ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆರಸ್ತೆಯಲ್ಲೂ ನೀರೋನೀರು, ಕಣ್ತುಂಬಿಕೊಳ್ಳಿ ಮಳೆಯ ದರ್ಬಾರು

|
Google Oneindia Kannada News

ದೇಶದ ನಾನಾ ಭಾಗದಲ್ಲಿ ಮಳೆಯಾಗುತ್ತಿದೆ. ಇದನ್ನು ಬರೀ ಮಳೆಯಾಗುತ್ತಿದೆ ಎಂದಷ್ಟೇ ಹೇಳಿ ಮುಗಿಸಿದರೆ ಆಗುವುದಿಲ್ಲ. ಯಾಕೆಂದರೆ, ಮಳೆಯ ರಮಣೀಯತೆ, ಭೀಕರತೆ ಜನರ ಅನುಭವಕ್ಕೆ ಬರುತ್ತಿದೆ. ಹೈದರಾಬಾದ್ ನ ಹುಸೇನ್ ಸಾಗರ್ ತುಂಬಿ ಹರಿಯುತ್ತಿರುವ ದೃಶ್ಯ ನೋಡಿದರೆ ಎದೆ ಝಲ್ ಎನಿಸುತ್ತದೆ.

ಇನ್ನು ಅಹ್ಮದಾಬಾದ್ ನಲ್ಲಂತೂ ರಸ್ತೆ ರಸ್ತೆಯಲ್ಲಿ ನೀರೋನೀರು. ಬೈಕ್ ತಳ್ಳಿಕೊಂಡು ಹೋಗುತ್ತಿರುವವರು, ಮೊಳಕಾಲುದ್ದ ನೀರಿನಲ್ಲೇ ನಡೆದು ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿನಿಯರು ಕಾಣಸಿಗುತ್ತಾರೆ. ಅಂದಹಾಗೆ ಬುಧವಾರ ಮಧ್ಯಾಹ್ನ ಬೆಂಗಳೂರಿನಲ್ಲೂ ಒಳ್ಳೆ ಮಳೆಯಾಗಿದೆ. ಸಂಜೆಯಾದರೂ ಮೋಡ ಮುಸುಕಿದಂತೆ ವಾತಾವರಣ ಮುಂದುವರಿದಿದೆ.

ಕರ್ನಾಟಕ ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿದೆ ಭಾರೀ ಮಳೆಕರ್ನಾಟಕ ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿದೆ ಭಾರೀ ಮಳೆ

ಈ ಮಧ್ಯೆ ಬೆಂಗಳೂರಿನಲ್ಲಿ ಡೆಂಗ್ಯೂ, ಚಿಕುನ್ ಗುನ್ಯಾ ಭೀತಿಯಲ್ಲಿ ಬಿಬಿಎಂಪಿ ಕಾರ್ಮಿಕ ಔಷಧ ಸಿಂಪಡಣೆ ಮಾಡುತ್ತಿರುವ ದೃಶ್ಯವೊಂದು ಸೆರೆಯಾಗಿದೆ. ಇನ್ನು ಹಾರುವ ಹಕ್ಕಿಯ ಭಂಗಿಯಲ್ಲಿನ ಯೋಗಾಸನ ಮಾಡುತ್ತಿರುವ ಮಹಿಳೆಯರನ್ನು ಒಮ್ಮೆ ನೋಡಿ.

ಬೆಂಗಳೂರಿನಲ್ಲೆಲ್ಲೂ ವೈರಲ್ ಜ್ವರ: ಡೆಂಗ್ಯೂ, ಚಿಕುನ್ ಗುನ್ಯಾ ಭೀತಿಬೆಂಗಳೂರಿನಲ್ಲೆಲ್ಲೂ ವೈರಲ್ ಜ್ವರ: ಡೆಂಗ್ಯೂ, ಚಿಕುನ್ ಗುನ್ಯಾ ಭೀತಿ

ಇನ್ನು ಮುಂಬೈನಲ್ಲಿ ತನ್ನ ಹೊಸ ಸಿನಿಮಾದ ಟ್ರೇಲರ್ ಬಿಡುಗಡೆಯಲ್ಲಿ ಭಾಗವಹಿಸಿದ ಶ್ರದ್ಧಾ ಕಪೂರ್ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಆಗುವ ಹಾದಿಯಲ್ಲಿನ ಆರಂಭಿಕ ಹಂತವಾದ ಸಿಪಿಟಿ (ಕಾಮನ್ ಪ್ರೊಫೆಷಿಯನ್ಸಿ ಟೆಸ್ಟ್) ಪಾಸಾದವರ ಸಂಭ್ರಮದ ಫೋಟೋ- ಸುದ್ದಿ ನಿಮಗಾಗಿಯೇ ಇಲ್ಲಿವೆ.

