ಪದ್ಮಾಸನ ಭಂಗಿಯಲ್ಲಿ ಮೋದಿ: ರಾಹುಲ್ ಗಾಂಧಿ ಈಗ ಏನ್ ಹೇಳ್ತೀರಾ?

ಪ್ರಧಾನಿ ನರೇಂದ್ರ ಮೋದಿಗೆ ಪದ್ಮಾಸನ ಹಾಕಲು ಬರುವುದಿಲ್ಲ ಎನ್ನುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಭಾರೀ ಲೇವಡಿ

ವಿದೇಶದಲ್ಲಿ ಹೊಸವರ್ಷಾಚರಣೆ ನಡೆಸಿ ಭಾರತಕ್ಕೆ ಹಿಂದಿರುಗಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ದ ಟೀಕಾಪ್ರಹಾರ ನಡೆಸುವ ಕೆಲಸವನ್ನು ಮತ್ತೆ ಶುರು ಹಚ್ಚಿಕೊಂಡಿದ್ದಾರೆ.

ಬುಧವಾರ (ಜ 11) ಕಾಂಗ್ರೆಸ್ಸಿನ ಹಿರಿಯ ಮುಖಂಡರು, ಮುಖ್ಯಮಂತ್ರಿಗಳಾದಿಯಾಗಿ ಭಾಗವಹಿಸಿದ್ದ 'ಜನ್ ವೇದನಾ' ಬೃಹತ್ ಸಭೆಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮತ್ತು ಅವರ ಯೋಗಾಸನದ ನಂಟಿನ ಬಗ್ಗೆ ಲೇವಡಿ ಮಾಡಿದ್ದರು. (ಪದ್ಮಾಸನದಲ್ಲಿ ಪ್ರಧಾನಿ ಮೋದಿ)

ನಾನು ಮೋದಿ ಅವರನ್ನು ತುಂಬಾ ಫಾಲೋ ಮಾಡ್ತೀನಿ, ನೀವು ನೋಡಿದ್ದೀರೋ ಇಲ್ವೋ ಗೊತ್ತಿಲ್ಲಾ. ಮೋದಿಜೀ ಯೋಗಾಸನವನ್ನು ಚೆನ್ನಾಗಿ ಮಾಡ್ತಾರೆ, ಆದರೆ ಅವರಿಗೆ ಪದ್ಮಾಸನ ಹಾಕಲು ಬರುವುದಿಲ್ಲ ಎಂದು ಸಭೆಯಲ್ಲಿ ರಾಹುಲ್ ಗಾಂಧಿ ಹೇಳಿದ್ದರು.

ಯೋಗಾ ಬಹಳಷ್ಟು ಜನಪ್ರಿಯವಾಗಿದೆ, ಸುಂದರವಾಗಿದೆ. ನಾನು ಕೂಡಾ ಯೋಗ ಮಾಡಿದ್ದೆ, ಯಾರಿಗೆ ಪದ್ಮಾಸನ ಮಾಡಲು ಬರುವುದಿಲ್ಲವೋ ಅವರಿಗೆ ಯೋಗ ಮಾಡಲು ಬರುವುದಿಲ್ಲ ಎಂದು ನನ್ನ ಯೋಗ ಗುರುಗಳು ಹೇಳಿದ್ದರು ಎಂದು ಮೋದಿ ವಿರುದ್ದ ಪರೋಕ್ಷವಾಗಿ ರಾಹುಲ್ ಟೀಕಿಸಿದ್ದರು.

ರಾಹುಲ್ ಭಾಷಣ ಪ್ರಸಾರವಾಗುತ್ತಿದ್ದಂತೇ, ಪ್ರಧಾನಿ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಯೋಗ ಮತ್ತು ಪದ್ಮಾಸನ ಮಾಡಿದ್ದ ಭಂಗಿಯ ಫೋಟೋಗಳು ಸಾಮಾಜಿಕ ತಾಣದಲ್ಲಿ ಹರಿದಾಡಲಾರಂಭಿಸಿತು.

