆ ವೇಳೆ ರಾಹುಲ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 11ವರ್ಷಗಳ ಅವಧಿಯಲ್ಲಿ ರಾಹುಲ್ ಗಾಂಧಿಯ 3ನೇ ಸುದೀರ್ಘ ಭಾಷಣ ಇದಾಗಿದೆ.

ಕಾರ್ಪೋರೇಟ್ ವಲಯಕ್ಕಾಗಿ ಸರ್ಕಾರ ದುಡಿಯುತ್ತಿದೆ

ಕಾರ್ಪೋರೇಟ್ ವಲಯಕ್ಕಾಗಿ ಸರ್ಕಾರ ದುಡಿಯುತ್ತಿದೆ

ಕಾರ್ಪೋರೇಟ್ ವಲಯಕ್ಕಾಗಿ ಸರ್ಕಾರ ದುಡಿಯುತ್ತಿದೆ. ರೈತರ ಭೂಮಿ ಉದ್ಯಮಿಗಳು, ಕಾರ್ಪೊರೇಟ್ ಗಳ ಪಾಲಾಗುತ್ತಿದೆ. ರೈತರಿಗೆ ಅನ್ಯಾಯವಾಗುತ್ತಿದೆ. ರೈತರ ಕಷ್ಟವನ್ನು ಸರ್ಕಾರದ ಪ್ರತಿನಿಧಿಗಳು ಕಣ್ಣಾರೆ ಕಾಣಬೇಕು. ರೈತರು ಯಾರ ಮೇಲೂ ನಂಬಿಕೆ ಇಡಬೇಡಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದು ನಿಮಗೆ ನೆನಪಿರಬಹುದು. ರೈತರೇ ಈ ಕೇಂದ್ರ ಸರ್ಕಾರದ ಮೇಲೂ ನಂಬಿಕೆ ಇಡಬೇಡಿ ಎಂದು ರಾಹುಲ್ ಕರೆ ನೀಡಿದರು.

ಬೆಳೆ ಹಾನಿ ಕುರಿತ ವರದಿ ಎಲ್ಲಿದೆ?

ಬೆಳೆ ಹಾನಿ ಕುರಿತ ವರದಿ ಎಲ್ಲಿದೆ?

ಸರ್ಕಾರ ಏಕೆ ಬೆಳೆ ಹಾನಿ ಕುರಿತ ವರದಿಯನ್ನು ತಿರಸ್ಕರಿಸುತ್ತಿದೆ ಎಂದು ರಾಹುಲ್ ಪ್ರಶ್ನಿಸಿದರು. ನಿಮ್ಮ ಪ್ರಧಾನಿ ಎಂದು ಎನ್ ಡಿಎ ಸದಸ್ಯರತ್ತ ಬೊಟ್ಟು ಮಾಡಿ ತೋರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತವಾದಾಗ. ಅಫ್ ಕೋರ್ಸ್ ಅವರು ದೇಶದ ಪ್ರಧಾನಿ ಹಾಗೆ ನಿಮ್ಮ ಪ್ರಧಾನಿ ಕೂಡಾ ಎಂದು ಹಾಸ್ಯದ ನಗೆ ಉಕ್ಕಿಸಿದರು.

ರೈತರು ಮತ್ತು ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ

ರೈತರಿಂದ ದೇಶದಲ್ಲಿ ಹಸಿರು ಕ್ರಾಂತಿ ನಡೆದಿದೆ. ಆದರೆ ಕೇಂದ್ರ ಸರ್ಕಾರ ರೈತರು ಮತ್ತು ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ ಎಂದು ರಾಹುಲ್ ಪ್ರಶ್ನಿಸಿದರು.

ಮತ್ತೆ ಟ್ರೆಂಡಿಂಗ್ ನಲ್ಲಿ ರಾಹುಲ್ ಗಾಂಧಿ

ಮತ್ತೆ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿ ರಾಹುಲ್ ಗಾಂಧಿ #rahulroar ಎಂದು ಹ್ಯಾಶ್ ಟ್ಯಾಗ್ ಜನಪ್ರಿಯ ಪಡೆದುಕೊಂಡಿದೆ.

ತಮ್ಮ ಭಾಷಣದ ಬಗ್ಗೆ ರಾಹುಲ್ ಹೇಳಿದ್ದೇನು?

ಭಾಷಣ ಚೆನ್ನಾಗಿತ್ತು ಆದರೆ, ನನ್ನ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ

English summary
Rahul Gandhi today(Apr.20) led the opposition attack in the Lok Sabha on the Narendra Modi government over the problems being faced by farmers, saying it had "failed" them and specifically targeted Prime Minister Narendra Modi over it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X