ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭರವಸೆ ನಂತರ ಬ್ಯಾಂಕ್ ನೌಕರರ ಮುಷ್ಕರ ವಾಪಸ್

|
Google Oneindia Kannada News

ಬೆಂಗಳೂರು, ಫೆ. 24: ಬ್ಯಾಂಕ್ ನೌಕರರಿಗೆ ಶೇ. 15 ರಷ್ಟು ವೇತನ ಪರಿಷ್ಕರಣೆ ಮತ್ತು ತಿಂಗಳ 2 ಮತ್ತು 4ನೇ ಶನಿವಾರ ರಜೆ ನೀಡುವ ಬೇಡಿಕೆಗೆ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ (ಐಬಿಎ) ಒಪ್ಪಿಗೆ ನೀಡಿದೆ. ಹಾಗಾಗಿ ಫೆಬ್ರವರಿ 25 ರಿಂದ ನಾಲ್ಕು ದಿನಗಳ ಕಾಲ ನಡೆಸಲು ಉದ್ದೇಶಿಸಿದ್ದ ಬ್ಯಾಂಕ್ ಮುಷ್ಕರವನ್ನು ನೌಕರರು ಕೈ ಬಿಟ್ಟಿದ್ದಾರೆ.

ಸೋಮವಾರ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಮತ್ತು ನೌಕರರ ಒಕ್ಕೂಟದ ನಡುವೆ ನಡೆದ ಮಾತುಕತೆ ಫಲಪ್ರದವಾಗಿದೆ. 2 ಮತ್ತು 4 ನೇ ಶನಿವಾರವೂ ಬ್ಯಾಂಕ್ ನೌಕರರಿಗೆ ರಜೆ ದೊರೆಯಲಿದೆ. ಆದರೆ ಉಳಿದ ಶನಿವಾರಗಳಂದು ಇಡಿ ದಿನ ಕೆಲಸ ಮಾಡಬೇಕಾಗುತ್ತದೆ. 1 ಮತ್ತು 3 ನೇ ಶನಿವಾರ ಬ್ಯಾಂಕ್ ಅರ್ಧ ದಿನದ ಬದಲಾಗಿ ಪೂರ್ತಿ ಕೆಲಸ ಮಾಡಲಿದೆ.[ಫೆ.25ರಿಂದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಭೀತಿ]

bank

ಶೇ.17.5ರಷ್ಟು ವೇತನ ಏರಿಸಲು ಬೇಡಿಕೆ ಇಡಲಾಗಿತ್ತು. ಆದರೆ ಬ್ಯಾಂಕ್‌ಗಳ ಒಕ್ಕೂಟ ಶೇ.15ರಷ್ಟು ವೇತನ ಏರಿಸುವ ಭರವಸೆ ನೀಡಿದೆ. ಈ ವೇತನ ಏರಿಕೆ 2012ರ ನವೆಂಬರ್‌ನಿಂದಲೇ ಪೂರ್ವಾನ್ವಯವಾಗಲಿದೆ ಎಂದು ಯುನೈಟೆಡ್‌ ಫೋರಮ್‌ ಆಫ್ ಬ್ಯಾಂಕ್‌ ಯುನಿಯನ್ಸ್‌ನ ಸಂಚಾಲಕ ಎಂ.ವಿ. ಮುರಳಿ ಮಾಹಿತಿ ನೀಡಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್‌ ನೌಕರರು ಕಳೆದ 2 ವರ್ಷಗಳಿಂದ ಹಲವು ಬಾರಿ ಮುಷ್ಕರ ನಡೆಸಿದ್ದರು. ಹಲವು ಸಾರಿ ಮಾತುಕತೆಯನ್ನು ನಡೆಸಿದ್ದರು. ಅಂತಿಮವಾಗಿ ಕೆಲ ಬೇಡಿಕೆಗಳನ್ನು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ (ಐಬಿಎ) ಒಪ್ಪಿಕೊಂಡಿದೆ.

ಈ ವೇತನ ಹೆಚ್ಚಳ ನಿರ್ಧಾರ ದಿಂದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 8 ಲಕ್ಷ ನೌಕರರ ವೇತನದಲ್ಲಿ ಹೆಚ್ಚಳ ಕಂಡುಬರಲಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮೇಲೆ 4725 ಕೋಟಿ ರೂ. ಹೊರೆಯನ್ನು ಹೊರಿಯನ್ನು ಈ ನಿರ್ಧಾರ ಹೊರಿಸಲಿದೆ.

English summary
Employee unions of public sector banks today withdrew their strike call following an agreement with the management on 15 per cent wage hike. Branches of public sector banks, will be shut alternate Saturdays and will work full time on all other days according to the terms of an agreement between employee unions and the Indian Banks Association.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X