ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಡಿಟಿವಿ ಮತದಾನೋತ್ತರ ಸಮೀಕ್ಷೆ: ಪಂಜಾಬಿನಲ್ಲಿ ಎಎಪಿಗೆ ಅಧಿಕಾರ

ದೆಹಲಿ ನಂತರ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಪಂಜಾಬ್ ರಾಜ್ಯದಲ್ಲಿ ತನ್ನ ರಾಜ್ಯಭಾರ ನಡೆಸಲಿದೆ. ಆಮ್ ಆದ್ಮಿ ಪಕ್ಷ ಅಧಿಕಾರ ಸ್ಥಾಪಿಸುವ ಸಾಧ್ಯತೆ ಹೆಚ್ಚಿದೆ ಎಂದು ಎನ್ ಡಿಟಿವಿ ಮತದಾನೋತ್ತರ ಸಮೀಕ್ಷೆ ಹೇಳಿದೆ

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 06: ದೆಹಲಿ ನಂತರ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಪಂಜಾಬ್ ರಾಜ್ಯದಲ್ಲಿ ತನ್ನ ರಾಜ್ಯಭಾರ ನಡೆಸಲಿದೆ. ಆಮ್ ಆದ್ಮಿ ಪಕ್ಷ ಅಧಿಕಾರ ಸ್ಥಾಪಿಸುವ ಸಾಧ್ಯತೆ ಹೆಚ್ಚಿದೆ ಎಂದು ಮತದಾನೋತ್ತರ ಸಮೀಕ್ಷೆ ನಡೆಸಿ ಎನ್ ಡಿಟಿವಿಯ ಪ್ರಣಯ್ ರಾಯ್ ಅವರು ವಿಶ್ಲೇಷಿಸಿದ್ದಾರೆ.

ಹಫಿಂಗ್ಟನ್ ಪೋಸ್ಟ್ -ಸಿ ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಕೂಡಾ ಇದೇ ರೀತಿ ಫಲಿತಾಂಶ ನೀಡಿತ್ತು. ಹಫಿಂಗ್ಟನ್ ಹಾಗೂ ಸಿವೋಟರ್ಸ್ ಚುನಾವಣಾ ಪೂರ್ವ ಸಮೀಕ್ಷೆಯಂತೆ ಎಎಪಿ 117 ಸ್ಥಾನಗಳ ಪೈಕಿ 63 ಸ್ಥಾನಗಳಿಸಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಶನಿವಾರ (ಫೆಬ್ರವರಿ 4) ದಂದು ಶೇ 73ರಷ್ಟು ಮತದಾನ ದಾಖಲಾಗಿದ್ದು, ಫಲಿತಾಂಶ ಮಾರ್ಚ್ 11ರಂದು ಹೊರಬೀಳಲಿದೆ.

Arvind Kejriwal

ಎನ್ ಡಿಟಿವಿ ಮತದಾನೋತ್ತರ ಸಮೀಕ್ಷೆ ವರದಿ:
* ಎಎಪಿಗೆ ಶೇ 55-60 ರಷ್ಟು ಪ್ರತಿಶತ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ.
* ಕಾಂಗ್ರೆಸ್ಸಿಗೆ ಶೇ 20-35 ರಷ್ಟು ಅವಕಾಶವಿದೆ.
* ಅಕಾಲಿ ದಳಕ್ಕೆ ಶೇ 5 ರಿಂದ 10ರಷ್ಟು ಅವಕಾಶವಿದೆ.
ಅಕಾಲಿದಳದಿಂದ ಸಿಖ್ ಮತಗಳನ್ನು ಶೇ 27ರಷ್ಟು ಕಬಳಿಸಿದ್ದು ಅರವಿಂದ್ ಕೇಜ್ರಿವಾಲ್ ಪಕ್ಷಕ್ಕೆ ಲಾಭ ತರಲಿದೆ ಎಂದು ಪ್ರಣಯ್ ರಾಯ್ ವಿಶ್ಲೇಷಿಸಿದ್ದಾರೆ.

English summary
A day after the Punjab assembly election were conducted on Saturday, Delhi Chief Minister and Aam Admi Party leader, Arvind Kejriwal put out a sentimental message stating that his party would win. While several opinion polls had predicted a hung verdict, Dr Prannoy Roy of NDTV has predicted that the Aam Admi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X