ಜೊತೆಗೆ, ರಾಹುಲ್ ಹೇಳಿಕೆಯು ಟ್ವಿಟ್ಟರ್ ನಲ್ಲಿ ಮತ್ತೆ ಮತ್ತೆ ತಮಾಷೆಗೊಳಗಾಯಿತು. ಕೆಲವೊಂದು ಸ್ಯಾಂಪಲ್ ಮುಂದೆ ಓದಿ..

 • ಹೀಗೊಂದು ಟ್ವೀಟ್

  ಹೀಗೊಂದು ಟ್ವೀಟ್

  ಸ್ಟಾರ್ ಕ್ಯಾಂಪೇನರ್

  ರಾಹುಲ್ ಗಾಂಧಿ ನೋಡಲು ಆಕರ್ಷಕವಾಗಿದ್ದಾರೆ, ನಿರರ್ಗಳವಾಗಿ ಮಾತನಾಡ ಬಲ್ಲರು. ಬಿಜೆಪಿ ಯಾಕೆ ರಾಹುಲ್ ಗಾಂಧಿಯವರನ್ನು ಐದು ರಾಜ್ಯದ ಅಸೆಂಬ್ಲಿ ಚುನಾವಣೆಯ ಈ ಹೊಸ್ತಿಲಲ್ಲಿ ತನ್ನ ಸ್ಟಾರ್ ಕ್ಯಾಂಪೇನರ್ ಆಗಿ ನಿಯೋಜಿಸಬಾರದು ಎನ್ನುವ ವ್ಯಂಗ್ಯ ಟ್ವೀಟ್.

 • ರಾಹುಲ್ ಗಾಂಧಿ

  ಎಪ್ಪತ್ತು ವರ್ಷ

  ಕೊನೆಗೂ ರಾಹುಲ್ ಗಾಂಧಿ ತಮ್ಮ ಸರಕಾರದ ಎಪ್ಪತ್ತು ವರ್ಷದ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ.

 • ಪದ್ಮಾಸನ

  ವಿಪಾಸನ

  ಮೋದಿಯವರ ಈ ಭಂಗಿಗೆ ಯೋಗದಲ್ಲಿ ಪದ್ಮಾಸನ ಎನ್ನುತ್ತಾರೆ. ನಿಮ್ಮ ವಿಪಾಸನದ ಬಗ್ಗೆ ಸ್ವಲ್ಪ ವಿವರಿಸಿ.

 • ಕಾಂಗ್ರೆಸ್ ಉಪಾಧ್ಯಕ್ಷ

  ರಜಾದಿನ

  ಲಂಡನ್ ನಲ್ಲಿ ರಾಹುಲ್ ರಜೆಯಲ್ಲಿದ್ದಾಗ ಪದ್ಮಾಸನ ಮಾಡಲಾಗಲಿಲ್ಲ ಎಂದು ಟೀಕೆಗೊಳಗಾಗಿರಬೇಕೋ ಏನು.

 • ಯೋಗಾಸನ

  ಯಾರಾದರೂ ರಾಹುಲ್ ಗೆ ತೋರಿಸಿ

  ಯಾರಾದರೂ ಪ್ರಧಾನಿ ಪದ್ಮಾಸನ ಮಾಡುತ್ತಿರುವುದುನ್ನು ರಾಹುಲ್ ಗೆ ತೋರಿಸುತ್ತೀರಾ?

 • ಟ್ವಿಟ್ಟರ್ ನಲ್ಲಿ ವ್ಯಂಗ್ಯ

  ವಿದೇಶ ಪ್ರವಾಸ

  ವಿದೇಶ ಪ್ರವಾಸ ಮುಗಿಸಿ ಬಂದಿರುವ ರಾಹುಲ್ ಗಾಂಧಿ ಮುಂದೇನು ಮಾಡಬೇಕು?

ತಾಜಾ ಸುದ್ದಿಗಳಿಗೆ Oneindia News App ಡೌನ್‌ಲೋಡ್ ಮಾಡಿ Android IOS

Read In English

AICC Vice President Rahul Gandhi’s Padmasana jibe at Prime Minister Narendra Modi makes him a butt of jokes again on Twitter.
Please Wait while comments are loading...

ಬ್ರೇಕಿಂಗ್ ನ್ಯೂಸ್