ಔಷಧ ಸಿಂಪಡಣೆ

ಔಷಧ ಸಿಂಪಡಣೆ

ಬೆಂಗಳೂರಿನ ಉದ್ಯಾನವೊಂದರಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ನಿಯಂತ್ರಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಮಿಕರೊಬ್ಬರು ಔಷಧ ಸಿಂಪಡಿಸುವಾಗ ಕಂಡುಬಂದ ದೃಶ್ಯವಿದು.

ಹಾರುವ ಹಕ್ಕಿಯ ಭಂಗಿ

ಹಾರುವ ಹಕ್ಕಿಯ ಭಂಗಿ

ಈ ಯೋಗದ ಭಂಗಿ ನೋಡಿ. ಹಾರುವ ಹಕ್ಕಿಯ ರೀತಿಯಲ್ಲಿ ಕಾಣುತ್ತದೆ. ಬೆಂಗಳೂರಿನಲ್ಲಿ ಯೋಗಾಭ್ಯಾಸ ನಿರತರು ಇಂಥದ್ದೊಂದು ಭಂಗಿ ಪ್ರದರ್ಶಿಸಿದರು.

ಹೈದರಾಬಾದ್ ನ ಹುಸೇನ್ ಸಾಗರ್

ಹೈದರಾಬಾದ್ ನ ಹುಸೇನ್ ಸಾಗರ್

ಭಾರೀ ಮಳೆಗೆ ಹೈದರಾಬಾದ್ ನ ಹುಸೇನ್ ಸಾಗರ್ ತುಂಬಿ ಹರಿಯುತ್ತಿದೆ. ಅದು ಹೇಗೆ ಕಾಣುತ್ತದೆ ಎಂಬುದನ್ನು ತಿಳಿಯುವುದಕ್ಕೆ ಈ ಫೋಟೋ ನೋಡಿ.

ರಸ್ತೆಯಲ್ಲೆಲ್ಲ ನೀರೋ ನೀರು

ರಸ್ತೆಯಲ್ಲೆಲ್ಲ ನೀರೋ ನೀರು

ಅಹ್ಮದಾಬಾದ್ ನಲ್ಲಿ ಭಾರೀ ಮಳೆಯಾಗುತ್ತಿದ್ದು, ಬಡಾವಣೆಗಳಲ್ಲಿ ನೀರೋನೀರು. ಅಂಥ ನೀರಿನ ಮಧ್ಯೆಯೂ ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.

ಶ್ರದ್ಧಾ ಪೋಸ್

ಶ್ರದ್ಧಾ ಪೋಸ್

ಮುಂಬೈನಲ್ಲಿ ತಮ್ಮ ಹೊಸ ಸಿನಿಮಾ ಹಸೀನಾ ಪಾರ್ಕರ್ ನ ಟ್ರೇಲರ್ ಬಿಡುಗಡೆ ವೇಳೆಯಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಹೀಗೆ.

ಪಾಸಾದ ಸಂಭ್ರಮ

ಪಾಸಾದ ಸಂಭ್ರಮ

ಕಾಮನ್ ಪ್ರೊಫಿಷಿಯೆನ್ಸಿ ಟೆಸ್ಟ್ (ಸಿಪಿಟಿ) ಅಂದರೆ ಚಾರ್ಟರ್ಡ್ ಅಕೌಂಟೆಂಟ್ ಆಗುವ ಆರಂಭದ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಭೋಪಾಲ್ ನಲ್ಲಿ ಸಂಭ್ರಮ ಪಟ್ಟ ಕ್ಷಣವಿದು.

English summary
Southwest monsoon brings rain to all over India. Here is the photo feature about Bengaluru, bollywood and other event represent with PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X