ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಚುನಾವಣೆ: ಎನ್ಜಿಒಗಳ ಮೇಲೆ ಸರಕಾರದ ಹದ್ದಿನ ಕಣ್ಣು

By ವಿಕಾಸ್ ನಂಜಪ್ಪ
|
Google Oneindia Kannada News

ಚಂಡೀಗಢ, ಜನವರಿ 18: ಪಂಜಾಬ್ ರಾಜ್ಯದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ಹಲವು ಎನ್.ಜಿ.ಒಗಳ ಮೇಲೆ ಹಣಕಾಸು ಇಲಾಖೆಯ ಗುಪ್ತಚರ ಘಟಕ ಮತ್ತು ಆದಾಯ ತೆರಿಗೆ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಮುಖ್ಯವಾಗಿ ಎರಡೂ ಇಲಾಖೆಗಳು ಎನ್.ಜಿ.ಒಗಳಿಗೆ ಹರಿದು ಬರುವ ವಿದೇಶಿ ಮೂಲದ ಹಣದ ಬಗ್ಗೆ ಕಣ್ಣಿಟ್ಟಿದೆ. ಮೂಲಗಳ ಪ್ರಕಾರ ಕಳೆದ ಬಾರಿ ಚುನಾವಣೆ ಸಮೀಪಿಸುತ್ತಿದ್ದಂತೆ ಎನ್.ಜಿ.ಒಗಳಿಗೆ ಹರಿದು ಬರುವ ಹಣವೂ ಹೆಚ್ಚಾಗಿತ್ತು. ಅನಿವಾಸಿ ಬಾರತೀಯರು ಚುನಾವಣೆ ಸಂದರ್ಭದಲ್ಲಿ ಭಾರಿ ಹಣವನ್ನು ಎನ್.ಜಿ.ಒಗಳಿಗೆ ವರ್ಗಾವಣೆ ಮಾಡುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

Punjab elections: NGOs under scanner for foreign funding

ಹೆಚ್ಚಾಗಿ ಅಮೆರಿಕಾ, ಕೆನಡಾ, ಬ್ರಿಟನ್ ಮತ್ತು ಯುರೋಪಿನಿಂದ ಧನ ಸಹಾಯ ಎನ್.ಜಿ.ಒಗಳಿಗೆ ಹರಿದು ಬರುತ್ತದೆ. ಕೆಲವು ರಾಜಕಾರಣಿಗಳು ವಿದೇಶದಲ್ಲಿ ತಮ್ಮ ಕಾಳಧನವನ್ನು ಸಂಗ್ರಹ ಮಾಡಿ, ಚುನಾವಣೆ ಬಂದಾಗ ತಮ್ಮ ಕುಟುಂಬಸ್ಥರು, ಗೆಳೆಯರ ಮೂಲಕ ಎನ್.ಜಿ.ಒಗಳಿಗೆ ತರಿಸಿಕೊಳ್ಳುತ್ತಾರೆ ಎಂಬ ಅನುಮಾನಗಳಿವೆ.

ಅದರಲ್ಲೂ ಅನಾಣ್ಯೀಕರಣದ ನಂತರ ದೇಶದಲ್ಲಿ ಹಣದ ಕೊರತೆ ಉಂಟಾಗಿದೆ. ಇದು ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ರಾಜಕಾರಣಿಗಳಿಗೆ ತಲೆನೋವು ತಂದಿದೆ. ಹೀಗಾಗಿ ಸರಕಾರೇತರ ಸಂಸ್ಥೆಗಳ ಮೂಲಕ ತಮಗೆ ಬೇಕಾದ ಹಣ ವರ್ಗಾವಣೆ ಮಾಡಿಕೊಳ್ಳಲು ಈ ರಾಜಕಾರಣಿಗಳು ಯೋಚಿಸಿದ್ದಾರೆ. ಇದೇ ವೇಳೆಗೆ ಎನ್.ಜಿ.ಒಗಳ ಮೇಲೆ ನಿರಂತರ ಕಣ್ಗಾವಲು ಇಡಲಾಗಿದೆ. (ಒನ್ ಇಂಡಿಯಾ ಸುದ್ದಿ)

English summary
Ahead of Punjab Assembly elections 2017, NGO’s under scanner of Financial Intelligence Unit and the Income Tax authorities alleged for foreign funding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X