ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಚುನಾವಣೆಯಲ್ಲಿ ಕೋಟ್ಯಾಧಿಪತಿ ಅಭ್ಯರ್ಥಿಗಳದ್ದೇ ಬಿಗ್ ಫೈಟ್

ಚುನಾವಣಾ ಆಯೋಗದ ಮುಂದೆ ಅಭ್ಯರ್ಥಿಗಳು ತಮ್ಮ ಆಸ್ತಿ ಮತ್ತು ತಮ್ಮ ಮೇಲಿರುವ ಪ್ರಕರಣಗಳ ವಿವರಗಳನ್ನು ನೀಡಿದ್ದಾರೆ. ಇದರ ಪ್ರಕಾರ ಪ್ರಮುಖ ಪಕ್ಷಗಳು ಹೆಚ್ಚಿನ ಻ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ಚಂಡೀಗಢ, ಜನವರಿ 30: ಪಂಜಾಬ್ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಹೆಚ್ಚಿನವರು ಕೋಟ್ಯಾಧಿಪತಿಗಳಾಗಿದ್ದಾರೆ. ಚುನಾವಣಾ ಆಐಒಗದ ಮುಂದೆ ತಮ್ಮ ಆಸ್ತಿ ಘೋಷಿಸಿಕೊಂಡಿರುವ ಻ಅಭ್ಯರ್ಥಿಗಳು ತಾವು ಕೋಟ್ಯಾಧಿಪತಿಗಳು ಎಂಬುದನ್ನು ಎದೆಯುಬ್ಬಿಸಿಕೊಂಡು ಹೇಳಿದ್ದಾರೆ. ಹೀಗಾಗಿ ಪಂಜಾಬ್ ಅಖಾಡ ಕೇವಲ ಕೋಟ್ಯಾಧಿಪತಿಗಳ ನಡುವಿನ ಸ್ಪರ್ಧಾ ಕಣವಾಗಿ ಮಾರ್ಪಟ್ಟಿದೆ.

ಅಕಾಲಿದಳದ 94 ಅ಻ಭ್ಯರ್ಥಿಗಳಲ್ಲಿ 87 ಜನ ಕೋಟ್ಯಾಧಿಪತಿಗಳಿದ್ದಾರೆ. ಇನ್ನು ಕಾಂಗ್ರೆಸಿನಲ್ಲಿ 117ರಲ್ಲಿ 103 ಜನ ಕೋಟ್ಯಾಧಿಪತಿಗಳಾಗಿದ್ದಾರೆ. ಆಮ್ ಆದ್ಮಿ ಪಕ್ಷದ 112 ಻ಭ್ಯರ್ಥಿಗಳಲ್ಲೂ 71 ಜನ ಕೋಟ್ಯಾಧಿಪತಿಗಳಿದ್ದಾರೆ. ಒಟ್ಟಾರೆ ಪಕ್ಷೇತರರು ಸೇರಿ ನಾಮಪತ್ರ ಸಲ್ಲಿಸಿದ 1,145 ಻ಅಭ್ಯರ್ಥಿಗಳಲ್ಲಿ 428 ಜನ ಕೋಟಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ.[ಪಂಜಾಬ್: ಕಾಂಗ್ರೆಸಿನಲ್ಲಿ ಸಿದ್ದು-ಅಮರಿಂದರ್ ಜಟಾಪಟಿ]

Punjab elections: It is a game of crorepatis here

ವಿಚಿತ್ರ ಎಂದರೆ ಅಭ್ಯರ್ಥಿಗಳಲ್ಲಿ ಅತೀ ಶ್ರೀಮಂತ ಕಾಂಗ್ರೆಸಿನಿಂದ ಸ್ಪರ್ಧಿಸುತ್ತಿರುವ ನವಜೋತ್ ಸಿಂಗ್ ಸಿದ್ಧು. ತಮಗೆ ವಾರ್ಷಿಕ 9.9 ಕೋಟಿ ರೂಪಾಯಿ ವರಮಾನ ಇರುವುದಾಗಿ ಚುನಾವಣಾ ಆಯೋಗದ ಮುಂದೆ ಅವರು ಹೇಳಿಕೊಂಡಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಮದ್ಯದ ದೊರೆ ಶಿವ್ ಲಾಲ್ ದೊಡಾ ಇದ್ದಾರೆ. ಅಬೊಹರಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿತ್ತಿರುವ ಇವರ ಆಸ್ತಿ 5 ಕೋಟಿ.

ವಿಶೇಷ ಎಂದರೆ ರಾಜ್ಯದಲ್ಲಿ ಪ್ರಮುಖ ಸಾರಿಗೆ ಸಂಸ್ಥೆಗಳನ್ನು ಹೊಂದಿರುವ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮಗ ಸುಖ್ ಬೀರ್ ಸಿಂಗ್ ಬಾದಲ್ ಆಸ್ತಿ ಕೇವಲ 2.28 ಕೋಟಿ ರೂಪಾಯಿ.[ಪಂಜಾಬ್: ಒಂದೇ ರಾಜ್ಯಕ್ಕೆ ಎಎಪಿಯಿಂದ ನಾಲ್ಕು ಪ್ರಣಾಳಿಕೆ!]

ಇನ್ನು ಬಿಜೆಪಿ ಅಕಾಲಿದಳ ಮೈತ್ರಿಕೂಟದಿಂದ ಸ್ಪರ್ಧಿಸಿರುವ 12 ಻ಅ಻ಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆ ಹೊಂದಿದ್ದಾರೆ. ಕಾಂಗ್ರೆಸ್ ಮತ್ತು ಎಎಪಿಯಲ್ಲಿ ತಲಾ 14 ಜನ ಕ್ರಿಮಿನಲ್ ಹಿನ್ನಲೆಯ ಅ಻ಭ್ಯರ್ಥಿಗಳಿದ್ದಾರೆ. ಒಟ್ಟಾರೆ 100 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ 71 ಜನರ ಮೆಲೆ ಗುರುತರ ಪ್ರಕರಣಗಳಿವೆ. 11 ಜನರ ಮೇಲೆಯಂತೂ ಕೊಲೆ ಹಾಗೂ ಕೊಲೆಯತ್ನದ ಪ್ರಕರಣಗಳಿವೆ.

English summary
It is a game of crorepatis in Punjab. Going by the declarations made by the candidates for the Punjab assembly elections 2017, it is clear that a majority of them are crorepatis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X